ಹುಳಿಯಾರು: ಬಯೋಮೆಟ್ರಿಕ್ ಹಾಗೂ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಯಲ್ಲಿ ಕೋಟ್ಯಂತರ ರೂ. ಹಣ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ತಂಡ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ತಂಡ ಹಂದನಕೆರೆ ಹಾಗೂ ಮತಿಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿತು.
ಸ್ಥಾಯಿ ಸಮಿತಿ ಅಧ್ಯಕ್ಷೆ ಡಾ.ನವ್ಯಾ, ಸದಸ್ಯ ವೈ.ಸಿ.ಸಿದ್ದರಾಮಯ್ಯ, ಕೆಂಪಚೌಡಯ್ಯ, ಚನ್ನಮಲ್ಲಪ್ಪ, ಗಾಯತ್ರಿ ತಂಡದಲ್ಲಿದ್ದರು. ಹಂದನಕೆರೆ ಮತ್ತು ಮತಿಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ಬಯೋಮೆಟ್ರಿಕ್, ಸಿಸಿ ಟೀವಿ ಕ್ಯಾಮೆರಾ ಪರಿಶೀಲಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಚಂದ್ರಕಲಾ, ಆರೋಗ್ಯ ಕೇಂದ್ರಗಳಲ್ಲಿನ ಬಯೋಮೆಟ್ರಿಕ್ ಅಳವಡಿಸಿ ಕೊಂಡಿದ್ದಾರೆಯೇ ಎಂದು ಪರಿಶೀಲಿಸಲಾಗಿದೆ ಎಂದರು. ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್, ಅಧಿಕಾರಿಗಳು ಇದ್ದರು.
ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಿಗೆ ಬಯೋಮೆಟ್ರಿಕ್, ಸಿಸಿ ಟೀವಿ ಕ್ಯಾಮರಾ ಅಳವಡಿಸಲು 2 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಆದರೆ, ಗುಬ್ಬಿ- ಚಿಕ್ಕನಾಯಕನ ಹಳ್ಳಿ ತಾಲೂಕಿನ ಕೆಲ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಕಳಪೆ ಸಾಮ ಗ್ರಿ ಅಳವಡಿ ಸಿದ್ದು ಯಾವುವೂ ಕೆಲಸ ನಿರ್ವಹಿ ಸುತ್ತಿಲ್ಲ. ಆದರೂ, ಜಿಪಂ ಅಧ್ಯಕ್ಷರು ಪರಿಶೀಲಿ ಸದೆ ಒತ್ತಡಕ್ಕೆ ಮಣಿದು ಹಣ ಮಂಜೂರು ಮಾಡಿ ದ್ದಾರೆ. ಹಣ ಸಂಪೂರ್ಣವಾಗಿ ದುರುಪ ಯೋಗವಾಗಿದೆ ಎಂದು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಸದಸ್ಯ ವೈ.ಸಿ. ಸಿದ್ದರಾಮಯ್ಯ ತಿಳಿಸಿದರು.