ನವದೆಹಲಿ: ಭಾರತೀಯ ವಾಯುಪಡೆ ಸೇನೆ ಪಾಕ್ ಗಡಿಯೊಳಗೆ ನುಗ್ಗಿ ಉಗ್ರರ ಅಡಗು ತಾಣ ಧ್ವಂಸಗೊಳಿಸಿದ ಕ್ರಮಕ್ಕೆ ದೇಶಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದೆ. ಆದರೆ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಕೈಗೊಂಡ ಏರ್ ಸ್ಟ್ರೈಕ್ ಕಾರ್ಯಾಚರಣೆಗೆ ಐಎಎಫ್ ನ ಮಿರಾಜ್ 2000 ಯುದ್ಧ ವಿಮಾನ ಉಪಯೋಗಿಸಿದ್ದು ಯಾಕೆ? ಏನಿದರ ವಿಶೇಷತೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಪಾಕ್ ಉಗ್ರರ ಮೇಲೆ ಮಿರಾಜ್ 2000 ಯುದ್ಧ ವಿಮಾನದ ಮೂಲಕ ದಾಳಿ ನಡೆಸಿದ ಪರಿಣಾಮ ಅಡಗುತಾಣ ಧ್ವಂಸವಾಗಿ ಹೋಗಿದ್ದವು. ಇದು ಮಿರಾಜ್ ಯುದ್ಧ ವಿಮಾನದ ತಾಕತ್ತು.
ಡಸಾಲ್ಟ್ ಏವಿಯೇಷನ್ ಬಹುಪಯೋಗಿ ಯುದ್ಧ ವಿಮಾನ ತಯಾರಿಕಾ ಕಂಪನಿಯಾಗಿದೆ. ಡಸಾಲ್ಟ್ ಏವಿಯೇಷನ್ ಫ್ರಾನ್ಸ್ ಮೂಲದ ಕಂಪನಿ. 1978ರಲ್ಲಿ ಮೊತ್ತ ಮೊದಲ ಯುದ್ಧ ವಿಮಾನಗಳನ್ನು ಇದು ಪರಿಚಯಿಸಿತ್ತು. 1984ರಲ್ಲಿ ಫ್ರಾನ್ಸ್ ವಾಯುಪಡೆ, ಯುಎಇ ವಾಯುಪಡೆ, ಚೀನಾ ವಾಯುಪಡೆ ಹಾಗೂ ಭಾರತದ ವಾಯುಪಡೆಗೆ ಮಿರಾಜ್ ಯುದ್ಧ ವಿಮಾನಗಳನ್ನು ಪೂರೈಸಿತ್ತು.
1982ರಲ್ಲಿ ಭಾರತ ಫ್ರಾನ್ಸ್ ಜತೆ ಮಾತುಕತೆ ನಡೆಸುವ ಮೂಲಕ ಎಂಟು ಮಿರಾಜ್ 2000 ಯುದ್ಧ ವಿಮಾನ ಖರೀದಿಸಿತ್ತು. ಆ ಬಳಿಕ ಐಎಎಫ್ ಮಿರಾಜ್ 2000 ವಜ್ರ ಎಂದು ಹೆಸರಿಟ್ಟಿತ್ತು(ಸಂಸ್ಕೃತದಲ್ಲಿ ಬೆಳಕು ಅಂತ ಅರ್ಥ, ಇಂಗ್ಲಿಷ್ ನಲ್ಲಿ ಥಂಡರ್ ಬೋಲ್ಟ್ ಎಂಬುದಾಗಿ)!
ಕಾರ್ಗಿಲ್ ಯುದ್ಧದಲ್ಲಿ ಬಳಕೆಯಾಗಿತ್ತು ಈ ಮಿರಾಜ್ 2000!
1999ರಲ್ಲಿ ಕಾರ್ಗಿಲ್ ಯುದ್ಧ ನಡೆದಾಗ ಮಿರಾಜ್ 2000 ಶತ್ರುಗಳ ಹೆಡೆಮುರಿ ಕಟ್ಟಿಹಾಕುವಲ್ಲಿ ಮಹತ್ವದ ಪಾತ್ರವಹಿಸಿತ್ತು. ಹಿಮಾಲಯದ ತುತ್ತತುದಿಯಲ್ಲಿ ಮಿರಾಜ್ 2000 ಯುದ್ಧ ವಿಮಾನ ಕರಾರುವಕ್ಕು ದಾಳಿ ನಡೆಸಲು ವಾಯುಸೇನೆ ಯಶಸ್ವಿಯಾಗಿತ್ತು. ಮಿರಾಜ್ 2000 ಮೂಲಕ ಲೇಸರ್ ಗೈಡೆಡ್ ಬಾಂಬ್ ಗಳ ದಾಳಿ ನಡೆಸಲಾಗುತ್ತದೆ. ಇದು ಶತ್ರುಗಳ ಬಂಕರ್ ಅನ್ನು ನಾಶಪಡಿಸಲು ಮಿರಾಜ್ 2000 ಅನ್ನು ಉಪಯೋಗಿಸಲಾಗುತ್ತದೆ.
ಡಸಾಲ್ಟ್ ಏವಿಯೇಷನ್ ಕಂಪನಿ ಮಿರಾಜ್ 2000ಸಿ, ಮಿರಾಜ್ 2000ಬಿ, ಮಿರಾಜ್ 2000ಎನ್, ಮಿರಾಜ್ 2000ಡಿ, ಮಿರಾಜ್ 20005ಎಫ್, ಮಿರಾಜ್ 5ಮಾರ್ಕ್ 2, ಮಿರಾಜ್ 2000ಇ, ಮಿರಾಜ್ ಬಿಆರ್, ಮಿರಾಜ್ 9ಹೀಗೆ ವಿವಿಧ ಶ್ರೇಣಿಯ ಯುದ್ಧ ವಿಮಾನ ತಯಾರಿಸಿತ್ತು.
ಭಾರತದ ಬಳಿ ಇದೀಗ ಆಧುನಿಕ(ಅಪ್ ಗ್ರೇಡ್) ಮಿರಾಜ್ 2000ಎಚ್, ಮಿರಾಜ್ 2000ಟಿಐ ಸೇರಿದಂತೆ ಒಟ್ಟು 50 ಮಿರಾಜ್ ಯುದ್ಧ ವಿಮಾನಗಳಿವೆ.
ಮಿರಾಜ್ 2000 ಹೇಗಿರುತ್ತೆ?
ಮಿರಾಜ್ 2000 ಯುದ್ಧ ವಿಮಾನದಲ್ಲಿ ಒಬ್ಬರೇ ಒಬ್ಬರು ಕ್ರ್ಯೂ(ಪೈಲಟ್) ಇರುತ್ತಾರೆ. ಇದರ ಉದ್ದ 14.36 ಮೀಟರ್ (47 ಅಡಿ ಉದ್ದ). ರೆಕ್ಕೆಯ ಉದ್ದ 9.13 ಮೀಟರ್(29 ಅಡಿ ಅಗಲ), ಸುಮಾರು 5,20 ಮೀಟರ್ ಎತ್ತರ, ರೆಕ್ಕೆಯ ವಿಸ್ತಾರ 41 ಮೀಟರ್, ವಿಮಾನದ (ಖಾಲಿ) ತೂಕ 7,500 ಕೆಜಿ, ಲೋಡೆಡ್ ವಿಮಾನದ ತೂಕ 13, 800 ಕೆಜಿ.
ಈ ವಿಮಾನ ಗರಿಷ್ಠ 2,336 ಕಿಲೋ ಮೀಟರ್ ವೇಗದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. 1,550 ಕಿಲೋ ಮೀಟರ್ ದೂರದವರೆಗೆ ಬಾಂಬ್ ಹಾಕಬಲ್ಲ ಶಕ್ತಿ ಇದಕ್ಕಿದೆ. ಬರೋಬ್ಬರಿ 56 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುವ ತಾಕತ್ತು ಮಿರಾಜ್ 2000 ಯುದ್ಧ ವಿಮಾನಕ್ಕಿದೆ.
ಮಿರಾಜ್ 2000 ವಿಮಾನದಲ್ಲಿ ಗನ್, 58ಮಿ.ಮೀಟರ್ ನ ರಾಕೆಟ್ ಗಳು, ವಾಯು ನೆಲೆಯಿಂದ ವಾಯುನೆಲೆಗೆ ಸಿಡಿಸಬಲ್ಲ ಮಿಸೈಲ್, ಆಕಾಶದಿಂದ ಭೂಮಿಗೆ ಸಿಡಿಸಬಲ್ಲ ಮಿಸೈಲ್ ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವಿದೆ.
ಯಾವ ದೇಶದ ಬಳಿ ಎಷ್ಟು ಮಿರಾಜ್ ಯುದ್ಧ ವಿಮಾನಗಳಿವೆ ಗೊತ್ತಾ?
ಅಮೆರಿಕದ ಬಳಿ ಒಟ್ಟು 315 (2000ಸಿ 124, 20005ಎಫ್ 37, 2000ಡಿ 86, 2000ಎನ್ 75, 2000ಬಿ 30)
ಯುಎಇ ಬಳಿ ಒಟ್ಟು 67 (2000ಎಡಿ 22, 2000-9 19, 2000-9ಡಿ 12, 2000ಆರ್ ಎಡಿ 8, 2000ಡಿಎಡಿ 6)
ಚೀನಾ ಬಳಿ ಒಟ್ಟು 60 (2000 5ಇಐ 48, 20005ಡಿಐ 12)
ಗ್ರೀಸ್ ಬಳಿ ಒಟ್ಟು 44 (2000 ಇಜಿ 17, 2000 5ಎಂಕೆ 2 25, 2000ಬಿಜಿ 2)
ಈಜಿಪ್ಟ್ ಬಳಿ ಒಟ್ಟು 20( 2000ಇಎಂ 16, 2000 ಬಿಎಂ 4)
ಬ್ರೆಜಿಲ್ ಬಳಿ ಒಟ್ಟು 12 (2000ಸಿ 10, 2000 ಬಿ 2)
ಕತಾರ್ ಬಳಿ ಒಟ್ಟು 12 (20005ಇಡಿಎ 9,20005ಡಿಡಿಎ 3)
ಪೆರು ಬಳಿ ಒಟ್ಟು 12 (2000ಪಿ 10, 2000ಡಿಪಿ 2)