Advertisement

ಇಂದು ಹೆಬ್ರಿಯಲ್ಲಿ ಮನಸೂರೆಗೊಳ್ಳಲಿದೆ ಆಳ್ವಾಸ್‌ ಸಾಂಸ್ಕೃತಿಕ ವೈಭವ

07:35 AM Feb 19, 2019 | Team Udayavani |

ಹೆಬ್ರಿ: ಆಳ್ವಾಸ್‌ ನುಡಿಸಿರಿ – ವಿರಾಸತ್‌ ಘಟಕ ಹೆಬ್ರಿ ಇದರ ಆಶ್ರಯದಲ್ಲಿ ಆಳ್ವಾಸ್‌ನ ಪ್ರತಿಭಾವಂತ 350 ವಿದ್ಯಾರ್ಥಿಗಳಿಂದ ಆಳ್ವಾಸ್‌ ಸಾಂಸ್ಕೃತಿಕ ವೈಭವ ಫೆ.19 ರಂದು ಸಂಜೆ 6 ಗಂಟೆಗೆ  ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ  ನಡೆಯಲಿದೆ ಎಂದು ಹೆಬ್ರಿ ಸಮಿತಿಯ ಅಧ್ಯಕ್ಷ   ನೀರೆ  ಕೃಷ್ಣ  ಶೆಟ್ಟಿ  ಹೇಳಿದರು. ಅವರು ಹೆಬ್ರಿ ಸ.ಪ್ರ.ದರ್ಜೆ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿ ಮಾತನಾಡಿದರು. ಸುಮಾರು 10 ಸಾವಿರಕ್ಕೂ ಮಿಕ್ಕಿ ಜನ ಸೇರುವ ನಿರೀಕ್ಷೆಯಿದ್ದು ಟ್ರಾಫಿಕ್‌ ಜಾಮ್‌ ಆಗದಂತೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಕಾಲೇಜು ರಸ್ತೆಯಲ್ಲಿ ಸಂಪೂರ್ಣ ವಾಹನ ಸಂಚಾರ ನಿಷೇಧಿಸಲಾಗಿದ್ದು ಹೆಬ್ರಿ ಪ.ಪೂ.ಕಾಲೇಜಿನ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

Advertisement


ದೇಶ ವಿದೇಶಗಳ ನೃತ್ಯ ವೈವಿಧ್ಯ:
ಆಕರ್ಷಕವಾದ ಧ್ವನಿ ಬೆಳಕಿನ ಸಂಯೋಜನೆಯೊಂದಿಗೆ ಬೃಹತ್‌ ವೇದಿಕೆಯಲ್ಲಿ ಆಳ್ವಾಸ್‌ನ  ಮಣಿಪುರ, ಶ್ರೀಲಂಕಾ ಮೊದಲಾದ ಪ್ರದೇಶಗಳ ವಿದ್ಯಾರ್ಥಿಗಳಿಂದ ದೇಶ ವಿದೇಶಗಳ ವಿವಿಧ ಪ್ರಕಾರದ ಶಾಸ್ತ್ರೀಯ, ಜಾನಪದ,ಸಾಂಸ್ಕೃತಿಕ ನೃತ್ಯ ವೈವಿಧ್ಯ ನಡೆಯಲಿದೆ. ಕೇರಳದ ಮೋಹಿನಿಯಾಟ್ಟಮ್‌ -ಅಷ್ಟಲಕ್ಷ್ಮೀ, ಬಡಗುತಿಟ್ಟು ಯಕ್ಷಗಾನ- ದಾಸ ದೀಪಾಂಜಲಿ, ಆಂದ್ರದ ಜನಪದ ಬಂಜಾರ ನೃತ್ಯ, ಮಣಿಪುರಿ ಸ್ಟಿಕ್‌ ಡ್ಯಾನ್ಸ್‌, ಶಾಸ್ತ್ರೀಯ ನೃತ್ಯ -ನವದುರ್ಗೆ, ಶ್ರೀಲಂಕಾದ  ಕ್ಯಾಂಡಿಯನ್‌ ನೃತ್ಯ, ಮಲ್ಲಕಂಬ ಮತ್ತು ರೋಪ್‌ ಕಸರತ್ತು, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಮಣಿಪುರಿದೋಲ್‌ ಚಲಮ್‌, ಕಥಕ್‌ ನೃತ್ಯ -ನವರಂಗ್‌, ಪಂಜಾಬಿನ ಬಾಂಗ್ಡ ನೃತ್ಯ, ಪಶ್ಚಿಮ ಬಂಗಾಳದ ಪುರುಲಿಯ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನ -ಅಗ್ರಪೂಜೆ, ಕಿರು ನಾಟಕ- ಅಭಿವೃದ್ಧಿ ಮೊದಲಾದ ಬೆರಗು ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.


ಗೋಷ್ಠಿಯಲ್ಲಿ ಹೆಬ್ರಿ ಘಟಕದ ಕಾರ್ಯದರ್ಶಿ ಸೀತಾನದಿ ವಿಠ್ಠಲ ಶೆಟ್ಟಿ, ಆಳ್ವಾಸ್‌ ಕಾಲೇಜಿನ ಪ್ರತಿನಿಧಿ ನಾಗರಾಜ್‌ ಶೆಟ್ಟಿ, ಹೆಬ್ರಿ ಗ್ರಾ.ಪಂ.ಅಧ್ಯಕ್ಷ ಎಚ್‌. ಕೆ. ಸುಧಾಕರ್‌, ಕಾಲೇಜಿನ ಪ್ರಾಂಶುಪಾಲ ಮಂಜುನಾಥ್‌ ಎಚ್‌.ಎ. ಮೊದಲಾದವರು ಉಪಸ್ಥಿತರಿದ್ದರು.





Advertisement

Udayavani is now on Telegram. Click here to join our channel and stay updated with the latest news.

Next