Advertisement

ಬಿಜೆಪಿ ಭದ್ರಕೋಟೆಗೆ ಲಗ್ಗೆ ಹಾಕಲು ಮೈತ್ರಿಪಕ್ಷಗಳ ಸರ್ಕಸ್‌

02:59 AM Apr 12, 2019 | Team Udayavani |

ಉಡುಪಿ/ಚಿಕ್ಕಮಗಳೂರು: ಉಡುಪಿ - ಚಿಕ್ಕಮಗಳೂರು ಹೆಸರೇ ಹೇಳುವಂತೆ ಎರಡು ಸಂಸ್ಕೃತಿಗಳನ್ನು ಒಗ್ಗೂಡಿಸಿದ ಕ್ಷೇತ್ರ. ತಣ್ತೀ ಜ್ಞಾನಿಕವಾಗಿ ಮಧ್ವಾಚಾರ್ಯರ ಉಡುಪಿ ಮತ್ತು ಶಂಕರಾಚಾರ್ಯರ ಶೃಂಗೇರಿ ಧರ್ಮಪೀಠಗಳನ್ನು ಹೊಂದಿ ರುವ ಮತ್ತು ಇನ್ನೆಲ್ಲೂ ಇಂಥ ಅಪರೂಪದ ಜೋಡಿ ಒಂದಾಗಿ ಕಾಣಸಿಗದ ಲೋಕಸಭಾ ಕ್ಷೇತ್ರ. ಉಡುಪಿ ಜಿಲ್ಲೆ ಕರಾವಳಿ ಸಂಸ್ಕೃತಿಯನ್ನೂ, ಚಿಕ್ಕಮಗಳೂರು ಮಲೆನಾಡು ಸಂಸ್ಕೃತಿಯನ್ನೂ ಹೊಂದಿದೆ. ಉಡುಪಿ ಜಿಲ್ಲೆಯೊಳಗೇ ಉತ್ತರ ಭಾಗದಲ್ಲಿ ಕುಂದಾಪುರ ಸಂಸ್ಕೃತಿ ತುಸು ಭಿನ್ನ. ಎಲ್ಲೆಡೆ ಜೀವನ ವಿಧಾನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮತದಾರನ ತೀರ್ಪೂ ಕಾಲಕಾಲಕ್ಕೆ ಬದಲಾಗುತ್ತಿದೆ.

Advertisement

ಇಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮತ್ತು ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಪ್ರಬಲ ಸ್ಪರ್ಧಿಗಳು. ಶೋಭಾ ಅವರು ಸಂಸದೆಯಾಗಿ ಪುನರಾಯ್ಕೆ ಬಯಸಿದ್ದಾರೆ. ಇವರ ಓಘಕ್ಕೆ ಪ್ರಮೋದ್‌ ಮಧ್ವರಾಜ್‌ ಎದುರಾಳಿ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ರಾಜಕೀಯದಲ್ಲಿ ಜೆಡಿಎಸ್‌ಗೆ ಬಿಟ್ಟುಕೊಟ್ಟ ಕ್ಷೇತ್ರ ವಾದ ಇಲ್ಲಿ ಕಾಂಗ್ರೆಸ್‌ ನಾಯಕ ಪ್ರಮೋದ್‌ರನ್ನು ಜೆಡಿಎಸ್‌ ಟಿಕೆಟ್‌ನಲ್ಲಿ ಕಣಕ್ಕಿಳಿಸಿರುವುದರಿಂದ ಇದೊಂದು ವಿಶಿಷ್ಟ ಮೈತ್ರಿಯ ಕ್ಷೇತ್ರ. ಶೋಭಾ 2ನೇ ಬಾರಿಗೆ ಸ್ಪರ್ಧಿಸುತ್ತಿರುವುದರಿಂದ ಮತ್ತು ಪ್ರಮೋದ್‌ ಈಗಾಗಲೇ ಸಚಿವರಾಗಿ ಕೆಲಸ ಮಾಡಿರುವ ಕಾರಣ ಒಂದಿಷ್ಟು ಕುತೂಹಲ ಮೂಡಿಸುತ್ತಿದೆ. ಇವರೀರ್ವರಲ್ಲದೆ 10 ಮಂದಿ ಕಣದಲ್ಲಿದ್ದಾರೆ. ಅಮೃತ್‌ ಶೆಣೈ ಕಾಂಗ್ರೆಸ್‌ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು ಕಾಂಗ್ರೆಸ್‌ ಪಕ್ಷ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟ ನಿರ್ಧಾರವನ್ನು ವಿರೋಧಿಸಿ ಪಕ್ಷೇತರರಾಗಿ ಸ್ಪರ್ಧಿಸಿರುವುದು ಕುತೂಹಲ ಕೆರಳಿಸುತ್ತಿದೆ.

ನಿರ್ಣಾಯಕ ಅಂಶ
ಶೋಭಾ ಕರಂದ್ಲಾಜೆಯವರಿಗೆ ಮೋದಿ ಅಲೆ ಮತ್ತು ಬಿಜೆಪಿ ಕಾರ್ಯಕರ್ತರ ಪಡೆ ಪ್ರಬಲ ಶಕ್ತಿ. ಪ್ರಮೋದ್‌ ಮಧ್ವರಾಜ್‌ರಿಗೆ ಎರಡೂ ಪಕ್ಷ ಗಳ ಸಾಂಪ್ರದಾಯಿಕ ಮತಗಳು, ಮೂರ್‍ನಾಲ್ಕು ಪಕ್ಷಗಳ ಕಾರ್ಯಕರ್ತರು ಪ್ರಬಲ ಶಕ್ತಿ. ಹಿಂದಿನ ವಿಧಾನ ಸಭಾ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್‌ ಶಾಸಕರು ಆಯ್ಕೆಯಾದರು. ಇದೂ ಬಿಜೆಪಿ ಅಭ್ಯರ್ಥಿಗೆ ಲಾಭ ತರಬಹುದಾದ ಅಂಶ. ಪ್ರಮೋದ್‌ರಿಗೆ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಜೆಡಿಎಸ್‌, ಕಾಂಗ್ರೆಸ್‌, ಸಿಪಿಐ ಬಹಿರಂಗವಾಗಿ ಒಂದುಗೂಡಿರುವುದು, ಸಿಪಿಐ (ಎಂ) ಪರೋಕ್ಷವಾಗಿ ಬೆಂಬಲ ನೀಡುತ್ತಿರುವುದು ಪೂರಕ ಅಂಶವಾಗಿದೆ. ಒಂದರ್ಥದಲ್ಲಿ ಬಿಜೆಪಿಗೆ ಇತರ ಎಲ್ಲ ಪಕ್ಷಗಳು ಅಧಿಕೃತವಾಗಿ ಸಡ್ಡು ಹೊಡೆದದ್ದು ಇದೇ ಮೊದಲ ಬಾರಿ ಎನ್ನಬಹುದು.

ಶೋಭಾ ಒಕ್ಕಲಿಗ ಸಮುದಾಯದವರಾದರೆ, ಪ್ರಮೋದ್‌ ಮೊಗವೀರ ಸಮುದಾಯದವರು. ಒಕ್ಕಲಿಗರು ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ, ಮೊಗವೀರರು ಉಡುಪಿ ಜಿಲ್ಲೆಯಲ್ಲಿಯೂ ಹೆಚ್ಚಿಗೆ ಇದ್ದಾರೆ. ಇವರಲ್ಲದೆ ಪ್ರಬಲವಾಗಿರುವ ಉಡುಪಿ ಜಿಲ್ಲೆಯ ಬಿಲ್ಲವರು, ಬಂಟರು, ಚಿಕ್ಕಮಗಳೂರಿನ ಲಿಂಗಾಯತರು, ಕುರುಬರು, ಎರಡೂ ಜಿಲ್ಲೆ ಗಳಲ್ಲಿರುವ ಮುಸ್ಲಿಮರು, ಕ್ರೈಸ್ತರು, ಗೌಡ ಸಾರಸ್ವತ ಬ್ರಾಹ್ಮಣರೂ ಸೇರಿ ಬ್ರಾಹ್ಮಣರು, ಜೈನರು, ಪರಿಶಿಷ್ಟರು, ಇತರ ಹಿಂದುಳಿದ ವರ್ಗದವರು ನಗಣ್ಯರಲ್ಲ. ಹಿಂದಿನ ಚುನಾ ವಣೆ ಯಲ್ಲಿ ಜಾತಿ ಅಂಶ ಕೆಲಸ ಮಾಡಿರಲಿಲ್ಲ. “ಮೋದಿಯವರು ದೇಶವನ್ನು ಕಾಪಾಡಲು ಅನಿವಾರ್ಯ. ನಾನು ಸಂಸದೆಯಾಗಿ ಮಾಡಿದ ಸಾಧನೆಯೂ ನನಗೆ ಶ್ರೀರಕ್ಷೆ’ ಎಂದು ಶೋಭಾ ಕರಂದ್ಲಾಜೆ ಹೇಳಿದರೆ, “ನನಗೆ ಇದುವರೆಗೆ ದೊರಕಿದ ಎಲ್ಲ ಅವಕಾಶಗಳಲ್ಲಿ ಮಾಡಿದ ಸಾಧನೆಯನ್ನು ಜನರು ಗುರುತಿಸುತ್ತಾರೆ’ ಎಂದು ಪ್ರಮೋದ್‌ ಮಧ್ವರಾಜ್‌ ಹೇಳುತ್ತಾರೆ.

ಕಣ ಚಿತ್ರಣ
ದಕ್ಷಿಣ ಕನ್ನಡ ಮೂಲದ ಶೋಭಾ ಅವರು 2014ರ ಚುನಾವಣೆಯಲ್ಲಿ ಸ್ಪರ್ಧಿಸಿದಾಗ 5,81,168 ಮತಗಳು, ಕಾಂಗ್ರೆಸ್‌ನ ಜಯ ಪ್ರಕಾಶ್‌ ಹೆಗ್ಡೆಯವರಿಗೆ 3,99,525 ಮತಗಳು ದೊರಕಿದ್ದವು. ಆಗಿನ ಗೆಲುವಿನ ಅಂತರ 1,81,643. ಇದು ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳಿಂದ ಗೆಲುವು ಪಡೆದ ದಾಖಲೆ.

Advertisement

ಹಿಂದಿನ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಜಯಪ್ರಕಾಶ್‌ ಹೆಗ್ಡೆ ಬಿಜೆಪಿ ಸೇರಿದರು. ಈ ಬಾರಿ ಶೋಭಾರಿಗೆ ಟಿಕೆಟ್‌ ಕೊಡಬಾರದೆಂದು ಮೊದಲು ಕಾರ್ಯಕರ್ತರು ಕೆ.ಜಯಪ್ರಕಾಶ್‌ ಹೆಗ್ಡೆಯವರಿಗೆ ಒಲವು ತೋರಿದ್ದರಿಂದ ಟಿಕೆಟ್‌ ಘೋಷಣೆಯ ಕೊನೆಯ ಘಳಿಗೆವರೆಗೂ ಕುತೂ ಹಲ ಮೂಡಿತ್ತು. ಅತ್ತ ಕಾಂಗ್ರೆಸ್‌ಗೊà? ಜೆಡಿಎಸ್‌ಗೊà ಎಂಬ ಕುತೂಹಲವಿದ್ದು ಜಿಲ್ಲಾ ಸಮಿತಿಗಳ ವಿರೋಧದ ನಡುವೆಯೂ ಕ್ಷೇತ್ರ ಜೆಡಿಎಸ್‌ ಪಾಲಾಗಿ ಕಾಂಗ್ರೆಸ್‌ ನಾಯಕ ಉಡುಪಿಯ ಪ್ರಮೋದ್‌ ಮಧ್ವರಾಜ್‌ ಜೆಡಿಎಸ್‌ ಟಿಕೆಟ್‌ನಲ್ಲಿ ಸ್ಪರ್ಧಿಸು ತ್ತಿದ್ದಾರೆ. ಅಭ್ಯರ್ಥಿಗಳ ಕುರಿತು ಇದ್ದ ಅಸಮಾಧಾನ ಕ್ರಮೇಣ ತಣ್ಣಗಾದಂತಿದೆ.

  • ಮಟಪಾಡಿ ಕುಮಾರಸ್ವಾಮಿ/ ಎಸ್‌.ಕೆ. ಲಕ್ಷ್ಮೀಪ್ರಸಾದ್‌
Advertisement

Udayavani is now on Telegram. Click here to join our channel and stay updated with the latest news.

Next