Advertisement

Allamatti Reservoir; ಕುಡಿಯುವ ನೀರಿನಲ್ಲಿ ಮಣ್ಣು: ಎಚ್ಚರ ವಹಿಸಿ

10:27 PM Aug 07, 2023 | Team Udayavani |

ಕುಷ್ಟಗಿ: ಆಲಮಟ್ಟಿ ಜಲಾಶಯದಿಂದ (ಕೃಷ್ಣಾ ನದಿ) ಹುನಗುಂದ, ಇಲಕಲ್ಲ ಮತ್ತು ಕುಷ್ಟಗಿ ಪಟ್ಟಣಗಳಿಗೆ ಸಮಗ್ರ ಸಗಟು ನೀರು ಸರಬರಾಜು ಮಾಡಲಾಗುತ್ತಿದೆ. ಹುನಗುಂದ ಜಲಶುದ್ದೀಕರಣ ಘಟಕದಲ್ಲಿ ನೀರನ್ನು ಶುದ್ದೀಕರಿಸಿ ಕ್ಲೋರಿನೇಷನ್ ಮಾಡಿ ಬಿಡಲಾಗುತ್ತಿದೆ.

Advertisement

ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಹಿನ್ನೆಲೆ ಕೃಷ್ಣಾ ನದಿ ಪೂರ್ಣ ಪ್ರಮಾಣದಲ್ಲಿ ತುಂಬಿ ಹರಿಯುತ್ತಿರುವುದರಿಂದ ಹುನಗುಂದ ಪಟ್ಟಣದ ಜಲಶುದ್ದೀಕರಣ ಘಟಕದಲ್ಲಿ ನೀರನ್ನು ಶುದ್ದೀಕರಿಸಿ ಸಗಟು ನೀರು ಸರಬರಾಜು ಮಾಡುವ ಕುಡಿಯುವ ನೀರಿನಲ್ಲಿ ಮಣ್ಣು ಮಿಶ್ರಣದಿಂದ ಕೂಡಿರುವುದರಿಂದ ಸಾರ್ವಜನಿಕರಲ್ಲಿ ಈ ನೀರನ್ನು ಕಾಯಿಸಿ, ಆರಿಸಿ, ಸೋಸಿ ಕುಡಿಯಲು ಜನರಿಗೆ ಡಂಗೂರದ ಮೂಲಕ ತಿಳಿಸಲು ಹುನಗುಂದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next