Advertisement

ಅಲ್ಲು ಅರ್ಜುನ್‌ ಡಿಜೆ ಹಾಡಿನ ವಿರುದ್ಧ ಬ್ರಾಹ್ಮಣರು ಗರಂ !

11:48 AM Jun 05, 2017 | |

ಹೈದರಾಬಾದ್‌ : ಅಲ್ಲು ಅರ್ಜುನ್‌ ಅಭಿಯನದ ಬಹುನಿರೀಕ್ಷಿತ ತೆಲುಗು ಡಿಜೆ ಚಿತ್ರದ ಹಾಡೊಂದರ ಸಾಲುಗಳು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಸಮುದಾಯದ ವಿರುದ್ಧ ಅವಹೇಳನಕಾರಿ ಸಾಲುಗಳು ಇರುವ ಹಿನ್ನಲೆಯಲ್ಲಿ ಬ್ರಾಹ್ಮಣ ಸಂಘಟನೆಗಳು ಸೆನ್ಸಾರ್‌ಗೆ ದೂರು ನೀಡಿವೆ.

Advertisement

ದುವ್ವಾಡ ಜಗನ್ನಾಥಂ (ಡಿಜೆ) ಚಿತ್ರದ ಇತ್ತೀಚೆಗೆ ಬಿಡುಗಡೆಯಾದ ಗುಡಿಲೋ ಬಡಿಲೋ ಮಡಿಲೋ ವೋಡಿಲೋ..ಎಂಬ ಹಾಡಿನಲ್ಲಿ ಬ್ರಾಹ್ಮಣರ ಕುರಿತು ನಮಕಮ್ ಚಮಕಂ ಎಂಬ ವಿವಾದಿತ ಸಾಲುಗಳಿದ್ದು ಅದನ್ನು ತೆಗೆಯಬೇಕೆಂದು ಅಖೀಲ ಭಾರತ ಬ್ರಾಹ್ಮಣ ಪರಿಷತ್‌ನ ದ್ರೋಣಂ ರಾಜು ಶ್ರೀನಿವಾಸ ರಾವ್‌ ಅವರು ಸೆನ್ಸಾರ್‌ ಮಂಡಳಿ, ಸಚಿವರು ಮತ್ತು ಡಿಜಿಪಿಗೆ  ನೀಡಿದ ದೂರಿನಲ್ಲಿ ಮನವಿ ಮಾಡಲಾಗಿದೆ.

ಇತ್ರೀಚಿನ ಚಿತ್ರದಲ್ಲಿ ಬ್ರಾಹ್ಮಣರು ಹಾಸ್ಯಕ್ಕೆ ವಸ್ತುವಾಗಿ ಹೋಗಿದ್ದು, ತುಂಬಾ ನಕಾರಾತ್ಮಕ ಮತ್ತು ಕಳಪೆಯಾಗಿ ಬಿಂಬಿಸಲಾಗುತ್ತಿದೆ. ಅವರು ಭಗವಾನ್ ಶಿವನ ಮಂತ್ರ ನಮಕಂ ಚಮಕಂನಿಂದ ಪದಗಳನ್ನು ತೆಗೆದುಕೊಂಡು ರೊಮ್ಯಾಂಟಿಕ್‌ ಹಾಡಿನಲ್ಲಿ ಬಳಸಿಕೊಂಡು ಅವಹೇಳನ ಮಾಡಿದ್ದಾರೆ. ನಾವು ಅದನ್ನು ಸಹಿಸುವುದಿಲ್ಲ ಎಂದು ಶ್ರೀನಿಸಾಸ್‌ ರಾವ್‌ ಕಿಡಿಕಾರಿದ್ದಾರೆ. 

ಹರೀಶ್‌ ಶಂಕರ್‌ ನಿರ್ದೇಶನದ ಡಿಜೆ ರೊಮ್ಯಾಂಟಿಕ್‌ ಕಾಮಿಡಿ ಚಿತ್ರವಾಗಿದ್ದು, ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಜೂನ್‌ 23 ರಂದು ವಿಶ್ವಾದ್ಯಂತ ಬಿಡುಗಡೆ ಕಾಣಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next