Advertisement
1. ಹರಿದು ಹೋಗಲಿದ್ದ ಕರ್ನಾಟಕ ರಾಜ್ಯವನ್ನು ಏಕೀಕರಣ ಹೋರಾಟದ ಮೂಲಕ ಒಂದುಗೂಡಿಸುವಲ್ಲಿ ಅನೇಕ ಮಹನೀಯರು ಶ್ರಮಿಸಿದ್ದರು. ಅವರಲ್ಲಿ, ಆಲೂರು ವೆಂಕಟರಾವ್ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ.2. ಅವರು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಇತಿಹಾಸಕಾರ, ಬರಹಗಾರ ಮತ್ತು ಪತ್ರಕರ್ತ ಕೂಡಾ ಹೌದು.
3. ಆಲೂರು ವೆಂಕಟ ರಾವ್ ಅವರನ್ನು “ಕನ್ನಡದ ಕುಲ ಪುರೋಹಿತ’ ಎಂದೇ ಕರೆಯಲಾಗುತ್ತದೆ.
4. ಅವರು ಕನ್ನಡಿಗರನ್ನು ಒಂದುಗೂಡಿಸುವ ಸಲುವಾಗಿಯೇ “ಜಯ ಕರ್ನಾಟಕ’ ಎಂಬ ಪತ್ರಿಕೆಯನ್ನು ಹೊರ ತರುತ್ತಿದ್ದರು.
5. ಅವರು, ಈಗಿನ ವಿಜಯಪುರ ಜಿಲ್ಲೆಯಲ್ಲಿ ಜುಲೈ 12, 1880 ರಂದು ಜನಿಸಿದರು.
6. ಬಿ.ಎ. ಎಲ್.ಎಲ್.ಬಿ ವ್ಯಾಸಂಗ ಮಾಡಿದ ನಂತರ ಭಾರತದ ಹೆಸರಾಂತ ಕ್ರಾಂತಿಕಾರಿ ಸೇನಾನಿ ವಿ.ಡಿ. ಸಾವರ್ಕರ್, ಮತ್ತು ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಸಂಪರ್ಕಕ್ಕೆ ಬಂದರು. ತಿಲಕರ ಆಪ್ತರಲ್ಲಿ ವೆಂಕಟ ರಾವ್‌ಅವರು ಒಬ್ಬರಾದರು.
7. ಆಲೂರರು, ಬಾಲಗಂಗಾಧರ ತಿಲಕರ “ಗೀತ ರಹಸ್ಯ’ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
8. ನವೆಂಬರ್ 1, 1956ರಲ್ಲಿ ಕರ್ನಾಟಕ ರಾಜ್ಯ ಸ್ಥಾಪನೆಯಾದಾಗ ವೆಂಕಟ ರಾಯರು ಹಂಪಿಯ ವಿರೂಪಾಕ್ಷ ದೇವಸ್ಥಾನಕ್ಕೆ ತೆರಳಿ ತಾಯಿ ಭುವನೇಶ್ವರಿಯ ಪೂಜೆ ಮಾಡಿದ್ದರು. ಅಲ್ಲಿಂದಲೇ ಅವರಿಗೆ “ಕನ್ನಡದ ಕುಲಪುರೋಹಿತ’ ಎಂಬ ಬಿರುದು ಬಂದಿದ್ದು.
9. ಕರ್ನಾಟಕ ರಾಜ್ಯ ಘೋಷಣೆಯಾದ ದಿನವನ್ನೇ ನಾವು “ಕರ್ನಾಟಕ ರಾಜ್ಯೋತ್ಸವ’ ಎಂದು ಪ್ರತಿವರ್ಷ ಆಚರಿಸುತ್ತಾ ಬಂದಿದ್ದೇವೆ.
10. ಆಲೂರು ವೆಂಕಟರಾಯರು, ಫೆಬ್ರವರಿ 24, 1964ರಂದು ವಿಧಿವಶರಾದರು.