ಆಲೂರು: ತಾಲೂಕಿನ ಎರಡು ಹೋಬಳಿಗಳ ಧಾರ್ಮಿಕ ಸಂಬಂಧ ಬೆಸೆಯುವ ಅಡಿಬೈಲು ಗ್ರಾಮದ ರಂಗನಬೆಟ್ಟದ ಐತಿಹಾಸಿಕ ಜಾತ್ರೆ ಫೆ.24, 25ರಂದು ನಡೆಯಲಿದೆ. ಮೊದಲ ದಿನ ಶನಿವಾರ ದೊಡ್ಡ ಹರಿಸೇವೆ, ಭಾನುವಾರ ಹಕ್ಕಿನ ಉತ್ಸವ ನಡೆಯಲಿದೆ.
Advertisement
ಮಂಗಳವಾರ ಬಿಂದಿಗಮ್ಮ ಕಳಸ ಹೊರುವ ಪೂಜಾರಿಯವರಿಗೆ ಕೇಶಮುಂಡನ, ಹಸೆ ಹಾಕಿ ಕಾಸೆ ವೇಷದೊಂದಿಗೆ ದೇವಾಲಯಕ್ಕೆ ಕಳುಹಿಸಿ ಕೊಡಲಾಗುತ್ತದೆ. ಇವರು ಜಾತ್ರಾ ಮಹೋತ್ಸವ ಮುಗಿಯುವವರೆಗೂ ಹಣ್ಣ-ಹಂಪಲು ಬಿಟ್ಟರೆಬೇರೆನನ್ನೂ ಸೇವಿಸದೇ ಪೂಜಾ ಕೈಂಕರ್ಯದಲ್ಲಿ ತೊಡಗುತ್ತಾರೆ. ಶ್ರೀರಂಗನಾಥಸ್ವಾಮಿಗೂ ಬಿಂದಿಗಮ್ಮನಿಗೂ ಮದುವೆ ಮಾಡಿ ಆ ವೈಭವವನ್ನು ಆನಂದಿಸುವುದು ಈ ಜಾತ್ರೆಯ ವಿಶೇಷವಾಗಿದೆ.
Related Articles
Advertisement
ಅಡ್ಡೆ ಉತ್ಸವ: ಭಾನುವಾರ ಬೆಟ್ಟದ ಮೇಲೆ ಹಗಲು ಜಾತ್ರೆ, ಸೋಮವಾರ ಹೇಮಾವತಿ ನದಿ ನೀರಿನಿಂದ ಅಭಿಷೇಕದೊಂದಿಗೆ ಜಾತ್ರಾ ವಿಶೇಷ ಪೂಜಾ ಕಾರ್ಯಕ್ಕೆ ನಾಂದಿ ಹಾಡಲಾಗುತ್ತದೆ.
ಜಾತ್ರೆ ಫೆ.24 ರಂದು ಭರತೂರು ಹೊಳೆ ಬದಿಯಲ್ಲಿ ಮತ್ತು 25 ರಂದು ಬೆಟ್ಟದ ಮೇಲೆ ನಡೆಯುತ್ತದೆ. ಆಲೂರಿನಿಂದ 18 ಕಿ. ಮೀ. ಮಗ್ಗೆ- ರಾಯರಕೊಪ್ಪಲು ಮಾರ್ಗವಾಗಿ ಪ್ರತಿದಿನ ಸಾರಿಗೆ ಬಸ್ ವ್ಯವಸ್ಥೆ ಇರುತ್ತದೆ.●ತನುಗೌಡ, ಗ್ರಾಮದ ಮುಖಂಡ ಜಾತ್ರೆ ನಡೆಯುವ ಅಡಿಬೈಲು ವ್ಯಾಪ್ತಿ ಕಾಡಾನೆಗಳ ಹಾವಳಿ ಪ್ರದೇಶವಾಗಿದೆ. ಜಾತ್ರೆ ನಡೆಯುವ ಮೂರು ದಿನಗಳ ಕಾಲ ಮುಂಜಾಗ್ರತೆಯಿಂದ ಶಸ್ತ್ರಸಜ್ಜಿತ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ಭಕ್ತರು ಆತಂಕಕ್ಕೊಳಗಾಗದೇ ಧೈರ್ಯದಿಂದ
ಜಾತ್ರೆಯಲ್ಲಿ ಪಾಲ್ಗೊಳ್ಳಲಿ.
●ಬಿ.ಬಿ.ಯತೀಶ್, ವಲಯ ಅರಣ್ಯಾಧಿಕಾರಿ, ಆಲೂರು