Advertisement

ಸೇನೆಗೆ ಎಲ್‌ಪಿಜಿ ಪೂರೈಸುವ ಸ್ಥಾವರದಲ್ಲಿ ಮಹಿಳೆಯರದ್ದೇ ಪಾರುಪತ್ಯ!

11:21 PM Jan 31, 2021 | Team Udayavani |

ಲೇಹ್‌: ಲಡಾಖ್‌ನ ಕೊರೆಯುವ ಚಳಿಯಲ್ಲಿ ಚೀನಾ ಸೇನೆಗೆ ಎದುರಾಗಿ ನಿಂತಿರುವ ನಮ್ಮ 50 ಸಾವಿರದಷ್ಟು ಯೋಧರು ಖಾಲಿ ಹೊಟ್ಟೆಯಲ್ಲಿರದಂತೆ ನೋಡಿಕೊಳ್ಳುತ್ತಿರುವವರು ಯಾರು ಗೊತ್ತಾ?

Advertisement

ಲೇಹ್‌ನ ಎಲ್‌ಪಿಜಿ ಸ್ಥಾವರದಲ್ಲಿ ಕಾರ್ಯನಿರ್ವಹಿಸುವ ಈ 12 ಮಂದಿ ಮಹಿಳೆಯರು!

ಹೌದು. ಲಡಾಖ್‌ನ ಎಲ್‌ಪಿಜಿ ಸಿಲಿಂಡರ್‌ ಮರುಭರ್ತಿ ಕೇಂದ್ರದಿಂದಲೇ ಭಾರತೀಯ ಯೋಧರಿಗೆ ಅಡುಗೆ ಅನಿಲ ಪೂರೈಕೆಯಾಗುತ್ತದೆ. ವಿಶೇಷವೆಂದರೆ, ಈ ಕೇಂದ್ರವನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸುತ್ತಿದ್ದು, ರಕ್ಷಣಾ ಪಡೆಗಳಿಗೆ ಸಮಯಕ್ಕೆ ಸರಿಯಾಗಿ ಅಡುಗೆ ಅನಿಲ ಸರಬರಾಜು ಆಗುವಂತೆ ಇವರು ನೋಡಿಕೊಳ್ಳುತ್ತಿದ್ದಾರೆ.

ಯಾವಾಗ ಹಿಮ ಋತು ಆರಂಭವಾಗಿ, ಹಿಮದ ಮಳೆ ಸುರಿಯಲಾರಂಭಿಸುತ್ತದೋ, ಆಗ ಲಡಾಖ್‌ ಮತ್ತು ದೇಶದ ಇತರೆ ಪ್ರದೇಶಗಳ ನಡುವಿನ ಸಂಪರ್ಕವೇ ಕಡಿತಗೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಲಡಾಖ್‌ಗಿರುವ ಏಕೈಕ ಅಡುಗೆ ಅನಿಲದ ಮೂಲವೇ ಈ ಸ್ಥಾವರ. ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಕಂಪನಿಯು ಈ ಎಲ್‌ಪಿಜಿ ಸ್ಥಾವರವನ್ನು ನಿರ್ಮಿಸಿದೆ.
ಇಲ್ಲಿ ಮರುಭರ್ತಿ ಆಗುವ ಎಲ್‌ಪಿಜಿ ಪೈಕಿ ಶೇ.40ರಷ್ಟು ಹೋಗುವುದು ರಕ್ಷಣಾ ಪಡೆಗಳಿಗೆ. ಇದು ಮಹಿಳೆಯರೇ ನಿರ್ವಹಿಸುತ್ತಿರುವ ದೇಶದ ಏಕೈಕ ಎಲ್‌ಪಿಜಿ ಘಟಕ ಎಂಬ ಹೆಗ್ಗಳಿಕೆ ಪಡೆದಿದೆ.

ಇದನ್ನೂ ಓದಿ:ತವರಲ್ಲಿ ಅತ್ಯಧಿಕ ಟೆಸ್ಟ್‌ ಗೆಲುವು : ದಾಖಲೆಯತ್ತ ವಿರಾಟ್‌ ಕೊಹ್ಲಿ

Advertisement

ಮಹಿಳಾಮಣಿಗಳ ಕೆಲಸವೇನು?
ಉತ್ಪಾದನಾ ಕೆಲಸ, ಸಿಲಿಂಡರ್‌ ಭರ್ತಿ ಮಾಡುವುದು, ಸೀಲ್‌ಗ‌ಳ ಗುಣಮಟ್ಟ ಪರೀಕ್ಷೆ, ಭದ್ರತೆ, ದಾಖಲೆಗಳ ನಿರ್ವಹಣೆ, ಕ್ಯಾಂಟೀನ್‌ ನಿರ್ವಹಣೆ ಮತ್ತಿತರ ಎಲ್ಲ ತಾಂತ್ರಿಕ ಹಾಗೂ ತಾಂತ್ರಿಕೇತರ ಕೆಲಸಗಳನ್ನು ಮಹಿಳೆಯರೇ ಮಾಡುತ್ತಾರೆ. ಭದ್ರತಾ ಅಧಿಕಾರಿಯಾಗಿರುವ ಸೇಟನ್‌ ಆಂಗೊ¾à ಅವರನ್ನು ಹೊರತುಪಡಿಸಿ ಉಳಿದ ಎಲ್ಲ ಮಹಿಳೆಯರೂ ಗುತ್ತಿಗೆ ಕೆಲಸಗಾರರಾಗಿದ್ದಾರೆ. ಕೇವಲ ಲೋಡಿಂಗ್‌, ಅಧಿಕ ಭಾರದ ವಸ್ತುಗಳ ಹೊರುವಿಕೆಯನ್ನು ಮಾತ್ರ ಐವರು ಪುರುಷರು ನೋಡಿಕೊಳ್ಳುತ್ತಾರೆ.

ಗೌರವಸೂಚಕವಾಗಿ ನಾವು ರಕ್ಷಣಾ ಪಡೆಗಳಿಗೆ ಹೋಗುವಂಥ ಸಿಲಿಂಡರ್‌ಗಳನ್ನು ಹಲವು ಬಾರಿ ಪರೀಕ್ಷಿಸಿಯೇ ಕಳುಹಿಸುತ್ತೇವೆ ಎಂದು ಹೇಳುತ್ತಾರೆ ಘಟಕದಲ್ಲಿ ಕಾರ್ಯನಿರ್ವಹಿಸುವ ಪದ್ಮಾ ಸೋಗ್ಯಾಲ್‌.

ಎಲ್ಲಿದೆ ಈ ಎಲ್‌ಪಿಜಿ ಘಟಕ?– ಲಡಾಖ್‌ ಜಿಲ್ಲೆಯ ಫೇ ಗ್ರಾಮದಲ್ಲಿ
ಸಮುದ್ರ ಮಟ್ಟದಿಂದ ಎಷ್ಟು ಎತ್ತರದಲ್ಲಿದೆ?– 11,800 ಅಡಿ
ಇಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು– 12

ಥರಗುಟ್ಟುವ ಚಳಿಯಲ್ಲೂ ಯಾವುದೇ ಹಿಂಜರಿಕೆಯಿಲ್ಲದ ಈ ಮಹಿಳೆಯರು ಇಡೀ ದಿನ ಕೆಲಸ ಮಾಡುತ್ತಾರೆ. ಹೆಣ್ಣುಮಕ್ಕಳ ಶಕ್ತಿ ಎಂಥಾದ್ದು ಎನ್ನುವುದನ್ನು ಇವರನ್ನು ನೋಡಿ ತಿಳಿಯಬೇಕು.
– ಸುಜಯ್‌ ಚೌಧರಿ, ಸ್ಥಾವರದ ಉಸ್ತುವಾರಿ

ಇಲ್ಲಿಗೆ ಸೇರುವ ಮುನ್ನ ನನಗೆ ರೆಗ್ಯುಲೇಟರ್‌ ಫಿಕ್ಸ್‌ ಮಾಡಲೂ ಬರುತ್ತಿರಲಿಲ್ಲ. ಈಗ ಘಟಕದಿಂದ ಹೊರಹೋಗುವ ಪ್ರತಿಯೊಂದು ಸಿಲಿಂಡರ್‌ಗೂ ನಾನೇ ಜವಾಬ್ದಾರಿ. ಇದು ನಾವು ದೇಶಕ್ಕಾಗಿ ಮತ್ತು ನಮ್ಮ ಯೋಧರಿಗಾಗಿ ಮಾಡುತ್ತಿರುವ ಸೇವೆ.
– ರಿಗಿlನ್‌ ಲಾಡೋ, ಸ್ಥಾವರದ ಸಿಬ್ಬಂದಿ

Advertisement

Udayavani is now on Telegram. Click here to join our channel and stay updated with the latest news.

Next