Advertisement
ಕುಂದಾಪುರ: ಇನ್ನೇನು 17 ದಿನಗಳಲ್ಲಿ 2019-20 ಆರ್ಥಿಕ ವರ್ಷಾಂತ್ಯವಾಗುತ್ತದೆ. ಅದರಲ್ಲಿ 13 ದಿನ ಸರಕಾರಿ ಕೆಲಸದ ದಿನಗಳಾಗಿವೆ. ಅಷ್ಟು ದಿನಗಳಲ್ಲಿ ಕುಂದಾಪುರ, ಬೈಂದೂರು ತಾಲೂಕಿನ 65 ಪಂಚಾಯತ್‌ಗಳು 43.5 ಕೋ.ರೂ.ಗಳ ಅಭಿವೃದ್ಧಿ ಕಾರ್ಯ ಮುಗಿಸಬೇಕು!. ಕನಿಷ್ಠ ಪಕ್ಷ ಆರಂಭಿಸದೇ ಇದ್ದರೂ ದೊಡ್ಡ ಮೊತ್ತದ ಅನುದಾನ ಖೋತಾ ಆಗುತ್ತದೆ.
5 ವರ್ಷಗಳಿಂದ ಇದ್ದ 14ನೇ ಹಣಕಾಸು ಯೋಜನೆಯ ಅವಧಿ ಈ ವರ್ಷಕ್ಕೆ ಮುಕ್ತಾಯವಾಗುತ್ತದೆ. ನಂತರ 15ನೇ ಹಣಕಾಸು ಯೋಜನೆ ಆರಂಭವಾಗುತ್ತದೆ. 14ನೇ ಹಣಕಾಸು ಯೋಜನೆಯಲ್ಲಿ ಅವಿಭಜಿತ ಕುಂದಾಪುರ ತಾಲೂಕಿನ ಗ್ರಾಮ ಪಂಚಾಯತ್‌ಗಳಿಗೆ ಬಂದ ಅನುದಾನದ ಪೈಕಿ ಕಳೆದ ವರ್ಷ ಉಳಿಕೆಯಾದ ಹಾಗೂ ಈ ವರ್ಷಕ್ಕಾಗಿ ಬಂದ ಅನುದಾನದ ಪೈಕಿ ಫೆಬ್ರವರಿ ಅಂತ್ಯದವರೆಗೆ ಖರ್ಚಾಗಿ ಇನ್ನೂ 43.5 ಕೋ.ರೂ. ಉಳಿಕೆಯಾಗಿದೆ. ಇದನ್ನು ಮಾರ್ಚ್ ಅಂತ್ಯದ ವೇಳೆ ಮುಗಿಸಬೇಕಾದ ಜವಾಬ್ದಾರಿ ಪಂಚಾಯತ್‌ಗಳದ್ದಾಗಿದೆ. ಅಭಿವೃದ್ಧಿಗಾಗಿ
ಪಂಚಾಯತ್‌ಗಳಿಗೆ ಬರುವ ಅನುದಾನ ಅಭಿವೃದ್ಧಿ ಕಾರ್ಯಗಳಿಗಾಗಿ. ಇದರಲ್ಲಿ ಸರಕಾರದ ಮಾನದಂಡದಂತೆ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಶೇಕಡಾವಾರು ಅನುದಾನ ತೆಗೆದಿರಿಸಿ ಉಳಿಕೆ ಮೊತ್ತವನ್ನು ಅಭಿವೃದ್ಧಿ ಕಾರ್ಯಕ್ಕೆ ವಿನಿಯೋಗಿಸಬೇಕು. ಪ್ರತಿ ತಿಂಗಳು ಈ ಕುರಿತು ತಾ.ಪಂ., ಜಿ.ಪಂ.ಗೆ ವರದಿ ಸಲ್ಲಿಸಬೇಕು. ಹಾಗೆ ಫೆಬ್ರವರಿ ಅಂತ್ಯದವರೆಗೆ ಖರ್ಚಾಗದೇ ಉಳಿದ ಅನುದಾನ ಇದಾಗಿದ್ದು ಈ ಪೈಕಿ ಕೆಲವು ಪಂಚಾಯತ್‌ಗಳು ಖರ್ಚಾಗಿದ್ದರೂ ಮಾಹಿತಿ ನೀಡದೆಯೂ ಈ ಮೊತ್ತ ಹೆಚ್ಚಾಗಿರಬಹುದು. ಇನ್ನು ಕೆಲವು ಮಾರ್ಚ್‌ನಲ್ಲಿ ಬಿಲ್ ಆಗುವ ಕಾರಣ ಕಾಮಗಾರಿ ಆದರೂ ಮೊತ್ತ ಬಾಕಿಯಾಗಿರಬಹುದು. ಕಾಮಗಾರಿಗೆ ಕ್ರಿಯಾ ಯೋಜನೆಯೂ ಆಗದೇ, ಮಂಜೂರಾತಯೂ ಆಗದೇ ಅನುದಾನ ಬಾಕಿಯಾಗಿದ್ದರೆ ಅಂತಹ ಅನುದಾನ ಮರಳಿ ಸರಕಾರದ ಖಜಾನೆಗೇ ಹೋಗುತ್ತದೆ. ಹಾಗಾದಾಗ ಸರಕಾರ ನೀಡಿದ ಅಭಿವೃದ್ಧಿ ಅನುದಾನ ಬಳಸುವಲ್ಲಿ ಪಂಚಾಯತ್‌ಗಳು ವಿಫಲವಾಗಿದೆ ಎಂದೇ ತೀರ್ಮಾ ನಿಸಬೇಕಾಗುತ್ತದೆ. ಇನ್ನೇನು ಪಂಚಾಯತ್ ಚುನಾವಣೆಗೆ ಸಿದ್ಧತೆಗಳಾಗುತ್ತಿವೆ. ಹಾಗಾಗಿ ಸರಕಾರದ ಅನುದಾನ ಏನು ಮಾಡಿದಿರಿ ಎಂದು ಕೇಳಲು ಜನ ಸಜ್ಜಾಗಿರುವ ವೇಳೆಯಲ್ಲಿಯೇ ಈ ಅಂಕಿಅಂಶಗಳು ಅಚ್ಚರಿ ಮೂಡಿಸುವಂತಿವೆ.
Related Articles
ಅಮಾಸೆಬೈಲು 1.22, ಕೋಟೇಶ್ವರ 1.24, ಜಡ್ಕಲ್ 1.19, ಗೋಳಿಹೊಳೆ 1, ನಾಡ 1.56, ಯಡ್ತರೆ 1.11, ಬೈಂದೂರು 1.39, ಸಿದ್ದಾಪುರ 1.03, ಉಪ್ಪುಂದ 1.56 ಕೋ.ರೂ. ಅನುದಾನ ಹಾಗೆಯೇ ಇದ್ದರೆ, ಶಿರೂರು 97.9, ಪಡುವರಿ 73.36, ಬಿಜೂರು 86.52, ಕೊಲ್ಲೂರು 80.82, ಕಾಲೊ¤àಡು 79.3, ಆಲೂರು 73.94, ಹಕ್ಲಾಡಿ 74.04, ಕೆರಾಡಿ 88.53, ಆಜ್ರಿ 88.3, ಹೊಸಂಗಡಿ 75.35, ಶಂಕರನಾರಾಯಣ 93.58, ಅಂಪಾರು 72.38, ಹೊಂಬಾಡಿ ಮಂಡಾಡಿ 79.3, ಗಂಗೊಳ್ಳಿ 92.57 ಲಕ್ಷ ರೂ. ಬಾಕಿ ಇದೆ. ಇನ್ನು ಖರ್ಚು ಮಾಡದೇ 50ರಿಂದ 70 ಲಕ್ಷ ರೂ.ವರೆಗೆ ಬಾಕಿ ಇರಿಸಿಕೊಂಡ ಪಂಚಾಯತ್‌ಗಳೆಂದರೆ ಕೆರ್ಗಾಲ್, ಕಂಬದಕೋಣೆ, ಕಿರಿಮಂಜೇಶ್ವರ, ನಾವುಂದ, ಹೇರೂರು, ಮರವಂತೆ, ಹಳ್ಳಿಹೊಳೆ, ತಲ್ಲೂರು, ಹಟ್ಟಿಯಂಗಡಿ, ಕಾವ್ರಾಡಿ, ಹಂಗಳೂರು, ಬೀಜಾಡಿ, ಕುಂಭಾಶಿ, ತೆಕ್ಕಟ್ಟೆ, ಕಾಳಾವರ, ಹಾರ್ದಳ್ಳಿ ಮಂಡಳ್ಳಿ, ಹಾಲಾಡಿ, ಬೆಳ್ವೆ, ಗುಲ್ವಾಡಿ, ಇಡೂರು ಪಂಚಾಯತ್‌ಗಳು.
Advertisement
ಖರ್ಚು ಅನಿವಾರ್ಯಒಟ್ಟು 43,50,53,335 ರೂ. ಫೆಬ್ರವರಿ ಅಂತ್ಯದವರೆಗಿನ ಮಾಹಿತಿಯಂತೆ ಖರ್ಚಾಗದೇ ಉಳಿಕೆಯಾಗಿದೆ. ಈ ಪೈಕಿ 2018-19ನೇ ಸಾಲಿನಲ್ಲಿ ಖರ್ಚಾಗದೇ ಉಳಿಕೆಯಾದ ಅನುದಾನವೂ ಸೇರಿದೆ. 2019ರಲ್ಲಿ 2017-18ರಲ್ಲಿ ಕೆಲವೆಡೆ ಕ್ರಿಯಾಯೋಜನೆ ಆಗದೆ 10 ಕೋ.ರೂ.ಗಳ ಕಾಮಗಾರಿ ನಡೆಯದೇ 2018-19ಕ್ಕೆ ಆ ವರ್ಷದ 11 ಕೋ.ರೂ. ಸೇರಿತ್ತು. ಈ ಬಾರಿಯೂ ಹಿಂದಿನ ವರ್ಷದ ಉಳಿಕೆ ಬಾಬ್ತು ಸೇರಿದೆ. ಆದರೆ 14ನೇ ಹಣಕಾಸು ಯೋಜನೆ ಈ ವರ್ಷ ಮುಗಿಯುವ ಕಾರಣ ಅನುದಾನ ಉಳಿಸುವಂತಿಲ್ಲ. ಕಾಮಗಾರಿ ಆರಂಭಿಸಲೇಬೇಕು. ಕಾಮಗಾರಿಗೆ ಪ್ರಸ್ತಾವನೆಯೂ ಸಲ್ಲಿಕೆಯಾಗದೇ ಇದ್ದರೆ, ಮಂಜೂರಾತಿಯೇ ಆಗದಿದ್ದರೆ ಅನುದಾನ ಮರಳಿ ಹೋಗಲಿದೆ. ಈ ಸವಾಲನ್ನು ಗ್ರಾಮ ಪಂಚಾಯತ್ ಸದಸ್ಯರು ಸಮರ್ಥವಾಗಿ ಸ್ವೀಕರಿಸಿ ಸರಕಾರಿ ಕೆಲಸದ ದಿನಗಳಾದ 13 ದಿನಗಳಲ್ಲಿ ಅನುದಾನ ಬಳಕೆ ಮಾಡಬೇಕಿದೆ. ದೊಡ್ಡ ಮೊತ್ತ
ಗುಜ್ಜಾಡಿ, ಚಿತ್ತೂರು, ವಂಡ್ಸೆ, ಕರ್ಕುಂಜೆ, ಬಳ್ಕೂರು, ಬಸ್ರೂರು, ಆನಗಳ್ಳಿ, ಕೋಣಿ, ಬೇಳೂರು, ಮೊಳಹಳ್ಳಿ, ಹೆಂಗವಳ್ಳಿ, ಹೊಸಾಡು, ಕಟ್‌ಬೆಲೂ¤ರು, ಕಂದಾವರ, 74 ಉಳ್ಳೂರು, ಯಡಮೊಗೆ, ಗೋಪಾಡಿ, ಕೊರ್ಗಿ ಈ 18 ಪಂಚಾಯತ್‌ಗಳು 50 ಲಕ್ಷ ರೂ.ಗಿಂತ ಕಡಿಮೆ ಅನುದಾನ ಉಳಿಸಿಕೊಂಡಿವೆ. ಇತರ ಎಲ್ಲ ಪಂಚಾಯತ್‌ಗಳಲ್ಲಿ 50 ಲಕ್ಷ ರೂ.ಗಿಂತ ಹೆಚ್ಚು ಮೊತ್ತ ಬಾಕಿಯಾಗಿದೆ. ಅಮಾಸೆಬೈಲು, ಕೋಟೇಶ್ವರ, ಜಡ್ಕಲ್, ಗೋಳಿಹೊಳೆ, ನಾಡ, ಯಡ್ತರೆ, ಬೈಂದೂರು, ಸಿದ್ದಾಪುರ, ಉಪ್ಪುಂದ ಈ 9 ಪಂಚಾಯತ್‌ಗಳಲ್ಲಿ 1 ಕೋ.ರೂ.ಗೂ ಮಿಕ್ಕಿ ಅನುದಾನ ಅಭಿವೃದ್ಧಿಗಾಗಿ ಖರ್ಚಾಗಿಲ್ಲ. ಲೆಕ್ಕ ಪೂರ್ಣವಾಗಿಲ್ಲ
ಉಳಿಕೆಯಾದ ಮೊತ್ತದಲ್ಲಿಯೂ ಒಂದಷ್ಟು ಕೆಲಸಗಲಾಗಿದ್ದು ಬಿಲ್ ಆಗಲು ಬಾಕಿ ಇರಬಹುದು. ಇನ್ನೊಂದಷ್ಟು ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಅನುದಾನ ಬಳಕೆ ಸರಕಾರದ ಮಾರ್ಗಸೂಚಿಯಂತೆ ಮಾಡಲಾಗುವುದು.
-ಕೇಶವ ಶೆಟ್ಟಿಗಾರ್, ಕಾರ್ಯನಿರ್ವಹಣಾಧಿಕಾರಿ, ತಾ.ಪಂ.ಕುಂದಾಪುರ ಲಕ್ಷ್ಮೀ ಮಚ್ಚಿನ