Advertisement

5 ಶವ ಪತ್ತೆ:ಪತ್ನಿ ಶವ ಫ್ರಿಡ್ಜ್‌ನಲ್ಲಿ,ಮಕ್ಕಳದ್ದು ಸೂಟ್‌ಕೇಸ್‌ನಲ್ಲಿ

10:23 AM Aug 21, 2018 | Team Udayavani |

ಅಲಹಾಬಾದ್‌: ಒಂದೇ ಕುಟುಂಬದ ಐವರು ಮನೆಯೊಳಗೆ ಶವಗಳಾಗಿ ಪತ್ತೆಯಾದ ಘಟನೆ ಧೂಮ್‌ಗಂಜ್‌ ಎಂಬಲ್ಲಿ  ಸೋಮವಾರ ನಡೆದಿದೆ. ಭೀಕರ ದೃಶ್ಯಗಳಿಗೆ ಸಾಕ್ಷಿಯಾಗಿ ಪತ್ನಿಯ ಶವ ಫ್ರಿಡ್ಜ್‌ನಲ್ಲಿ, ಹೆಣ್ಣು ಮಕ್ಕಳಿಬ್ಬರ ಶವ ಸೂಟ್‌ಕೇಸ್‌ನಲ್ಲಿ, ಇನ್ನೋರ್ವಳ ಶವ ಕೋಣೆಯೊಂದರಲ್ಲಿ ಮತ್ತು  ಪತಿಯ ಶವ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ನೇತಾಡುತ್ತಿತ್ತು. 

Advertisement

ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದಾಗ ಭಯಾನಕ  ದೃಶ್ಯ ನೋಡಿ ಪೊಲೀಸ್‌ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಅಲಹಾಬಾದ್‌ನ ಹಿರಿಯ ಎಸ್‌ಪಿ ನಿತಿನ್‌ ತಿವಾರಿ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಪತಿಯೇ ನಾಲ್ವರನ್ನು ಹತ್ಯೆಗೈದು ಆತ್ಮಹತ್ಯೆಗೈದಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಹೇಳಿದ್ದಾರೆ. 

ಪೊಲೀಸರು ಶವಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next