Advertisement

ಪೆಟ್ರೋಲಿಯಂಗೆ ಪರ್ಯಾಯ: ಎಥನಾಲ್‌, ಮೆಥನಾಲ್‌ ಬಳಕೆ

01:36 PM Dec 17, 2017 | |

ಸುರತ್ಕಲ್‌: ಪರ್ಯಾಯ ಇಂಧನ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯುವ ನಿಟ್ಟಿನಲ್ಲಿ ಶಿಕ್ಷಣವೇತ್ತರು, ವಿಜ್ಞಾನಿಗಳು, ತಂತ್ರಜ್ಞರನ್ನು ಒಂದೇ ವೇದಿಕೆಗೆ ತಂದು ಪ್ರೋತ್ಸಾಹ, ಸಹಯೋಗ ನೀಡಿ ಭವಿಷ್ಯದಲ್ಲಿ ಬದಲಾವಣೆಗೆ ಬೇಕಾದ ಮಾರ್ಗೋಪಾಯ ಶೋಧಿಸಲಾಗುತ್ತಿದೆ. ದೇಶದಲ್ಲಿ ಪೆಟ್ರೋಲಿಯಂ ತೈಲಕ್ಕೆ ಪರ್ಯಾಯವಾಗಿ ಎಥನಾಲ್‌, ಮೆಥನಾಲ್‌ ಬಳಕೆಯ ಕುರಿತು ಸಂಶೋಧನೆಗಳು ಪ್ರಗತಿಯಲ್ಲಿದ್ದು, ಬಳಕೆಗೆ ಸಿಗುವ ಹಂತದಲ್ಲಿವೆ ಎಂದು ಎನ್‌ಐಟಿಐ ಆಯೋಗದ ಸದಸ್ಯ, ಪದ್ಮಭೂಷಣ ಡಾ| ವಿ.ಕೆ. ಸಾರಸ್ವತ್‌ ನುಡಿದರು. ದಿ ಕಂಬ್ಯೂಶನ್‌ ಇನ್‌ಸ್ಟಿಟ್ಯೂಟ್‌ ಇಂಡಿಯನ್‌ ಸೆಕ್ಷನ್‌ (ಸಿಐಐಎಸ್‌) ವತಿಯಿಂದ ಇಂಟರ್ನಲ್‌ ಕಂಬ್ಯೂಶನ್‌ ಎಂಜಿನ್‌ಗಳು ಮತ್ತು ಕಂಬ್ಯೂಶನ್‌ ಕುರಿತಾಗಿ ಎನ್‌ಐಟಿಕೆಯಲ್ಲಿ ಆಯೋಜನೆಗೊಂಡಿರುವ ತ್ರಿದಿನ ರಾಷ್ಟ್ರೀಯ ಕಾರ್ಯಾಗಾರವನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

Advertisement

ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ ಲಿ. ಚೇರ್‌ಮನ್‌  ಸಂಜೀವ ಸಿಂಗ್‌, ಎನ್‌ಐಟಿಕೆ ನಿರ್ದೇಶಕ ಪ್ರೊ| ಕೆ. ಉಮಾ ಮಹೇಶ್ವರ ರಾವ್‌, 25ನೇ ಎನ್‌ಸಿಐಸಿಇಸಿಯ ಚೇರ್‌ಮನ್‌ ಪ್ರೊ| ನರೇಂದ್ರನಾಥ್‌, ಸಿಐಐಎಸ್‌ ಕಾರ್ಯದರ್ಶಿ ಪಿ.ಕೆ. ಪಾಂಡೆ, ಸಂಯೋಜಕ ಕಾರ್ಯದರ್ಶಿ ಡಾ| ಕುಮಾರ್‌ ಜಿ.ಎನ್‌. ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಾಗಾರವು ಡಿ. 17ರ ವರೆಗೆ ನಡೆಯಲಿದ್ದು, ಐಐಎಸ್‌ಸಿ, ಐಐಟಿ, ಎನ್‌ಐಟಿ ಸಹಿತ ದೇಶದ ವಿವಿಧ ಭಾಗಗಳಿಂದ ವಿಜ್ಞಾನಿಗಳು, ತಂತ್ರಜ್ಞರು, ಶೈಕ್ಷಣಿಕ ಕೇಂದ್ರಗಳ ಮುಖ್ಯಸ್ಥರು ಆಗಮಿಸಿದ್ದಾರೆ. ಸುಮಾರು 104 ಸಂಶೋಧನಾ ಪ್ರಬಂಧಗಳು ಮಂಡನೆಯಾಗಲಿವೆ.

ಪರ್ಯಾಯ ಇಂಧನ ಮೆಥನಾಲ್‌: ಡಾ| ವಿ. ಕೆ. ಸಾರಸ್ವತ್‌ ಭವಿಷ್ಯದಲ್ಲಿ ಪರ್ಯಾಯ ಇಂಧನವಾಗಿ ಮೆಥನಾಲ್‌ ಬಳಕೆ ಅಗತ್ಯ. ಅಡುಗೆ ಅನಿಲದ ಬದಲು ಇದರ ಉಪಯೋಗ ಸಾಧ್ಯ. ಸ್ವೀಡಿಷ್‌ ಸಂಸ್ಥೆಯೊಂದು ಮೆಥನಾಲ್‌ ಬಳಕೆ ಸಾಧ್ಯವಾಗುವ ಸ್ಟವ್‌ಉತ್ಪಾದನ ಘಟಕವನ್ನು ದೇಶದಲ್ಲಿ ಸ್ಥಾಪಿಸಿದೆ ಎಂದು ಡಾ| ವಿ. ಕೆ. ಸಾರಸ್ವತ್‌ ಹೇಳಿದರು.

ಐಸಿ ಎಂಜಿನ್‌ಗಳು ಮತ್ತು ಕಂಬ್ಯೂಶನ್‌ ಕಾರ್ಯಾಗಾರದಲ್ಲಿ ಭಾಗವಹಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ದರು. ಮೆಥನಾಲ್‌ ಬಳಕೆಯಿಂದ ಶೇ. 20ರಷ್ಟು ಅಡುಗೆ ಅನಿಲ ಉಳಿತಾಯವಾಗಲಿದೆ. ಉಜ್ವಲ ಯೋಜನೆಯಿಂದ ಅಡುಗೆ ಅನಿಲಕ್ಕೆ ಬೇಡಿಕೆ ಹೆಚ್ಚಲಿದ್ದು, ಆಮದು ಪ್ರಮಾಣವೂ ಏರಿಕೆಯಾಗುವ ಸಾಧ್ಯತೆಯಿದೆ. ಆದರೆ ಕಚ್ಚಾ ತೈಲ, ಇಂಧನ ಆಮದಿನಿಂದ ದೇಶದ ಆರ್ಥಿಕ ಹೊರೆ ಹೆಚ್ಚುತ್ತದೆ. ಇದಕ್ಕೆ ಪರಿಹಾರವಾಗಿ ಪರ್ಯಾಯ ಇಂಧನ ಮೆಥನಾಲ್‌ ಮಿಶ್ರಿತ ತೈಲದ ಬಳಕೆ ವೆಚ್ಚವನ್ನು ತಗ್ಗಿಸಲಿದೆ. ನೈಜೀರಿಯ ಮೆಥನಾಲ್‌ ಬಳಕೆಯಲ್ಲಿ ಯಶಸ್ವಿಯಾಗಿದೆ ಎಂದರು.

Advertisement

ಸಮುದ್ರ ತೀರದಲ್ಲಿ ಅನೇಕ ಪರ್ಯಾಯ ಖನಿಜಗಳು ಹುದುಗಿದ್ದು, ಇವನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇರಿಸಬೇಕಿದೆ. ವಿದೇಶಗಳಿಗೆ ಇದರ ರಫ‌¤ನ್ನು ನಿಷೇಧಿ ಸಿ ಅಪರೂಪದ ಖನಿಜಗಳನ್ನು ಸಂರಕ್ಷಿಸಬೇಕು. ಈ ಎಲ್ಲ ವಿಚಾರಗಳ ಬಗ್ಗೆ ಕಾರ್ಯಾಗಾರದಲ್ಲಿ ಸಂಶೋಧಕರು ಬೆಳಕು ಚೆಲ್ಲಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಎನ್‌ಐಟಿಕೆ ನಿರ್ದೇಶಕ ಪ್ರೊ| ಉಮಾಮಹೇಶ್ವರ ರಾವ್‌ ಉಪಸ್ಥಿತರಿದ್ದರು.

ಡಾ| ವಿ.ಕೆ. ಸಾರಸ್ವತ್‌ ಮಾಲಿನ್ಯದಿಂದ ಕಂಗೆಟ್ಟಿರುವ ದಿಲ್ಲಿಯಲ್ಲಿ ಐಒಸಿ ಎ. 1 2018ರಿಂದ ಬಿಎಸ್‌6 ಇಲ್ಲವೇ ಯೂರೋ 6 ಮಾದರಿಯ ತೈಲವನ್ನು ಪೂರೈಸಲಿದೆ. 2020ರ ವೇಳೆಗೆ ದೇಶಾದ್ಯಂತ ಯೂರೋ 6 ಮಾದರಿಯ ಪೆಟ್ರೋಲ್‌- ಡೀಸೆಲ್‌ ವಿತರಿಸುವ
ಸಾಧ್ಯತೆಯಿದೆ. ಹೊಗೆ ಮಾಲಿನ್ಯ ತಗ್ಗಿಸಲು ಸರಕಾರವು ಎಥನಾಲ್‌ ಮಿಶ್ರಣ ಬಳಕೆಗೆ ಮುಂದಾಗಿದೆ. ಇದಕ್ಕಾಗಿ ಐಒಸಿ ಬಯೋ ಎಥನಾಲ್‌ ಘಟಕವನ್ನು ಗುಜರಾತ್‌ ಮತ್ತು ಹರಿಯಾಣಗಳಲ್ಲಿ ಸ್ಥಾಪಿಸಲಿದೆ. ಪೆಟ್ರೋಲಿಯಂ ತೈಲಗಳಿಗೆ ಪರ್ಯಾಯವಾಗಿ ಇದನ್ನು ಬಳಸಬಹುದಾದರೂ ಯಾವಾಗ ಬಳಕೆಗೆ ಲಭ್ಯ ಎಂಬುದಕ್ಕೆ ಕಾಲಮಿತಿ ವಿಧಿಸಲಾಗದು. ಇದೊಂದು ದೀರ್ಘ‌ಕಾಲೀನ ಪ್ರಕ್ರಿಯೆಯಾಗಿದೆ ಎಂದು ಐಒಸಿ ಚೇರ್‌ಮನ್‌ ಸಂಜೀವ್‌ ಸಿಂಗ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next