Advertisement

ವೃತ್ತಿ ಜತೆ ಗಾಯನ, ಸಾಹಿತ್ಯ ಕ್ಷೇತ್ರಕ್ಕಾಗಿ ಶ್ರಮ

09:17 PM Nov 23, 2019 | Team Udayavani |

ಚಾಮರಾಜನಗರ: ವೃತ್ತಿ ಜೀವನದ ಜೊತೆಗೆ ಪ್ರವೃತ್ತಿ ರೂಢಿಸಿಕೊಂಡು ಹೋಗುವುದು ಕಷ್ಟ. ಅದರೆ, ಅದರಲ್ಲೂ ಪೊಲೀಸರಾಗಿ ವೃತ್ತಿ ಅರಂಭಿಸಿ ಗಾಯನ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ತೊಡಗಿಸಿ ಕೊಳ್ಳುವುದು ಅಪರೂಪದ ಸಂಗತಿ. ಅಂತಹ ಕೆಲವು ವ್ಯಕ್ತಿಗಳಲ್ಲಿ ಚಾ.ಶ್ರೀ.ಜಗದೀಶ್‌ ಕೂಡ ಒಬ್ಬರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎಸ್‌.ವಿನಯ್‌ ತಿಳಿಸಿದರು.

Advertisement

ಇತ್ತೀಚೆಗೆ ನಿಧನರಾದ ಸಾಹಿತಿ, ಗಾಯಕ ಚಾ.ಶ್ರೀ.ಜಗದೀಶ್‌ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿ ನಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಚಾ.ಶ್ರೀ.ಜಗದೀಶ್‌ ಅವರು ಅಜಾತಶತ್ರು, ಸರಳ, ಸ್ನೇಹಜೀವಿಯಾಗಿದ್ದರು. ಅವರ ನಿಧನದಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ತುಂಬಲಾರದ ನಷ್ಟವಾಗಿದೆ ಎಂದರು.

ಅಪರೂಪದ ವ್ಯಕ್ತಿತ್ವ: ಹಿರಿಯ ಸಾಹಿತಿ, ರಂಗತಜ್ಞ ಕೆ.ವೆಂಕಟರಾಜು ಮಾತನಾಡಿ, ಚಾ.ಶ್ರೀ.ಜಗದೀಶ್‌ ಅವರದ್ದು ನೇರ ನಡೆಯ ಕಪಟವಿಲ್ಲದ ನಡೆಯ ವ್ಯಕ್ತಿತ್ವ, ಪೊಲೀಸ್‌ ಇಲಾಖೆಯಲ್ಲಿದ್ದವರು ಕರುಣೆ, ತಾಳ್ಮೆಯಿಂದ ವರ್ತಿಸುವುದು ಅಪರೂಪ, ಅಂತಹ ಅಪರೂಪದ ವ್ಯಕ್ತಿತ್ವ ಅವರದಾಗಿತ್ತು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಟಿ.ಬಂಗಾರಗಿರಿ ನಾಯಕ, ಗೌರವ ಕೋಶಾಧ್ಯಕ್ಷ ಎಸ್‌.ನಿರಂಜನಕುಮಾರ್‌, ಪದಾಧಿಕಾರಿಗಳಾದ ಕೃಷ್ಣಸ್ವಾಮಿ ನಾಯಕ, ವೆಂಕಟಮಾದೇಗೌಡ, ಗಾಯಕ ನರಸಿಂಹಮೂರ್ತಿ, ಕಲಾವಿದ ವೆಂಕಟೇಶ್‌ ಬಾಬು, ಶ್ರೀನಿವಾಸ್‌, ನವೀನ್‌, ಪದ್ಮಾಕ್ಷಿ, ಮಂಗಳಾ, ಸಿ.ಎಸ್‌.ಮಂಜುಳಾ, ಎಸ್‌.ಪರಶಿವಮೂರ್ತಿ, ಮುಕುಂದ ರಾಜು, ಮಂಜುನಾಥ್‌, ಬಸವ ನಾಯಕ, ಸುರೇಶ್‌, ಕೆಂಪರಾಜು, ಎಂ.ನಾಗಮಲ್ಲಪ್ಪ, ಶಿವಪ್ರಸಾದ್‌ ಭಾಗವಹಿಸಿದ್ದರು. ಚಾ.ಶ್ರೀ.ಜಗದೀಶ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಚರಣೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next