Advertisement

ಅಳ್ನಾವರ ಪಪಂ ಅತಂತ್ರ; ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ

11:55 AM Jun 01, 2019 | Team Udayavani |

ಅಳ್ನಾವರ: ತಾಲೂಕು ಕೇಂದ್ರವಾಗಿ ರಚನೆಯಾದ ನಂತರ ಸ್ಥಳೀಯ ಪಪಂಗೆ ನಡೆದ ಪ್ರಥಮ ಚುನಾವಣೆ ಫಲಿತಾಂಶ ಶುಕ್ರವಾರ ಘೋಷಣೆಯಾಗಿದ್ದು, 18 ಸ್ಥಾನಗಳ ಪೈಕಿ ಕಾಂಗ್ರೆಸ್‌8, ಜೆಡಿಎಸ್‌ 6, ಬಿಜೆಪಿ 3 ಸ್ಥಾನ ಗಳಿಸಿದ್ದು, ಪಕ್ಷೇತರರು ಒಂದು ಸ್ಥಾನ ಗೆದ್ದಿದ್ದಾರೆ. ವಿಜೇತ ಅಭ್ಯರ್ಥಿಗಳು ಮತ್ತು ಆಯಾ ಪಕ್ಷದ ಕಾರ್ಯಕರ್ತರು ಪಟ್ಟಣದೆಲ್ಲೆಡೆ ಪಟಾಕ್ಷಿ ಸಿಡಿಸಿ, ಬಣ್ಣ ಎರಚಾಡುವ ಮೂಲಕ ವಿಜಯೋತ್ಸವ ಆಚರಿಸಿದರು.

Advertisement

ಹಿಂದಿನ ಅವಧಿಯಲ್ಲಿ 15 ವಾರ್ಡ್‌ ಹೊಂದಿದ್ದ ಪಟ್ಟಣದಲ್ಲಿ ಈ ಸಲ 18 ವಾರ್ಡ್‌ಗಳು ಅಸ್ತಿತ್ವಕ್ಕೆ ಬಂದಿದ್ದು, ಯಾವ ಪಕ್ಷವೂ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಸರಳ ಬಹುಮತಕ್ಕೆ 10 ಸ್ಥಾನ ಬೇಕಿದ್ದು, ರಾಜ್ಯದಂತೆ ಇಲ್ಲಿಯೂ ಕೈ-ದಳ ಮೈತ್ರಿ ಆಡಳಿತ ರಚನೆಯಾಗಬಹುದು. ಆದರೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಮೀಸಲಾತಿ ಅವಲಂಬಿಸಿದೆ.

ಹಿಂದಿನ ಆಡಳಿತದಲ್ಲಿ ಕಾಂಗ್ರೆಸ್‌ 9 ಸದಸ್ಯರನ್ನು ಹೊಂದಿತ್ತು. ಆದರೆ ಈ ಸಲ ಒಂದು ಸ್ಥಾನ ಕಳೆದುಕೊಂಡಿದೆ. 3 ಸದಸ್ಯರನ್ನು ಹೊಂದಿದ್ದ ಜೆಡಿಎಸ್‌ ಈ ಸಲ ಆರು ಸ್ಥಾನಕ್ಕೆ ಏರಿದೆ. 2 ಸ್ಥಾನ ಹೊಂದಿದ್ದ ಬಿಜೆಪಿ ಈ ಸಲ ಒಂದು ಸ್ಥಾನ ಹೆಚ್ಚಿಗೆ ಗಳಿಸಿ ಮೂರಕ್ಕೇರಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳನ್ನು ನೀಡಿದ್ದ ಅಳ್ನಾವರ ಪಟ್ಟಣದ ಜನರು ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬೆಂಬಲಿಸಿರುವುದನ್ನು ಗಮನಿಸಿದರೆ ಗೆಲುವಿಗೆ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸು ಕಾರಣ ಎನ್ನುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next