Advertisement

Alvas ಎಂಜನಿಯರಿಂಗ್‌ ಕಾಲೇಜಿನ ಸಾಧನೆ: ವರ್ಧಿತ ಜಲಜನಕ ಇಂಧನ ಕೋಶಕ್ಕೆ ಪೇಟೆಂಟ್‌

11:54 PM Jan 05, 2024 | Team Udayavani |

ಮೂಡುಬಿದಿರೆ: ವರ್ಧಿತ ಜಲಜನಕ ಇಂಧನ ಕೋಶ (ಹೈಡ್ರೋಜನ್‌ ಪ್ಯುಯೆಲ್‌ ಸೆಲ್‌- ಎಚ್‌ಎಫ್‌ಸಿ) ತಂತ್ರಜ್ಞಾನಕ್ಕಾಗಿ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್‌ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಕಾಲೇಜಿನ ಸಾರಥ್ಯದಲ್ಲಿ ಮೊದಲ ಪೇಟೆಂಟ್‌ (ಸಂಖ್ಯೆ -201941035383) ಪಡೆದಿದೆ.

Advertisement

ಪ್ರಾಧ್ಯಾಪಕ ಡಾ| ರಿಚರ್ಡ್‌ ಪಿಂಟೊ ನೇತೃತ್ವದಲ್ಲಿ ಸಹೋದ್ಯೋಗಿ ಪ್ರಾಧ್ಯಾಪಕರಾದ ಪ್ರೀತಮ್‌ ಕ್ಯಾಸ್ಟೆಲಿನೊ, ಜಯರಾಮ ಅರಸಳಿಕೆ,ಸತ್ಯನಾರಾಯಣ ಮತ್ತು ಮೆಕ್ಯಾನಿಕಲ್‌ ವಿಭಾಗದ ವಿದ್ಯಾರ್ಥಿಗಳಾದ ಸೋಹನ್‌ ಪೂಜಾರಿ, ಸನ್ನಿ ರಾಮ್ನಿವಾಸ್‌ ಶರ್ಮಾ, ಪ್ರಶಾಂತ್‌ ಶೇಖರ್‌ ಪೂಜಾರಿ ಮತ್ತು ಚಿರಾಗ್‌ ಸತೀಶ್‌ ಪೂಜಾರಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಐಐಟಿಬಿ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಬಾಂಬೆ) ಮತ್ತು ಟಿಐಎಫ್‌ಆರ್‌ (ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌, ಮುಂಬಯಿ) ಸಹಯೋಗದಲ್ಲಿ ಅಲ್ಲಿನ ತಜ್ಞರಾದ ಸಿದ್ಧಾರ್ಥ ಪ್ರಕಾಶ್‌ದುತ್ತಗುಪ್ತ ಮತ್ತು ಗಣೇಶ್‌ ಪ್ರಭು ಇವರ ಸಹಕಾರದಲ್ಲಿ ಆವಿಷ್ಕಾರವನ್ನು ಉನ್ನತೀಕರಿಸಲಾಗಿದೆ.

ದುಪ್ಪಟ್ಟು ಶಕ್ತಿಶಾಲಿ
ಪ್ರಸ್ತುತ ಸಾಂಪ್ರದಾಯಿಕ ಜಲಜನಕ ಇಂಧನ ಕೋಶಗಳಿಗೆ ಹೋಲಿಸಿದರೆ ಇದು ದುಪ್ಪಟ್ಟು ವಿದ್ಯುತ್‌ ಶಕ್ತಿ ನಿರ್ಮಾಣ ಮಾಡುವ ಸಾಮರ್ಥ್ಯ ಹೊಂದಿದೆ. ಈ ತಂತ್ರಜ್ಞಾನದಿಂದ ವಿದ್ಯುತ್‌ ಇಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಸಲು ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಕಾರ್ಬನ್‌ ಮುಕ್ತ ಇಂಧನವಾಗಿ ಬಳಸಹುದು.
ಆಳ್ವಾಸ್‌ ಕಾಲೇಜಿನ ಈ ಸಂಶೋಧನಾತ್ಮಕ ಹೆಜ್ಜೆಯು ಸುಸ್ಥಿರ ಇಂಧನ ಅಭಿವೃದ್ಧಿಯಲ್ಲಿ ಬಹುದೊಡ್ಡ ದಾಪುಗಾಲಾಗಿದೆ. ಸಮಾಜದ ಅಭಿವೃದ್ಧಿ ನಿಟ್ಟಿನಲ್ಲಿ ತಂತ್ರಜ್ಞಾನದ ಪರಿವರ್ತನೆಗಾಗಿ ಈ ತಂತ್ರಜ್ಞಾನವನ್ನು ನೀಡಲು ಆಳ್ವಾಸ್‌ ಬದ್ಧವಾಗಿದೆ. ಈ ಆವಿಷ್ಕಾರವನ್ನು ಅಳವಡಿಸಿಕೊಳ್ಳಲು ಹಾಗೂ ಸೇರ್ಪಡೆಗೊಳಿಸಲು ಕಾರ್ಪೊರೇಟ್‌ ವಲಯಕ್ಕೆ ಆಳ್ವಾಸ್‌ ಮಕ್ತ ಆಹ್ವಾನ ನೀಡುತ್ತಿದೆ.

ಪರಿಸರ ಸ್ನೇಹಿ ಇಂಧನ ಶಕ್ತಿಯನ್ನು ಉತ್ತೇಜಿಸುವ ಸಂಸ್ಥೆಯ ಬದ್ಧತೆಯ ನಿಟ್ಟಿನಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರ ಆಶಯಗಳಿಗೆ ಅನುಗುಣವಾಗಿ ವ್ಯವಸ್ಥಾಪಕ ಟ್ರಸ್ಟಿ ವಿವೇಕ್‌ ಆಳ್ವ ಮತ್ತು ಪ್ರಾಂಶುಪಾಲ ಡಾ| ಪೀಟರ್‌ ಫೆರ್ನಾಂಡಿಸ್‌ ಅವರ ಸಕ್ರಿಯ ಹಾಗೂ ನಿರಂತರ ಬೆಂಬಲದಿಂದ ಆವಿಷ್ಕಾರವು ಸಾಕಾರಗೊಂಡಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next