ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾದ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ, ಸುಕುಮಾರ್ ನಿರ್ದೇಶನದ ‘ಪುಷ್ಪ’ ಚಿತ್ರ ಓಟಿಟಿ ವೇದಿಕೆಯಲ್ಲಿ ತೆರೆಕಾಣಲು ಸಿದ್ದವಾಗಿದೆ. ಪ್ರಸಿದ್ದ ಓಟಿಟಿ ವೇದಿಕೆ ಅಮೇಜಾನ್ ಪ್ರೈಮ್ ಈ ಚಿತ್ರವನ್ನು ಖರೀದಿ ಮಾಡಿದ್ದು, ಜ.7ರಂದು ತೆರೆಕಾಣಲಿದೆ.
ಗಲ್ಲಾಪೆಟ್ಟಿಗೆ ದೋಚಿದ ದಕ್ಷಿಣದ ಈ ಚಿತ್ರ ಇದೀಗ ಓಟಿಟಿಗೂ ಭಾರೀ ಮೊತ್ತಕ್ಕೆ ಬಿಕರಿಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ನಾಲ್ಕು ಭಾಷೆಗಳಲ್ಲಿ ತೆರೆಕಂಡ ಪುಷ್ಪ ದಿ ರೈಸ್ ಉತ್ತಮ ಗಳಿಕೆ ಮಾಡಿತ್ತು. ನೂರು ಕೋಟಿ ಕ್ಲಬ್ ಸೇರಿದ ಅಲ್ಲು ಅರ್ಜುನ್ ರ ಎರಡನೇ ಚಿತ್ರ ಇದಾಗಿದೆ.
ಇದನ್ನೂ ಓದಿ:ಚಕ್ಡಾ ಎಕ್ಸ್ ಪ್ರೆಸ್: ಭಾರತೀಯ ಮಹಿಳಾ ಕ್ರಿಕೆಟರ್ ಬಯೋಪಿಕ್ ನಲ್ಲಿ ಅನುಷ್ಕಾ ಶರ್ಮಾ ಮಿಂಚು
ಪುಷ್ಪ ಸ್ಟ್ರೀಮಿಂಗ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಸುಮಾರು 27-30 ಕೋಟಿ ರೂಪಾಯಿಗೆ ಖರೀದಿಸಿದೆ ಎಂದು ದಿ ಟ್ರೇಡ್ ಇನ್ಸೈಡರ್ ಬಹಿರಂಗಪಡಿಸಿದೆ. ಚಿತ್ರದ ಸ್ಯಾಟಲೈಟ್ ಹಕ್ಕುಗಳು ಓಟಿಟಿ ಗಿಂತ ಹೆಚ್ಚಿನ ಮೊತ್ತದಲ್ಲಿ ಮಾರಾಟವಾಗಿದೆ. ಓಟಿಟಿಯಲ್ಲಿ ಕೇವಲ ಒಂದು ಭಾಷೆಯಲ್ಲಿ ಮಾತ್ರವಲ್ಲದೆ ತೆಲುಗು, ಕನ್ನಡ, ಮಲಯಾಲಂ ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಯಾಗುತ್ತದೆ. ಯಾರೆಲ್ಲಾ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿಲ್ಲವೊ ಅವರು ಓಟಿಟಿಯಲ್ಲಿ ನೋಡುತ್ತಾರೆ” ಎಂದು ಟ್ರೇಡ್ ಇನ್ಸೈಡರ್ ತಿಳಿಸಿದೆ.
ಅಲ್ಲು ಅರ್ಜುನ್, ರಶ್ಮಿಕಾ ಮಂಧಣ್ಣ, ಫಾಹದ್ ಫಜಿಲ್, ಡಾಲಿ ಧನಂಜಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಪುಷ್ಪ ಚಿತ್ರದ ಮೊದಲ ಭಾಗ ಡಿ.17ರಂದು ಚಿತ್ರಮಂದರಿಗಳಲ್ಲಿ ತೆರೆಕಂಡಿತ್ತು. ಚಿತ್ರದ ಎರಡನೇ ಭಾಗ 2022ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.