Advertisement
ಬುಧವಾರ ನಗರದ ಅಂಬೇಡ್ಕರ ಭವನದಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
Related Articles
Advertisement
ಏಳು ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಎಲ್ಲ ಕಡೆ ಒಳ್ಳೆಯ ಹೆಜ್ಜೆ ಗುರುತು ಇಟ್ಟು ಬಂದಿದ್ದೇನೆ. ಮುಂದೆ ಇಂದು ಶಿಲಾನ್ಯಾಸ ಮಾಡಿದ ಅನೇಕ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ಸಚಿವರಾಗಿ ಕಾಗೇರಿ ಅವರು ಉದ್ಘಾಟನೆ ಮಾಡಲಿ ಎಂದು ಹಾರೈಸಿದರಲ್ಲದೇ ಕಾಗೇರಿ ಅವರು ಅನೇಕ ಕಾಮಗಾರಿಗಳ ಪ್ರಸ್ತಾಪ ಮುಂದಿಟ್ಟಿದ್ದಾರೆ. ಅದಕ್ಕೆ ತಕ್ಷಣ 25 ಕೋ.ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಹತ್ತು ಕೋಟಿ ರೂ. ಮೊತ್ತದಲ್ಲಿ ಮಾರಿಕಾಂಬಾ ಜಿಲ್ಲಾ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿಗೆ ಶಿಲಾನ್ಯಾಸ, 9 ಕೋಟಿ ಮೊತ್ತದಲ್ಲಿ ಹತ್ತರಗಿ ಕ್ರಾಸ್ ನಿಂದ ಕುಮಟಾ ರಸ್ತೆ ತನಕ 5.5 ಕಿಮೀ ಕಾಮಗಾರಿಗೆ ಭೂಮಿ ಪೂಜೆ, ನಗರದ ಪಂಡಿತ್ ಆಸ್ಪತ್ರೆಯಿಂದ ಮಹಾಸತಿ ದೇಗುಲದ ವರೆಗಿನ 15 ಕೋಟಿ ರೂ. ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ರಸ್ತೆ ಅಗಲೀಕರಣದ ಬಳಿಕ ಅಂಡರ್‌ಗ್ರೌಂಡ್ ಕೇಬಲ್ ಕೂಡ ಆಗಬೇಕು. ಅದಕ್ಕೂ ಅನುದಾನ ಬೇಕು ಎಂದರು.
ಕಾಮಗಾರಿ ಮುಗಿದರೂ ಬಾಕಿ ಉಳಿದಿರುವ ಗುತ್ತಿಗೆದಾರರಿಗೆ ಅವರ ಮೊತ್ತ ಬಿಡುಗಡೆ ಮಾಡಿಸಲು ಪಾಟೀಲರಿಗೆ ಸೂಚಿಸಿದ್ದೇನೆ. ಗಣೇಶಪಾಲ್ ಬ್ರಿಡ್ಜ್ ಶಾಶ್ವತ ಕೆಲಸ ಆಗುತ್ತಿದೆ. ಬೈರುಂಬೆ ಬ್ರಿಡ್ಜ್ ನಿರ್ಮಾಣಕ್ಕೂ ಟೆಂಡರ್ ಆಗಿದೆ. ಫೈವ್ ಕ್ರಾಸ್ ಬಳಿ ಅಗಲೀಕರಣಕ್ಕೆ ಸುಮಾರು 185 ಜನ ಸ್ಥಳ ಕೊಟ್ಟಿದ್ದಾರೆ. 14 ಕೋಟಿ ರೂ. ಪರಿಹಾರ ಶೀಘ್ರ ಬಿಡುಗಡೆ ಆಗಲಿದೆ. ಎಲ್ಲೆಡೆ ಅಭಿವೃದ್ಧಿ ಆಗುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಕಿಂಚಿತ್ತೂ ರಾಜೀಯೇ ಇಲ್ಲ. ಅಭಿವೃದ್ಧಿಗೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಲಾಗುವುದು ಯಾವ ನಿರ್ಲಕ್ಷ್ಯ ಇಲ್ಲವೇ ಇಲ್ಲ ಎಂದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಪ್ರಶಾಂತ ಗೌಡ, ಹೆಗಡೆಕಟ್ಟಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಭಟ್ಟ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ ಇತರರು ಇದ್ದರು.
ಪಿಎಫ್ ಐ ಸಂಘಟನೆ ನಿಷೇಧಿಸಲಾಗಿದೆ. ದೇಶದ್ರೋಹಿ ಹಾಗೂ ವಿಧ್ವಸಂಕ ಕೃತ್ಯಗಳ ವಿರುದ್ಧ ಸರಕಾರ ಬಿಗಿ ಕ್ರಮಕೈಗೊಂಡಿದೆ. ಶಾಂತಿಪ್ರಿಯ ಶಿರಸಿಗೂ ಈ ಕಳಂಕ ತಟ್ಟಿದ್ದು, ಇದನ್ನು ಹೋಗಲಾಡಿಸಬೇಕಾಗಿದೆ. –ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್