Advertisement

ಒಳಚರಂಡಿಗೆ ಪರ್ಯಾಯ ವ್ಯವಸ್ಥೆ ಬಯೋಡೈಜೆಸ್ಟರ್‌ ಶೌಚಗುಂಡಿ

10:51 PM Apr 11, 2019 | mahesh |

ಸುರತ್ಕಲ್‌: ಬಯಲು ಶೌಚದಿಂದ ಆಗುವ ಪರಿಸರ ಮಾಲಿನ್ಯ, ಜಲ ಮಾಲಿನ್ಯ ಮತ್ತು ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವುದು ಹಳ್ಳಿಗರೇ ಹೆಚ್ಚು. ಇದಕ್ಕೆ ಪರಿಹಾರವಾಗಿ ಭಾರತದ ಡಿಆರ್‌ಡಿಒ ಸಂಸ್ಥೆ ಬಯೋಡೈಜೆಸ್ಟರ್‌ (ಜೈವಿಕ ಸಾರ) ಶೌಚ ಗುಂಡಿಗಳನ್ನು ಆವಿಷ್ಕಾರ ಮಾಡಿದ್ದು, ಇದು ಒಳಚರಂಡಿ ವ್ಯವಸ್ಥೆ ಇಲ್ಲದ ಬಹುತೇಕ ಭಾಗದಲ್ಲಿ ಪರ್ಯಾಯವಾಗಲಿದೆ.

Advertisement

ಸುರತ್ಕಲ್‌ ನಿರ್ಮಿತಿ ಕೇಂದ್ರದಲ್ಲಿ ಬಯೋಡೈಜೆಸ್ಟರ್‌ ಶೌಚ ಗುಂಡಿ ನಿರ್ಮಾಣ, ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ನೀಡಿ, ಶೌಚ ಗುಂಡಿ ನಿರ್ಮಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಇದು ಪ್ರಥಮ ಪ್ರಯೋಗವಾಗಿದೆ. ಡಿಆರ್‌ಡಿಒ ಇದನ್ನು ಆವಿಷ್ಕರಿಸಿದ್ದು, ಗುತ್ತಿಗೆ ಸಂಸ್ಥೆ ಯೊಂದು ಅನುಮತಿ ಪಡೆ ದು ರಾಜ್ಯಾ ದ್ಯಂತ ಬಳಕೆಗೆ ಪ್ರೋತ್ಸಾಹ ನೀಡುತ್ತಿದೆ.

ಬಯೋ ಡೈಜೆಸ್ಟರ್‌ ಶೌಚ ಗುಂಡಿಯಲ್ಲಿ ಮಾನವನ ಮಲ ಸಂಸ್ಕರಿಸಲ್ಪಟ್ಟು ಮರು ಬಳಕೆಗೆ ನೀರು ಮಾತ್ರ ಉಳಿಯುತ್ತದೆ. ಇದನ್ನು ಗಾರ್ಡನ್‌ಗೆ ಬಳಸ ಬಹುದಾಗಿದೆ. ಸಣ್ಣ ಉದ್ಯಮ, ಸಂಸ್ಥೆ ಗಳಲ್ಲಿ ಇದನ್ನು ಅಳವಡಿಸಿಕೊಳ್ಳಬಹುದು. ಮುಖ್ಯವಾಗಿ ಪೆಟ್ರೋಲ್‌ ಬಂಕ್‌, ಕಿರು ಕೈಗಾರಿಕೆ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಲ್ಲಿ ಬಳಸಿದಲ್ಲಿ ಗಿಡಗಳಿಗೆ ಬೇಕಾದ ನೀರು ಲಭ್ಯವಾಗುವುದು. ಜತೆಗೆ ಬಯೋ ಗ್ಯಾಸ್‌ ಬಳಕೆಗೂ ಇದರಲ್ಲಿ ಅವಕಾಶವಿದೆ.

ಶುದ್ಧೀಕರಿಸುವ ಬ್ಯಾಕ್ಟೀರಿಯಾ
ಬಯೋಡೈಜೆಸ್ಟರ್‌ ಶೌಚ ಗುಂಡಿಯು ಸಿದ್ಧಪಡಿಸಿದ ಮಾದರಿಯಲ್ಲಿ ಸಿಗುತ್ತದೆ. ಜನರು ಬಳಕೆಗೆ ಅನುಗುಣವಾಗಿ ಇದರ ಟ್ಯಾಂಕ್‌ ಸಿದ್ಧಪಡಿಸ ಬೇಕಾಗುತ್ತದೆ. ಒಂದು ಬಾರಿ ಇದಕ್ಕೆ ಇನಾಕ್ಯುಲಂ ಎಂಬ ಬ್ಯಾಕ್ಟೀರಿಯಾ ಸೇರಿಸಿದರೆ ಕಲ್ಮಶ ಶುದ್ಧೀಕರಿಸುವ ಕೆಲಸವನ್ನು ಇದು ಮಾಡುತ್ತದೆ. ಶೌಚಾಲಯದ ಸೇಫ್ಟಿ ಟ್ಯಾಂಕ್‌ ಒಳಗೆ ಇದನ್ನು ಸೇರಿಸುವುದರಿಂದ ಕಲ್ಮಶಗಳು ಶೇ. 100ರಷ್ಟು ಕರಗಿ, ಹಾಕಿದ ನೀರು ಮಾತ್ರ ಉಳಿಯುತ್ತದೆ. ನಾಲ್ಕು ತಿಂಗಳ ಕಾಲ ಸತತ ಶೌಚಾಲಯ ಬಳಕೆ ಮಾಡದಿದ್ದರೆ ಬ್ಯಾಕ್ಟೀರಿಯಗಳು ಕೆಲಸ ಮಾಡುವುದಿಲ್ಲ. ಒಮ್ಮೆ ಬ್ಯಾಕ್ಟೀರಿಯಾ ಸೇರಿಸಿದ ಬಳಿಕ ನಿರಂತರ ಉಪಯೋಗವಿದ್ದರೆ ಮತ್ತೆ ಮತ್ತೆ ಬ್ಯಾಕ್ಟೀರಿಯಾ ಸೇರಿಸುವ ಅಗತ್ಯವಿಲ್ಲ. ಬ್ಯಾಕ್ಟೀರಿಯಾಗಳು ಶೌಚ ಬಳಸದಿದ್ದರೂ ನಾಲ್ಕು ತಿಂಗಳ ಕಾಲ ಉಳಿಯುತ್ತವೆ.

ನೂರು ಮಂದಿಗೆ ಮೂರು ಸಾವಿರ ಘನ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ಬೇಕಾಗುತ್ತದೆ. ಕನಿಷ್ಠ 3.3 ಅಡಿಯಿಂದ ಸ್ವಯಂ ನಿರ್ವಹಣೆ ಶೌಚಾಲಯದಿಂದ ಹಿಡಿದು ಸಾರ್ವಜನಿಕ ಶೌಚಾಲಯವನ್ನೂ ಬಯೋಡೈಜೆಸ್ಟರ್‌ ಮಾದರಿಯಲ್ಲಿ ನಿರ್ಮಿಸಬಹುದು. ಒಂದು ಸಾಧಾರಣ ಟ್ಯಾಂಕ್‌ಗೆ 15,000 ರೂ. ವೆಚ್ಚವಾಗುತ್ತದೆ. ಇದರ ಗಾತ್ರಕ್ಕೆ ತಕ್ಕಂತೆ ವೆಚ್ಚವೂ ಹೆಚ್ಚುತ್ತದೆ. ಆದರೆ ಇದು ಬಹುಪಯೋಗಿ ಸ್ಟೀಲ್‌, ಫೈಬರ್‌, ಸ್ಟೈನ್‌ಲೆಸ್‌ ಸ್ಟೀಲ್‌, ಪ್ಲಾಸ್ಟಿಕ್‌ ಮಿಶ್ರಣದಿಂದ ಇದನ್ನು ನಿರ್ಮಿಸಲಾಗುತ್ತದೆ.

Advertisement

ನೀರಿನ ಬಳಕೆ ಕಡಿಮೆ
ಎಡಿಬಿ ಯೋಜನೆಯ ಒಳಚರಂಡಿ ವ್ಯವಸ್ಥೆ ಎರಡನೇ ಹಂತದಲ್ಲಿ ಕಾಮಗಾರಿ ಆರಂಭವಾಗಿದ್ದರೂ ನಗರದ ಶೇ. 100ರಷ್ಟು ಪ್ರದೇಶದಲ್ಲಿ ಬಯೋಡೈಜೆಸ್ಟರ್‌ ಶೌಚಾಲಯ ನಿರ್ಮಿಸಿ ಕೊಡುವುದು ಅಸಾಧ್ಯ. ಇದಕ್ಕೆ ಪರ್ಯಾಯವಾಗಿ ಅತೀ ಸಣ್ಣ ಪ್ರದೇಶದಲ್ಲಿ ಈಗ ಇರುವ ಪಿಟ್‌ ವ್ಯಾಪ್ತಿಯಲ್ಲಿಯೇ ಈ ಬಯೋಡೆ„ಜೆಸ್ಟರ್‌ ಶೌಚಾಲಯ ಸ್ಥಾಪಿಸಿ ಕಡಿಮೆ ನೀರಿನ ಖರ್ಚಿನಲ್ಲಿ ಉಪಯೋಗ ಮಾಡಬಹುದು. ಮಾತ್ರವಲ್ಲದೇ ಒಳಚರಂಡಿ ವ್ಯವಸ್ಥೆಯಲ್ಲಿ ಸೋರಿಕೆ ಕಂಡು ಬಂದರೆ ಸುತ್ತಮುತ್ತಲಿನ ಬಾವಿ, ಕೆರೆ ಮಲೀನವಾಗುತ್ತದೆ. ಆದರೆ ಈ ಬಯೋಡೈಜೆಸ್ಟರ್‌ನಿಂದ ಈ ಸಮಸ್ಯೆ ಬರುವುದಿಲ್ಲ. ನಗರದ ಮನೆ, ಕೈಗಾರಿಕೆ, ಸಂಸ್ಥೆಗಳಿಗೆ ಇದು ಹೆಚ್ಚು ಉಪಯುಕ್ತ.

ಪ್ರಾತ್ಯಕ್ಷಿಕೆ
ಸುರತ್ಕಲ್‌ ನಿರ್ಮಿತಿ ಕೇಂದ್ರದಲ್ಲಿ ಪ್ರಥಮವಾಗಿ ಇದನ್ನು ಅಳವಡಿಸಿಕೊಂಡಿದ್ದೇವೆ. ಇದರ ಪ್ರಯೋಜನ, ಬಾಳಿಕೆ ಮತ್ತಿತರ ವಿಚಾರಗಳ ಕುರಿತು ಪ್ರಾತ್ಯಕ್ಷಿಕೆ ನೀಡಿ ಜನರಲ್ಲಿ ಅರಿವು ಮೂಡಿಸುವ ಉದ್ದೇಶವಿದೆ.
ರಾಜೇಂದ್ರ ಕಲ್ಬಾವಿ, ನಿರ್ದೇಶಕರು, ನಿರ್ಮಿತಿ ಕೇಂದ್ರ

ಕೃಷಿಕನಿಗೆ ಲಾಭ
ದೇಶದ ನಗರ, ಗ್ರಾಮಗಳಲ್ಲಿ ಶೌಚ ಗುಂಡಿ ನಿರ್ಮಾಣ, ನಿರ್ವಹಣೆ ಸಮಸ್ಯೆದಾಯಕ. ಇದರ ನಿರ್ವಹಣೆಗೆ ಮಾನವ ಶಕ್ತಿ ಬಳಕೆಯಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಬಹುಪಯೋಗಿ ಬಯೋಡೈಜೆಸ್ಟರ್‌ (ಜೈವಿಕ ಸಾರ) ಶೌಚ ಗುಂಡಿ ಬಳಕೆ ಮಾಡಬಹುದು. ಇದರಿಂದ ಕೃಷಿಕನಿಗೆ ಹೆಚ್ಚು ಲಾಭವಿದೆ. ಅನಿಲ ಗ್ಯಾಸ್‌, ತ್ಯಾಜ್ಯ ನೀರು ತೋಟಕ್ಕೆ ಮರು ಬಳಕೆ ಮಾಡಬಹುದು.
ನಾಗರಾಜ್‌ ಜಿತೂರಿ, ಎಂಎಂ ಕಂಟ್ರೋಲ್‌, ಬೆಂಗಳೂರು

ಲಕ್ಷ್ಮೀ ನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next