ಪ್ರಯಾಗ್‌ರಾಜ್: “ಭಾರತದ ಭೂ ಪ್ರದೇಶದಾದ್ಯಂತ ಪ್ರಜೆಗಳಿಗೆ ಸಮಾನ ನಾಗರಿಕ ಸಂಹಿತೆಯನ್ನು ಸರ್ಕಾರ ಒದಗಿಸಬೇಕು’ ಎಂದು ಸಂವಿಧಾನದ 44ನೇ ವಿಧಿ ಹೇಳುತ್ತದೆ.
ಅದರಂತೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದನ್ನು ದೇಶದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಅಂತರ್‌ಧರ್ಮೀಯ ವಿವಾಹಗಳಿಗೆ ಸಂಬಂಧಿಸಿದ ಸುಮಾರು 17 ಅರ್ಜಿಗಳ ವಿಚಾರಣೆ ವೇಳೆ ನ್ಯಾ. ಸುನೀತ್ ಕುಮಾರ್ ನೇತೃತ್ವದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಂತರ್‌ಧರ್ಮೀಯ ದಂಪತಿಗಳು “ಅಪರಾಧಿಗಳಂತೆ ಬಿಂಬಿತವಾಗುವುದನ್ನು’ ತಡೆಯಬೇಕೆಂದರೆ, ದೇಶದ ಸಂಸತ್ “ಏಕ ಕೌಟುಂಬಿಕ ಸಂಹಿತೆ’ಯನ್ನು ಜಾರಿ ಮಾಡಬೇಕಾದ್ದು ಅಗತ್ಯ.
ಇದನ್ನೂ ಓದಿ:ದೇಶದ ಏಕತೆ, ಅಖಂಡತೆ ಮತ್ತು ಸಮಗ್ರತೆ ಕಾಪಾಡಲು ಸಂಕಲ್ಪ ಮಾಡೋಣ
ಪ್ರಸ್ತುತ ಸಂದರ್ಭದಲ್ಲಿ ಸಮಾನ ನಾಗರಿಕ ಸಂಹಿತೆಯ ಅವಶ್ಯಕತೆ ಹೆಚ್ಚೇ ಇದೆ ಎಂದೂ ನ್ಯಾಯಪೀಠ ಹೇಳಿದೆ. ಹಾಗಂತ ಅದನ್ನು “ಏಕಪಕ್ಷೀಯ’ವಾಗಿ ಜಾರಿಗೆ ತರಬಾರದು ಎಂದೂ ಸ್ಪಷ್ಟಪಡಿಸಿದೆ.