Advertisement

ಹಾಲು ಉತ್ಪಾದನೆ ಹೆಚ್ಚಳಕ್ಕೆ ಅವಕಾಶ: ರವಿರಾಜ ಹೆಗ್ಡೆ

12:37 PM Mar 16, 2017 | Team Udayavani |

ಪುಂಜಾಲಕಟ್ಟೆ  : ಹಾಲಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಒಕ್ಕೂಟದ ಮೂಲಕ ಹೈನುಗಾರರಿಗೆ ಒಕ್ಕೂಟದ ಮೂಲಕ ವಿವಿಧ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಹಾಲು ಉತ್ಪಾದನೆಗೆ ಹೆಚ್ಚಿನ ಅವಕಾಶಗಳಿವೆ ಎಂದು ಮಂಗಳೂರು ದ.ಕ.ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಅವರು ಹೇಳಿದರು.

Advertisement

ಅವರು ಬಂಟ್ವಾಳ ತಾಲೂಕು ನಯನಾಡು ಹಾಲು ಉತ್ಪಾದಕರ ಸಹಕಾರ ಸಂಘದ ವಿಸ್ತರಣಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ದಾಖಲೆ ಮಟ್ಟದ ಹಾಲಿನ ಸಂಗ್ರಹಣೆಯಾಗಿದೆ. ಇದು ರೈತರ ಸಾಧನೆ. ಅವಿಭಜಿತ ದ.ಕ.ಜಿಲ್ಲೆಯಲ್ಲಿ ನಯನಾಡು ಒಕ್ಕೂಟವು 14 ವರ್ಷಗಳಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸಿದ್ದು ಯಾವುದೇ ಕಲಬೆರಕೆ ಇಲ್ಲದೆ ಉತ್ತಮ ಗುಣಮಟ್ಟದ ಶುದ್ಧ ಹಾಲು ಇಲ್ಲಿ ಸಂಗ್ರಹಣೆಯಾಗುತ್ತಿದೆ. ಈ ಸಾಧನೆಗೈದ ಒಕ್ಕೂಟ ಅಭಿನಂದನಾರ್ಹವಾಗಿದೆ ಎಂದವರು ಹೇಳಿದರು.

ಅಡಿಕೆ ಹಾಳೆ ಸಂಸ್ಕರಣ ಘಟಕ ಕೆ.ಎಂ.ಎಫ್‌. ಮ್ಯಾನೇಜಿಂಗ್‌ ಡೈರೆಕ್ಟರ್‌ ಡಾ| ಬಿ.ವಿ.ಸತ್ಯ ನಾರಾಯಣ ಅವರು ಅಡಿಕೆ ಹಾಳೆ ಸಂಸ್ಕರಣ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಅಡಿಕೆ ಹಾಳೆಯಲ್ಲಿ ಉತ್ತಮ ನಾರಿನ ಅಂಶ ಸಿಗುವುದರಿಂದ ಜಾನುವಾರುಗಳಿಗೆ ಉತ್ತಮ ಮೇವು ದೊರೆತಂತಾಗುತ್ತದೆ. ಇದರಿಂದ ಹಾಲಿನ ಗುಣಮಟ್ಟ ವೃದ್ಧಿಯಾಗುತ್ತದೆ. ಬರಗಾಲದ ಪರಿಸ್ಥಿತಿಯಲ್ಲಿ ಬೈಹುಲ್ಲಿನ ಬದಲು ಅಡಿಕೆ ಹಾಳೆ ಉಪಯೋಗಿಸಬಹುದಾಗಿದೆ ಎಂದರು.

ಡಾ| ಶ್ರೀನಿವಾಸ್‌ ಅವರು ಹಸುಗಳಿಗೆ ಬರುವ ರೋಗಗಳು, ಗರ್ಭಧಾರಣೆ ಬಗ್ಗೆ ಮತ್ತು ಎಸ್‌. ಪ್ರಭಾಕರ ಅವರು ಮೇವಿನ ಬಗ್ಗೆ ಹೈನುಗಾರರಿಗೆ ಮಾಹಿತಿ ನೀಡಿದರು.

Advertisement

ಸಂಘದ ಅಧ್ಯಕ್ಷ ಪ್ರಕಾಶ್‌ ರಾವ್‌, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ ಕುಮಂಗಿಲ, ಸಂಘದ ಮಾಜಿ ಅಧ್ಯಕ್ಷ ವಿದ್ಯಾಧರ ಕುಬಣೂರಾಯ, ಪ್ರಮುಖರಾದ ಕೃಷ್ಣ ಭಟ್‌, ನರಹರಿ ಪ್ರಭು, ಸೈಮನ್‌ ಮೊರಾಸ್‌ ಉಪಸ್ಥಿತರಿದ್ದರು. ಇನಾಸ್‌ ರೊಡ್ರಿಗಸ್‌ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಅಶೋಕ್‌ ಡಿ’ಸೋಜಾ ವಂದಿಸಿದರು.  ಜಿಲ್ಲಾ ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಜಗದೀಶ ಎ. ಕಾರ್ಯಕ್ರಮ ನಿರೂಪಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next