Advertisement

Sullia;ಮಹಿಳೆಯರ ಅವಹೇಳನ ಆರೋಪ: ಅರಣ್ಯಾಧಿಕಾರಿಯ ಬಂಧನ, ಬಿಡುಗಡೆ

01:20 AM Oct 19, 2024 | Team Udayavani |

ಸುಳ್ಯ: ಒಂದು ಸಮುದಾಯದ ಮಹಿಳೆಯರ ಬಗ್ಗೆ ಹಾಗೂ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಕೀಳುಮಟ್ಟ ದಲ್ಲಿ ಮಾತನಾಡಿದ ಆರೋಪದಂತೆ ಪಂಜ ವಲಯ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿ ಯೂರು ಅವರನ್ನು ಶುಕ್ರವಾರ ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಪಂಜದ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರು ವ್ಯಕ್ತಿಯೊಬ್ಬರೊಂದಿಗೆ ದೂರವಾಣಿ ಮೂಲಕ ಮಾತನಾಡುವ ವೇಳೆ ಒಂದು ಸಮುದಾಯದ ಮಹಿಳೆಯರ ಬಗ್ಗೆ ಹಾಗೂ ಹೆಣ್ಣು ಮಕ್ಕಳ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಾಗೆಯೇ ಅವರುಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕೂಡ ವೈರಲ್‌ ಆಗಿತ್ತು. ಈ ಬಗ್ಗೆ ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲೆ ವತಿಯಿಂದ ಬೆಳ್ಳಾರೆ ಠಾಣೆಗೆ ದೂರು ನೀಡಲಾಗಿತ್ತು. ಅದರಂತೆ ಅಲ್ಲಿ ಮಹಿಳೆಯರನ್ನು ನಿಂದಿಸಿದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಶುಕ್ರವಾರ ಪುತ್ತೂರಿನ ಡಿವೈಎಸ್ಪಿ ಕಚೇರಿ ಬಳಿ ಹಿಂದೂ ಸಂಘಟನೆಯವರು ಪ್ರತಿಭಟನೆ ನಡೆಸಿ ಸಂಜೀವ ಪೂಜಾರಿ ಬಂಧನಕ್ಕೆ ಆಗ್ರಹಿಸಿದ್ದರು.

ಅದರಂತೆ ಬೆಳ್ಳಾರೆ ಪೊಲೀಸರು ಅರಣ್ಯಾಧಿಕಾರಿ ಸಂಜೀವ ಪೂಜಾರಿ ಅವರನ್ನು ಕಾಣಿಯೂರಿನ ಅವರ ಮನೆಯಿಂದ ಶುಕ್ರವಾರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಂಜೀವ ಪೂಜಾರಿ ಅವರ ಮೇಲೆ ಈ ಹಿಂದೆಯೂ ಭಜಕರ ಬಗ್ಗೆ ಅವಹೇಳಕಾರಿಯಾಗಿ ಪೋಸ್ಟ್‌ ಹಾಕಿದ ಆರೋಪ ಕೇಳಿಬಂದಿತ್ತು.

ಅವರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಆಗಿದೆ.

ಹಿಂಜಾವೇ, ಬಿಲ್ಲವ ಸಂಘಟನೆಗಳಿಂದ ದೂರು
ಮೂಡುಬಿದಿರೆ: ಪುತ್ತೂರು ಉಪ ವಲಯ ಅರಣ್ಯಾ ಧಿಕಾರಿ ಸಂಜೀವ ಕಾಣಿಯೂರು ಅವರು ಬಿಲ್ಲವ ಜಾತಿಯ ಹೆಣ್ಣು ಮಕ್ಕಳು ಮತ್ತು ಹಿಂದೂ ಯುವಕರ ಬಗ್ಗೆ ಆಶ್ಲೀಲ, ಮಾನಹಾನಿ ಮಾಡುವ ಮತ್ತು ಸಮಾಜದಲ್ಲಿ ವರ್ಗ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟು ಸಮಾಜದ ಶಾಂತಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಮಾತನಾಡಿರುವರೆಂದು ಆರೋಪಿಸಿ, ಮೂಡುಬಿದಿರೆ ಹಿಂದೂ ಜಾಗರಣ ವೇದಿಕೆಯವರು ಗುರುವಾರ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವ್ಯಕ್ತಿಯನ್ನು ನೌಕರಿಯಿಂದ ವಜಾಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮೂಡುಬಿದಿರೆ ಪೊಲೀಸ್‌ ಅ ಧಿಕಾರಿ ಸಂದೇಶ್‌ ಪಿ.ಜಿ. ಅವರ ಮೂಲಕ ಮೇಲಧಿ ಕಾರಿಗಳಿಗೆ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಯೋಜಕ್‌ ಸಮಿತ್‌ ದರೆಗುಡ್ಡೆ ದೂರಿನ ಮೂಲಕ ಆಗ್ರಹಿಸಿದರು.

Advertisement

ಸರಕಾರಿ ಸೇವೆಯಿಂದ ವಜಾಗೊಳಿಸಲು ಆಗ್ರಹ
ಮೂಡುಬಿದಿರೆ: ಬಿಲ್ಲವ ಸಮುದಾಯದ ಮಹಿಳೆಯರ ಬಗ್ಗೆ ನಿಂದನಾತ್ಮಕ ಹೇಳಿಕೆಯನ್ನು ನೀಡಿದ್ದ ಪುತ್ತೂರು ವ್ಯಾಪ್ತಿಯ ವಲಯ ಅರಣ್ಯಾ ಧಿಕಾರಿ ಸಂಜೀವ ಕಾಣಿಯೂರು ಎಂಬಾತನ ವಿರುದ್ಧ ಕೋಟಿ ಚೆನ್ನಯ ಯುವಶಕ್ತಿ ಅಳಿಯೂರು ಮತ್ತು ಬಿಲ್ಲವ ಸಮುದಾಯ ಸೇವಾ ಸಂಘ ಶಿರ್ತಾಡಿ ಇವರ ಜಂಟಿ ತಂಡವು ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡಿತು. ಇತ್ತೀಚೆಗೆ ಆಡಿಯೋ ಒಂದರಲ್ಲಿ ಬಿಲ್ಲವ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿರುವ ಆರೋಪಿಯ ಬಂಧನ ವಷ್ಟೇ ಅಲ್ಲ ಸರಕಾರಿ ಸೇವೆಯಿಂದ ಮಾಡಿ, ಕಠಿನ ಶಿಕ್ಷೆ ವಿಧಿಸಬೇಕು ಎಂದು ದೂರುದಾರರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next