ಮುಂಬೈ: ಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik) ಅವರು ಇದೀಗ ತನ್ನ ಸಾರ್ವಕಾಲಿಕ ಭಾರತ ಇಲೆವೆನ್ (All-Time India XI )ಪ್ರಕಟಿಸಿದ್ದಾರೆ. ಭಾರತ ತಂಡವನ್ನು ಪ್ರತಿನಿಧಿಸಿದ ಕೆಲವು ಅತ್ಯುತ್ತಮ ಕ್ರಿಕೆಟಿಗರೊಂದಿಗೆ ಆಡಿರುವ ಕಾರ್ತಿಕ್, ಇದೀಗ ತನ್ನ ಸಾರ್ವಕಾಲಿಕ ಇಲೆವೆನ್ ಪ್ರಕಟ ಮಾಡಿದ್ದಾರೆ.
ದಿನೇಶ್ ಕಾರ್ತಿಕ್ ಅವರು ಪ್ರಕಟಿಸಿರುವ ತಂಡದಲ್ಲಿ ಹಿರಿಯ ಆಟಗಾರರು, ಸ್ಪೋಟಕ ಆಟಗಾರರು, ಆಲ್ ರೌಂಡರ್ ಗಳು, ವಿಶ್ವ ದರ್ಜೆಯ ಸ್ಪಿನ್ನರ್ ಗಳು ಮತ್ತು ವೇಗಿಗಳು ಸೇರಿದ್ದಾರೆ. ಆದರೆ ಅಚ್ಚರಿ ಎಂಬಂತೆ ಭಾರತಕ್ಕೆ ಎರಡು ವಿಶ್ವಕಪ್ ಗೆದ್ದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ತಂಡದಲ್ಲಿ ಜಾಗ ನೀಡಲಿಲ್ಲ.
ಕಾರ್ತಿಕ್ ಅವರ ತಂಡದಲ್ಲಿ ವೀರೆಂದ್ರ ಸೆಹವಾಗ್ ಮತ್ತು ರೋಹಿತ್ ಶರ್ಮಾ ಇದ್ದರೆ, ʼಗ್ರೇಟ್ʼ ಗಳಾದ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮಧ್ಯಮ ಕ್ರಮಾಂಕದಲ್ಲಿದ್ದಾರೆ.
ದಿನೇಶ್ ಕಾರ್ತಿಕ್ ಅವರ ತಂಡದಲ್ಲಿ ಯಾವುದೇ ವಿಕೆಟ್ ಕೀಪರ್ ಗೆ ಸ್ಥಾನ ಪಡೆದಿಲ್ಲ. 2003ರ ವಿಶ್ವಕಪ್ ವೇಳೆ ರಾಹುಲ್ ದ್ರಾವಿಡ್ ಅವರು ಕೀಪಿಂಗ್ ಜವಾಬ್ದಾರಿ ಹೊತ್ತಿದ್ದ ಕಾರಣ ಅವರೇ ಈ ತಂಡದ ಕೀಪರ್ ಎಂದು ಅಂದಾಜಿಸಬಹುದು.
ದಿನೇಶ್ ಕಾರ್ತಿಕ್ ಅವರ ಸಾರ್ವಕಾಲಿಕ ಭಾರತ ಇಲೆವೆನ್
1 ವೀರೆಂದ್ರ ಸೆಹವಾಗ್
2 ರೋಹಿತ್ ಶರ್ಮಾ
3 ರಾಹುಲ್ ದ್ರಾವಿಡ್
4 ಸಚಿನ್ ತೆಂಡೂಲ್ಕರ್
5 ವಿರಾಟ್ ಕೊಹ್ಲಿ
6 ಯುವರಾಜ್ ಸಿಂಗ್
7 ರವೀಂದ್ರ ಜಡೇಜಾ
8 ರವಿಚಂದ್ರನ್ ಅಶ್ವಿನ್
9 ಅನಿಲ್ ಕುಂಬ್ಳೆ
10 ಜಸ್ಪ್ರೀತ್ ಬುಮ್ರಾ
11 ಜಹೀರ್ ಖಾನ್