Advertisement

JDS ಕಾಪಾಡಲು BJP ಜೊತೆಗೆ ಮೈತ್ರಿ: ದೇವೇಗೌಡ

08:18 PM Feb 08, 2024 | Pranav MS |

ನವದೆಹಲಿ: “ನೀವು ಈ ದೇಶದ ಪ್ರಧಾನಿಯಾಗಲು ಕಾಂಗ್ರೆಸ್‌ ನಿಮ್ಮನ್ನು ಬಿಡುತ್ತದೆಯೇ? ಪ್ರಧಾನಿಯಾದರೆ ಆ ಪಕ್ಷ ಸಹಿಸುತ್ತದಯೇ’ ಹೀಗೆಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ ಗುರುವಾರ ಚಾಟಿ ಬೀಸಿದ್ದಾರೆ.

Advertisement

ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ ಸದಸ್ಯರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗಿಯಾಗಿದ್ದ ದೇವೇಗೌಡರನ್ನು ಕುರಿತು ಮಾತನಾಡುತ್ತಿದ್ದ ಖರ್ಗೆ, ದೇವೇಗೌಡರು ತಮ್ಮ ಜೀವನದ ಅಂತ್ಯದಲ್ಲಿ ರಾಜಕೀಯ ದಿಕ್ಕನ್ನು ಬದಲಿಸಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಿರುಗೇಟು ನೀಡಿದ ದೇವೇಗೌಡರು, ತಮ್ಮ ಪಕ್ಷವನ್ನು ನಾಶಪಡಿಸಲು ಹೊರಟಿರುವ ಕಾಂಗ್ರೆಸ್ಸಿಗರಿಂದ, ಜೆಡಿಎಸ್‌ ಅನ್ನು ಉಳಿಸುವ ಸಲುವಾಗಿ ಬಿಜೆಪಿಗೆ ಬೆಂಬಲ ನೀಡಿದ್ದೇನೆ. ವೈಯಕ್ತಿಕ ಲಾಭಕ್ಕಾಗಿ ಎಂದಿಗೂ ಪಕ್ಷದಿಂದ ಪಕ್ಷಕ್ಕೆ ಜಿಗಿದಿಲ್ಲ ಎಂದಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ನ ಕಟ್ಟಾಳುವಿನಂತಿದ್ದರೂ ಕಾಂಗ್ರೆಸಿಗರು ಖರ್ಗೆ ಅವರ ವಿರುದ್ಧವೇ ಪಿತೂರಿ ನಡೆಸುತ್ತಿದ್ದಾರೆ ಎನ್ನುವಂತೆ ಮಾತನಾಡಿದ ಗೌಡರು, “ಖರ್ಗೆ ಅವರೇ ನೀವು ದೇಶದ ಪ್ರಧಾನಿಯಾಗಲು ಬಯಸುತ್ತೀರಾ? ಕಾಂಗ್ರೆಸ್‌ ಅದನ್ನು ಸಹಿಸುತ್ತದೆಯೇ? ದಯವಿಟ್ಟು ಹೇಳಿ, ಸತ್ಯ ನನಗೂ ತಿಳಿದಿದೆ’ ಎಂದಿದ್ದಾರೆ.

ಅಲ್ಲದೇ, ಕಾಂಗ್ರೆಸ್‌ನ ಹೈಕಮಾಂಡ್‌ ಸಂಸ್ಕೃತಿಯ ಬಗ್ಗೆ ತರಾಟೆ ತೆಗೆದುಕೊಂಡು, ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರವಾದಾಗ ಖರ್ಗೆ ಅವರೇ ರಾಜ್ಯದ ಸಿಎಂ ಆಗಬೇಕೆಂದು ನಾನು ಸಲಹೆ ನೀಡಿದ್ದೆ. ಆದರೆ ನಿಮ್ಮ ಹೈಕಮಾಂಡ್‌ನ‌ವರೇ ಕುಮಾರಸ್ವಾಮಿ ಸಿಎಂ ಆಗಬೇಕೆಂದು ಒತ್ತಾಯಿಸಿದ್ದರು. 13 ತಿಂಗಳ ಒಳಗೆ ಕುಮಾರಸ್ವಾಮಿಯನ್ನು ಕೆಳಗಿಳಸಲಾಯಿತು ಹಾಗೆ ಮಾಡಿದ್ದು ಖರ್ಗೆ ಅವರಲ್ಲ, ಬದಲಿಗೆ ಕಾಂಗ್ರೆಸ್‌ ನಾಯಕರೇ ಎಂದು ಟಾಂಗ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next