Advertisement
ಅಡ್ವೆಂಚರ್ ಅಂದರೆ ಈಗಿನ ಜಮಾನಾದ ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಬೈಕ್ ರೈಡ್ ಅಂದರೆ ಯುವಕರು ಹುಚ್ಚೆದ್ದು ಕುಣಿಯುತ್ತಾರೆ. ಭಾರತದಲ್ಲಿ ಅಡ್ವೆಂಚರ್ ಬೈಕ್‌ಗಳು ಕಡಿಮೆ. ಹಿಮಾಲಯನ್ ಅಡ್ವೆಂಚರ್ ಬೈಕ್ ಮಾರುಕಟ್ಟೆಗೆ ಬಂದಿದ್ದು ಬಿಟ್ಟರೆ, ಬೇರೆ ಭಾರತೀಯ ಬೈಕ್‌ಗಳು ಬಂದಿಲ್ಲ.
Related Articles
ಇದು 200 ಸಿಸಿ ಬೈಕ್, ಎತ್ತರಿಸಿದ ಶಾಕ್ಸ್‌ಗಳು, ದೊಡ್ಡ ಇಂಧನ ಟ್ಯಾಂಕ್, ಡಿಜಿಟಲ್ ಮೀಟರ್, ಸಿಂಗಲ್ ಚಾನೆಲ್ ಎಬಿಎಸ್ ವ್ಯವಸ್ಥೆ, ಸುಧಾರಿತ ಬ್ರೇಕಿಂಗ್, ಮುಂಭಾಗ ಮತ್ತು ಹಿಂಭಾಗದಲ್ಲಿ ಎಲ್‌ಇಡಿ ಲೈಟ್‌ಗಳನ್ನು ಇದು ಹೊಂದಿದೆ. ಸೀಟುಗಳು ಉದ್ದವಿದ್ದು, ಹಿಂದಿನ ಗ್ರ್ಯಾಬ್‌ರೈಲ್‌ನಲ್ಲಿ ಟೂರಿಂಗ್ ವೇಳೆ ಸರಕುಗಳನ್ನು ಇಡುವಂತಿದೆ.
Advertisement
ಸೈಲೆನ್ಸರ್ ಅನ್ನು ಎತ್ತರಿಸಿ ಕೊಡಲಾಗಿದ್ದು, ನೀರಿರುವ ಸ್ಥಳದಲ್ಲೂ ನಿರಾಯಾಸ ಚಾಲನೆ ಸಾಧ್ಯ. ಎಲ್ಲದಕ್ಕಿಂತ ಹೆಚ್ಚಾಗಿ 210 ಎಂ.ಎಂ. ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ. ಇದರಿಂದ ಕಠಿಣ ಗುಡ್ಡಗಾಡಿನ ಪ್ರದೇಶದಲ್ಲೂ ಸುಗಮವಾಗಿ ಬೈಕ್ ಚಾಲನೆ ಸುಗಮವಾಗಿ ಮಾಡಬಹುದು.ಅನುಕೂಲಗಳು
ಸ್ಟೀಲ್ ಎಂಜಿನ್‌ಗಾರ್ಡ್ ಇದೆ. ಇದರಿಂದ ಕೊರಕಲು ಪ್ರದೇಶಗಳಲ್ಲಿ ಸವಾರಿ ವೇಳೆ ಎಂಜಿನ್‌ಗೆ ಆಗುವ ಹಾನಿ ತಪ್ಪಿಸಬಹುದು. ಎಲ್‌ಇಡಿ ಲೈಟ್‌ಗಳು ಪ್ರಕಾಶಮಾನವಾಗಿವೆ. ಮುಂಭಾಗ 190 ಎಂ.ಎಂ. ಮತ್ತು ಹಿಂಭಾಗ 170 ಎಂ.ಎಂ.ನ ಸಸ್ಪೆನ್ಷನ್ ಇದ್ದು ಆರಾಮದಾಯಕವಾಗಿದೆ. ಹಿಂಭಾಗ 21 ಇಂಚಿನ ಟಯರ್ ಮತ್ತು ಮುಂಭಾಗ 18 ಇಂಚಿನ ಸಿಎಟ್ ಟಯರ್ ಇದ್ದು ಹೆಚ್ಚು ಗ್ರಿಪ್ ಹೊಂದಿದೆ. ಬ್ರೇಕಿಂಗ್‌ಗಾಗಿ ಹಿಂಭಾಗದಲ್ಲಿ 220 ಎಂ.ಎಂ. ಡಿಸ್ಕ್ ಮತ್ತು ಮುಂಭಾಗದಲ್ಲಿ 276 ಎಂ.ಎಂ. ಡಿಸ್ಕ್ ಹೊಂದಿದೆ. ಒಟ್ಟು 154 ಕೆ.ಜಿ. ಹೊಂದಿದ್ದು ಹ್ಯಾಂಡ್ಲಿಂಗ್‌ಗೆ ಅನುಕೂಲಕರವಾಗಿದೆ. ಎಂಜಿನ್ ಸಾಮರ್ಥ್ಯ
199.6 ಸಿಸಿಯ 2 ವಾಲ್ವ್ ನ ಸಿಂಗಲ್ ಸಿಲಿಂಡರ್ ಎಂಜಿನ್ ಇದಕ್ಕಿದೆ. 18.4 ಬಿಎಚ್‌ಪಿ ಶಕ್ತಿ ಮತ್ತು 17.1 ಎನ್.ಎಂ.ಟಾರ್ಕ್ ಇದರಲ್ಲಿದೆ. 5 ಸ್ಪೀಡ್ ಗಿಯರ್ ಬಾಕ್ಸ್ , ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಹೊಂದಿದೆ. ಲೆಕ್ಕಾಚಾರ ಹಾಕುವುದಾದರೆ 200 ಸಿಸಿ ಬೈಕ್‌ಗೆ ಈ ಸಾಮರ್ಥ್ಯ ಕಡಿಮೆಯೇ. ಆದರೂ ಹೀರೋ ತನ್ನ ಮಾರುಕಟ್ಟೆ ಪ್ಲಾನ್‌ಗೆ ಅನುಗುಣವಾಗಿ ಬೈಕ್ ಅನ್ನು ಹೀಗೆ ರೂಪಿಸಿದೆ. ತಾಂತ್ರಿಕ ಮಾಹಿತಿ
199.6 ಸಿಸಿ
18.4 ಬಿಎಚ್‌ಪಿ ಶಕ್ತಿ
17.1 ಎನ್.ಎಂ.ಟಾರ್ಕ್
ಸಿಂಗಲ್ ಚಾನೆಲ್ ಎಬಿಎಸ್
ಫ್ಯೂಯಲ್ ಇಂಜೆಕ್ಷನ್
ಡಿಜಿಟಲ್ ಮೀಟರ್ — ಈಶ