ಸಿಹಿಯ ಸತ್ಕಾರವಿಲ್ಲದೆ ಯಾವುದೇ ಭಾರತೀಯ ಹಬ್ಬವು ಪೂರ್ಣಗೊಳ್ಳುವುದಿಲ್ಲ. ಖೀರ್ ಪ್ರತಿ ಆಚರಣೆಗೆ ಪರಿಪೂರ್ಣತೆಯನ್ನು ನೀಡುತ್ತದೆ. ಬಾದಾಮಿ ಮತ್ತು ರೋಸ್ಹ್ ಪ್ಲೇವರ್ ಹೊಂದಿರುವ ತ್ವರಿತ ಮತ್ತು ಸುಲಭವಾದ ಖೀರ್ ಪಾಕವಿಧಾನ ಇಲ್ಲಿದೆ, ಇದನ್ನು ನೀವು ಮನೆಯಲ್ಲಿ ಪ್ರಯತ್ನಿಸಬಹುದು.
ಓದಿ : ತೆಂಡೂಲ್ಕರ್ “ಭಾರತ ರತ್ನ”ಕ್ಕೆ ಅರ್ಹರಲ್ಲ : RJD ಉಪಾಧ್ಯಕ್ಷರ ವಿವಾದಾತ್ಮಕ ಹೇಳಿಕೆ
ಬಾದಾಮಿ ರೋಸ್ಹ್ ಖೀರ್ ಗೆ ಬೇಕಾಗುವ ಪದಾರ್ಥಗಳು
2 ಲೀಟರ್ ಪೂರ್ಣ ಕೊಬ್ಬಿನ ಹಾಲು
Related Articles
120 ಗ್ರಾಂ ಅಕ್ಕಿ40 ಗ್ರಾಂ ಸಕ್ಕರೆ
3-4 ರೋಸ್ ವಾಟರ್ ಹನಿಗಳು
10 ಗ್ರಾಂ ಒಣಗಿದ ಗುಲಾಬಿ ದಳಗಳು(ರೋಸ್ಹ್ ಪೆಟಾಲ್ಸ್)
100 ಗ್ರಾಂ ಬಾದಾಮಿ
25 ಗ್ರಾಂ ಬಾದಾಮಿ ಸ್ಲೀವರ್ಸ್
ಬಾದಾಮಿ ರೋಸ್ಹ್ ಖೀರ್ ಮಾಡುವ ವಿಧಾನ
1. ಸುಮಾರು 20 ನಿಮಿಷಗಳ ಕಾಲ ಅಕ್ಕಿಯನ್ನು ನೀರಿನಲ್ಲಿ ನೆನೆಸಿಟ್ಟುಕೊಳ್ಳಿ.
2. ಬಾಣಲೆಯಲ್ಲಿ ಹಾಲು ಬಿಸಿ ಮಾಡಿ. ಹಾಲು ತೆಗೆದುಕೊಂಡ ಪ್ರಮಾಣದ ಅರ್ಧದಷ್ಟು ಕಡಿಮೆಯಾಗುವವರೆಗೆ ಕುದಿಸಿ.
3. ನೆನೆಸಿದ ಅಕ್ಕಿಯನ್ನು ಹಾಲಿಗೆ ಸೇರಿಸಿ ಮತ್ತು ಅಕ್ಕಿ ಚೆನ್ನಾಗಿ ಬೇಯಿಸುವವರೆಗೆ ಮತ್ತು ಮಿಶ್ರಣವು ದಪ್ಪವಾಗುವವರೆಗೆ ಕಡಿಮೆ ಶಾಖದಲ್ಲಿ ಬೇಯಿಸಿ.
4. ಕತ್ತರಿಸಿದ ಬಾದಾಮಿ ಸೇರಿಸಿ ಮತ್ತು ಖೀರ್ ದಪ್ಪ ಮತ್ತು ಕೆನೆ ಬರುವವರೆಗೆ ಕಡಿಮೆ ಶಾಖದಲ್ಲಿ ಇನ್ನೂ 15 ನಿಮಿಷ ಬೇಯಿಸಿ, ಸಕ್ಕರೆ ಸೇರಿಸಿ.
5.ಖೀರ್ ತಣ್ಣಗಾಗುವುದಕ್ಕೆ ತೆಗೆದಿಡಿ. ತಣ್ಣಗಾದ ನಂತರ ರೋಸ್ ವಾಟರ್ ಸೇರಿಸಿ ಮಿಶ್ರಣ ಮಾಡಿ. ನಂತರ ಶೈತ್ಯೀಕರಣಗೊಳಿಸಿ (ರಿಫ್ರಿಜರೇಟ್)
6. ಸ್ವಲ್ಪ ಬಾದಾಮಿಗಳನ್ನು 180 ಡಿಗ್ರಿ ಶಾಖದಲ್ಲಿ 5 ನಿಮಿಷಗಳ ಕಾಲ, ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವ ತನಕ ಹುರಿದುಕೊಳ್ಳಿ. ಬಾದಾಮಿ ಸ್ಲೀವರ್ಸ್ ಮತ್ತು ಒಣಗಿದ ಗುಲಾಬಿ ದಳಗಳಿಂದ ಖೀರ್ ನ್ನು ಅಲಂಕರಿಸಿ. ರುಚಿಕರವಾದ ಬಾದಾಮಿ ರೋಸ್ಹ್ ಖೀರ್ ಸಿದ್ಧ.
ಓದಿ : ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವಿರೇ ? ಭಾರತದಲ್ಲಿ ಲಭ್ಯವಿರುವ ಪ್ರಮುಖ 5 ಆಯ್ಕೆಗಳು ಇಲ್ಲಿವೆ