Advertisement

ಕಳಪೆ ಕೈಬರಹ: ವೈದ್ಯರಿಗೆ ತಲಾ 5000 ರೂ. ದಂಡ!

07:55 AM Oct 05, 2018 | Team Udayavani |

ಲಖನೌ: ಓದಲಾಗದಂತೆ ಔಷಧ ಚೀಟಿ ಬರೆದುಕೊಡುವುದು ವೈದ್ಯರ ವೈಶಿಷ್ಟ್ಯತೆ! ಆದರೆ ಉತ್ತರ ಪ್ರದೇಶದ ನ್ಯಾಯಾಲಯ ಇಂಥ ಮೂವರು ವೈದ್ಯರಿಗೆ ತಲಾ 5 ಸಾವಿರ ರೂ. ದಂಡ ವಿಧಿಸಿದೆ. ಕಳೆದ ವಾರ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದ ಮೂರು ಪ್ರಕರಣಗಳಲ್ಲಿ ಆರೋಪಿಗಳ ವೈದ್ಯಕೀಯ ಪರೀಕ್ಷೆಯ ವರದಿಯನ್ನು ಸಲ್ಲಿಸಲಾಗಿತ್ತು. ಆದರೆ ವೈದ್ಯರ ವರದಿಯಲ್ಲಿ ಕೈಬರಹ ಕಳಪೆಯಾಗಿತ್ತು. ಓದಲೂ ಸಾಧ್ಯವಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಆ ಮೂವರೂ ವೈದ್ಯರನ್ನು ಕಟಕಟೆಗೆ ಕರೆಸಿತು. ಅಲ್ಲದೆ ಅವರಿಗೆ ತಲಾ 5 ಸಾವಿರ ದಂಡವನ್ನೂ ವಿಧಿಸಿತು.

Advertisement

ಕೆಲಸದೊತ್ತಡದಿಂದಾಗಿ ಗಮನವಿಟ್ಟು ಬರೆಯಲಾಗಲಿಲ್ಲ ಎಂದು ವೈದ್ಯರು ಅಲವತ್ತುಕೊಂಡರು. ಇಂತಹ ವರದಿಗಳನ್ನು ಇನ್ನು ಕಂಪ್ಯೂಟರ್‌ನಲ್ಲಿ ಟೈಪ್‌ ಮಾಡಿ ಸಲ್ಲಿಸಬೇಕು ಎಂದು ನಂತರ ಕೋರ್ಟ್‌ ಸೂಚಿಸಿತು. ಇಂಥ ವರದಿಗಳು ನ್ಯಾಯಾಧೀಶರು ಅಥವಾ ವಕೀಲರು ಓದುವಂತಿರಬೇಕು. ಕೇವಲ ವೈದ್ಯರು ಓದಬಹುದಾದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರೆ, ಉದ್ದೇಶ ಪೂರೈಸಿದಂತಾಗುವುದಿಲ್ಲ ಎಂದು ಕೋರ್ಟ್‌ ಈ ವೇಳೆ ಆಕ್ಷೇಪ ವ್ಯಕ್ತಪಡಿಸಿತು.

Advertisement

Udayavani is now on Telegram. Click here to join our channel and stay updated with the latest news.

Next