Advertisement

ಚೀನಾದಲ್ಲಿ ಹೆಚ್ಚುತ್ತಿದೆ ಕೋವಿಡ್; ಎರಡು ವರ್ಷದಲ್ಲೇ ಹೆಚ್ಚಿನ ಸೋಂಕು ಪ್ರಕರಣಗಳು ಪತ್ತೆ

10:57 AM Mar 13, 2022 | Team Udayavani |

ಬೀಜಿಂಗ್: ಚೀನಾದಲ್ಲಿ ಭಾನುವಾರ 3,393 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.

Advertisement

2020ರ ಫೆಬ್ರವರಿಯಿಂದ ಒಂದು ದಿನದಲ್ಲಿ ವರದಿಯಾದ ಅತಿ ಹೆಚ್ಚು ಸಂಖ್ಯೆಯ ಕೋವಿಡ್ ಪ್ರಕರಣವಾಗಿದೆ. ಈಶಾನ್ಯ ಪ್ರಾಂತ್ಯದ ಜಿಲಿನ್ 2,100 ಕ್ಕೂ ಹೆಚ್ಚು ಪ್ರಕರಣಗಳನ್ನು ಹೊಂದಿದೆ. ವೈಸ್ ಪ್ರೀಮಿಯರ್ ಸನ್ ಚುನ್ಲಾನ್ ಶನಿವಾರ ಪ್ರಾದೇಶಿಕ ಕ್ಲಸ್ಟರ್‌ಗಳನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ.

ದೇಶೀಯ ಕಂಪನಿಗಳು ಅಭಿವೃದ್ಧಿಪಡಿಸಿದ ಐದು ಕ್ಷಿಪ್ರ ಕೋವಿಡ್ ಪ್ರತಿಜನಕ ಪರೀಕ್ಷೆಗಳನ್ನು ಚೀನಾ ಕಳೆದ ವಾರ ಅನುಮೋದಿಸಿದೆ.

ಇದನ್ನೂ ಓದಿ:ಅವನು ನನ್ನ ಮಗನಲ್ಲ, ಮೋದಿ ಪುತ್ರ : ವಿದ್ಯಾರ್ಥಿ ಪೋಷಕರ ಭಾವನಾತ್ಮಕ ನುಡಿ

ಪ್ರಾದೇಶಿಕ ಸರ್ಕಾರಗಳು ತಮ್ಮ ಪ್ರದೇಶಗಳಲ್ಲಿ ವೈರಸ್ ಹರಡುವುದನ್ನು ತಡೆಯುವ ಪ್ರಯತ್ನಗಳನ್ನು ಹೆಚ್ಚಿಸುತ್ತಿವೆ.

Advertisement

ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಚೀನಾ ಸರ್ಕಾರ ಹಲವು ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಶಾಂಘೈನಲ್ಲಿ ಶಾಲೆಗಳನ್ನು ಮುಚ್ಚಿಸಲಾಗಿದೆ. ಚೀನಾದ ಹಲವು ಈಶಾನ್ಯ ರಾಜ್ಯಗಳಲ್ಲಿ ಲಾಕ್ ಡೌನ್ ಹೇರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next