Advertisement
ಈ ಹಿಂದೆ ಲಘು ವಾಹನಗಳಾದ ದ್ವಿಚಕ್ರ ವಾಹನಗಳು, ಕಾರು ಜೀಪು, ವ್ಯಾನ್, ಟೆಂಪೋ ಟ್ರಾವೆಲರ್ ಹಾಗೂ ಸಾಮಾನ್ಯ ಬಸ್ಸು, ರಾಜಹಂಸ, ಐರಾವತ, ಖಾಸಗಿ ಲಕ್ಸುರಿ ಬಸ್ಸುಗಳ ಸಂಚಾರಕ್ಕೆ ಶಿರಾಡಿಘಾಟ್ ರಸ್ತೆ ಮುಕ್ತಗೊಳಿಸಲಾಗಿತ್ತು. ನ.15ರ ಬೆಳಗ್ಗೆ 6 ಗಂಟೆಯಿಂದ ಎಲ್ಲಾ ಬಗೆಯ ವಾಹನಗಳ ಸಂಚಾರಕ್ಕೂ ಅಂದರೆ ಭಾರೀ ವಾಹನಗಳಾದ ಎಲ್. ಸಿ., ಬುಲೆಟ್ ಟ್ಯಾಂಕರ್, ಕಾರ್ಗೊ ಕಂಟೈನರ್, ಲಾಂಗ್ ಚಾಸೀಸ್ ವಾಹನಗಳು ಸೇರಿದಂತೆ ಎಲ್ಲಾ ಬಗೆಯ ವಾಹನಗಳ ಸಂಚಾರಕ್ಕೂ ಶಿರಾಡಿಘಾಟ್ ರಸ್ತೆಯನ್ನು ಮುಕ್ತಗೊಳಿಸಿ ಹಾಸನ ಜಿಲ್ಲಾಧಿಕಾರಿ ಯವರು ಅದೇಶ ಹೊರಡಿಸಿದ್ದಾರೆ.
Related Articles
Advertisement
ಆದರೆ, ನಾಲ್ಕು ಕಡೆ ಏಕಮುಖ ಸಂಚಾರ ವಿದ್ದರಿಂದ ಘನವಾಹನಗಳ ವಾಹನಕ್ಕೆ ಅನುಮತಿ ನೀಡಿರಲಿಲ್ಲ. ಆದರೆ, ಸಾರ್ವಜನಿಕ ವಲಯ ದಿಂದ ಘನವಾಹನಗಳ ಸಂಚಾರಕ್ಕೆ ಅವಕಾಶ ನೀಡುವಂತೆ ವ್ಯಾಪಕ ಒತ್ತಡಗಳು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ 12ರಿಂದ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿದ್ದರು.
ಆದರೆ, ಹಾಸನಾಂಬ ಉತ್ಸವ ಇದ್ದ ಕಾರಣ ಇಲ್ಲಿನ ಜಿಲ್ಲಾಡಳಿತ ಭಾರೀ ವಾಹನಗಳ ಸಂಚಾರಕ್ಕೆ ಅಂದು ಅವಕಾಶ ನೀಡಿರಲಿಲ್ಲ. ಹಾಸನಾಂಬ ಉತ್ಸದ ಮುಗಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚೆ ನಡೆಸಿದ ಬಳಿಕ ನ.14ರಿಂದ ಘನ ವಾಹನಗಳ ಸಂಚಾರಕ್ಕೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅನುಮತಿ ನೀಡಿದ್ದಾರೆ.
ಶಿರಾಡಿ ರಸ್ತೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡದ ಕಾರಣ ಸುತ್ತಿ ಬಳಸಿ ಕರಾವಳಿ ಜಿಲ್ಲೆಗೆ ಹೋಗಬೇಕಿತ್ತು. ಇದರಿಂದ ಸಾವಿರಾರು ರೂ. ಇಂಧನ ವಿನಾಕಾರಣ ಪೋಲಾಗುತ್ತಿತ್ತು. ಇದೀಗ ಶಿರಾಡಿ ಘಾಟಿ ರಸ್ತೆ ಘನ ವಾಹನಗಳ
ಸಂಚಾರಕ್ಕೂ ಮುಕ್ತಗೊಳಿಸಿರುವುದಕ್ಕೆ ಜಿಲ್ಲಾಧಿಕಾರಿಗಳಿಗೆ ಅಭಿನಂದನೆ.
ಸಂಜೀತ್‌ಶೆಟ್ಟಿ, ಶಿರಾಡಿ ರಸ್ತೆ ಉಳಿಸಿ ಹೋರಾಟ ಸಮಿತಿ ಅಧ್ಯಕ