Advertisement

7 ವರ್ಷವಾದರೂ ಉದ್ಯಾನವನ ಕಾಮಗಾರಿ ಪೂರ್ಣಗೊಂಡಿಲ್ಲ

11:35 PM Oct 17, 2019 | Sriram |

ಕಾರ್ಕಳ: ಪುರಸಭಾ ವ್ಯಾಪ್ತಿಯ ಮೊನೆಯಂತಿರುವ ಗ್ರಾಮೀಣ ಭಾಗದ ಕೊನೆಯಂತಿರುವ ಕಾರ್ಕಳ ಪುರಸಭೆಯ ಒಂದನೇ ವಾರ್ಡ್‌ ಬಂಗ್ಲೆಗುಡ್ಡೆ. ಬಹುತೇಕವಾಗಿ ಕಲ್ಲುಬಂಡೆಗಳನ್ನೇ ಹೊಂದಿರುವ ಈ ವಾರ್ಡ್‌ನಲ್ಲಿ ಸುಮಾರು 250ಕ್ಕಿಂತಲೂ ಅಧಿಕ ಮನೆಗಳಿವೆ. ಎಲ್ಲ ಜಾತಿ, ಧರ್ಮಗಳ ಜನತೆ ಇರುವ ಈ ವಾರ್ಡ್‌ನ ಹೆಚ್ಚಿನ ಭಾಗ ಡೀಮ್ಡ್ ಫಾರೆಸ್ಟ್‌ಗೆ ಒಳಪಟ್ಟಿದೆ. ಹೀಗಾಗಿ ಮನೆ ಮಾಡಿಕೊಂಡಿರುವ ಅನೇಕರಿಗೆ ಹಕ್ಕುಪತ್ರ ಲಭಿಸಿಲ್ಲ. ಇದರಿಂದಾಗಿ ಮೂಲ
ಸೌಕರ್ಯಗಳಿಂದ ವಾರ್ಡ್‌ ಜನತೆ ವಂಚಿತರಾಗಿದ್ದಾರೆ. 10 ಮನೆಗಳಿಗೆ ವಿದ್ಯುತ್‌ ಸಂಪರ್ಕವೂ ಲಭಿಸಿಲ್ಲ

Advertisement

ಆಮೆಗತಿಯಲ್ಲಿ ಪಾರ್ಕ್‌ ಕಾಮಗಾರಿ
ಬಂಡ್ಲೆಗುಡ್ಡೆ ಕಜೆ ಒಂದನೇ ವಾರ್ಡ್‌ನ 1 ಎಕರೆ ವಿಸ್ತೀರ್ಣದಲ್ಲಿ ಉದ್ಯಾನವನವೊಂದು ನಿರ್ಮಾಣ ವಾಗುತ್ತಿದೆ. 7 ವರ್ಷಗಳ ಹಿಂದೆ 9 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ದೊರೆತಿದ್ದಾಗ್ಯೂ ಇನ್ನೂ ಪೂರ್ಣಗೊಂಡಿಲ್ಲ. ಆ ಬಳಿಕ ಪುರಸಭೆ ಸಾಮಾನ್ಯ ನಿಧಿಯಿಂದ 7 ಲಕ್ಷ ರೂ., ಸರಕಾರದ ವಿವಿಧ ಯೋಜನೆಗಳಿಂದ 5 ಲಕ್ಷ ರೂ. ಮಂಜೂರುಗೊಂಡಿದ್ದರೂ ಕಾಮಗಾರಿ ಮಾತ್ರ ಆಮೆಗತಿಯಲ್ಲೇ ಸಾಗುತ್ತಿದೆ.

ಮಹಾತ್ಮಾಗಾಂಧಿ ಪುತ್ಥಳಿ, ಮಕ್ಕಳ ಆಟಿಕೆಗಾಗಿ ಹೆಚ್ಚಿನ ಅನುದಾನದ ಅಗತ್ಯವಿದ್ದು, 10 ಲಕ್ಷ ರೂ. ಬೇಡಿಕೆಯ ಪ್ರಸ್ತಾವನೆಯನ್ನು ಪುರಸಭೆಗೆ ಸಲ್ಲಿಸಲಾಗಿದೆ ಎನ್ನುತ್ತಾರೆ ಇಲ್ಲಿನ ವಾರ್ಡ್‌ ಸದಸ್ಯ ಅಶ³ಕ್‌ ಅಹಮ್ಮದ್‌.

ಅಭಿವೃದ್ಧಿ ಕಾರ್ಯ
ಈ ವಾರ್ಡ್‌ನಲ್ಲೊಂದು ಸಮುದಾಯ ಭವನ ನಿರ್ಮಾಣವಾಗಿದೆ. ನಳ್ಳಿ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಇತ್ತೀಚೆಗೆ ನಗರೋತ್ಥಾನ ಯೋಜನೆಯಡಿ 17 ಲ.ರೂ. ವೆಚ್ಚದಲ್ಲಿ ರಸ್ತೆ ಕಾಂಕ್ರೀಟ್‌ಗೊಂಡಿದ್ದು 5 ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣವಾಗಿದೆ.

ಆಗಬೇಕಾದ ಕಾರ್ಯ
ಇದಕ್ಕೆ ಸಾರ್ವಜನಿಕ ಶೌಚಾಲಯದ ಅಗತ್ಯವಿದೆ. ಇದಕ್ಕಾಗಿ 10 ಲಕ್ಷ ರೂ.
ಮಂಜೂರುಗೊಂಡಿದ್ದರೂ ಹಲವು ಗೊಂದಲಗಳಿಂದಾಗಿ ಸ್ಥಗಿತವಾಗಿದೆ. ಕಿರಿದಾದ ರಸ್ತೆ ಹೊಂದಿರುವ ಇಲ್ಲಿಯ ಒಳರಸ್ತೆ ಅಭಿವೃದ್ಧಿಯಾಗಬೇಕಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಟ್ಯಾಂಕ್‌ ನಿರ್ಮಾಣ, ಪರಿಶಿಷ್ಟ ಜಾತಿ – ಪಂಗಡಗಳ ಕಾಲನಿ ಅಭಿವೃದ್ಧಿಯಾಗಬೇಕಿದೆ.

Advertisement

ಹಕ್ಕುಪತ್ರ ಲಭಿಸಿಲ್ಲ
ಒಂದನೇ ವಾರ್ಡ್‌ನ ಕೆಲ ಭಾಗ ಡೀಮ್ಡ್ ಫಾರೆಸ್ಟ್‌ ವ್ಯಾಪ್ತಿಗೆ ಒಳಪಟ್ಟಿದೆ ಎನ್ನಲಾಗುತ್ತಿದೆ. ಸರ್ವೆ ನಂಬರ್‌ 175ರಲ್ಲಿ ಸುಮಾರು 60 ಮನೆಗಳಿದ್ದು ಅವರಿಗೆ ಹಕ್ಕು ಪತ್ರ ದೊರೆತಿಲ್ಲ. ಹೀಗಾಗಿ ಮೂಲ ಸೌಕರ್ಯ ಪಡೆದುಕೊಳ್ಳಲು ಅವರಿಂದ ಸಾಧ್ಯವಾಗುತ್ತಿಲ್ಲ. ಸಮಸ್ಯೆ ಬಗೆಹರಿಸುವಂತೆ ಈ ಹಿಂದಿನ ಅರಣ್ಯ ಸಚಿವರಾದ ಬಿ. ರಮಾನಾಥ ರೈ ಅವರ ಗಮನಕ್ಕೆ ತರಲಾಗಿತ್ತು. ಆನಂತರ ಅರಣ್ಯ ಇಲಾಖೆಯವರು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೂ ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ಲಭಿಸಿಲ್ಲ.

50 ಲ.ರೂ. ಅಂದಾಜುಪಟ್ಟಿ ತಯಾರಿ
3 ವರ್ಷಗಳ ಹಿಂದೆ ನಿರ್ಮೂಲನ ಮಂಡಳಿಯವರು ಕೊಳಚೆ ಪ್ರದೇಶ ಅಭಿವೃದ್ಧಿಗಾಗಿ 50 ಲಕ್ಷ ರೂ. ಅಂದಾಜು ಪಟ್ಟಿ ತಯಾರಿಸಿ, ಮೋರಿ, ಒಳಚರಂಡಿ ರಚನೆ ಮಾಡುತ್ತೇವೆ ಎಂದವರು ಆ ಬಳಿಕ ಇತ್ತ ಬಂದಿಲ್ಲ.
– ಅಶ³ಕ್‌ ಅಹಮ್ಮದ್‌ , ವಾರ್ಡ್‌ ಸದಸ್ಯರು
ಕಾಂಕ್ರೀಟ್‌ಗೊಳ್ಳಬೇಕಿದೆ.

ಇಲ್ಲಿನ ಒಳಚರಂಡಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಾಗಿದೆ. ಕಿರಿದಾದ ಒಳ ರಸ್ತೆಗಳು ವಿಸ್ತರಣೆಯೊಂದಿಗೆ ಕಾಂಕ್ರೀಟ್‌ಗೊಳ್ಳಬೇಕಿದೆ.
-ವಿಘ್ನೇಶ್‌ ಪ್ರಸಾದ್‌, ಸ್ಥಳೀಯರು

-ರಾಮಚಂದ್ರ ಬರೆಪ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next