Advertisement

ಸಂಕೀರ್ತನೆಯಿಂದ ದುರಿತ ದೂರ, ಕುಲಕೋಟಿ ಉದ್ಧಾರ; ಕಾಶಿ ಮಠಾಧೀಶ

03:08 PM Dec 07, 2022 | Team Udayavani |

ಮೂಡುಬಿದಿರೆ: ನಿತ್ಯ ನಿರಂತರ ಹರಿನಾಮ ಸಂಕೀರ್ತನೆಯಿಂದ ಅಂತ್ಯಕಾಲದಲ್ಲಿ ದುರಿತ ದೂರವಾಗಿ, ಮನಸ್ಸು ಪರಮಾತ್ಮನಲ್ಲಿ ನೆಲೆಸಲು ಶಕ್ತವಾಗುವುದು. ಕಲಿಯುಗದೊಳು ಹರಿನಾಮವ ನೆನೆದರೆ ಕುಲಕೋಟಿಗಳು ಉದ್ಧರಿಸುವವು ಎಂದು ಕಾಶಿ ಮಠಾಧೀಶ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ನುಡಿದರು.

Advertisement

ಮೂಡುವೇಣುಪುರ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಶ್ರೀ ವೆಂಕಟರಮಣ ಭಜನ ಮಂಡಳಿಯ ವಜ್ರ ಮಹೋತ್ಸವ ಸಂಬಂಧ ಆಯೋಜಿಸಲಾದ ಭಜನ ಸಪ್ತಾಹ ಮಹೋತ್ಸವದಲ್ಲಿ ನಾಲ್ಕು ದಿನಗಳಿಂದ ಇಲ್ಲಿ ಮೊಕ್ಕಾಂ ಇದ್ದು ಸುಳ್ಯ ಮೊಕ್ಕಾಂಗೆ ನಿರ್ಗಮಿಸುವ ಮುನ್ನ ಆಶೀರ್ವಚನ ನೀಡಿದರು.

ಸಂಧ್ಯಾವಂದನೆಯು ನಿತ್ಯ ನೈಮಿತ್ತಿಕ, ಸಮಯ ನಿಬಂìಧ ವ್ಯಾಪ್ತಿಯಲ್ಲಿ ಮಾಡಲೇ ಬೇಕಾದುದು. ಭಜನೆ (ಹರಿನಾಮ ಕೀರ್ತನೆ)ಯನ್ನು ಯಾವುದೇ ಸಮಯದಲ್ಲಿ ಮಾಡಬಹುದು ಎಂದರು ಸೋಮವಾರ ಮುಂಜಾನೆ ವೆಂಕಟ ರಮಣ ದೇವರಿಗೆ ಬೆಳಗಿದ ಆರತಿಯನ್ನು ಸಪ್ತಾಹ ದೀಪಕ್ಕೆ ತೋರಿಸಿ, ಬಳಿಕ ದೇವಸ್ಥಾನದ ಒಳಸುತ್ತಿನಲ್ಲಿ ದೀಪವನ್ನು ಹೊತ್ತೂಯ್ದು ಪುನಃ ನಡೆಯಲ್ಲಿಸಿ ಏಳುದಿನ ಆಹೋರಾತ್ರಿ ನಡೆದ ಭಜನ ಸಪ್ತಾಹಕ್ಕೆ ಮಂಗಲ ಹಾಡಲಾಯಿತು. ದೀಪ ವಿಸರ್ಜನೆ, ಉರುಳು ಸೇವೆ, ಮುಕ್ಕೋಟಿ ದ್ವಾದಶಿ ಉತ್ಸವ ಜರಗಿತು. ಪ್ರ. ಅರ್ಚಕ ವೇ| ಮೂ| ಹರೀಶ್‌ ಭಟ್‌ ಶ್ರೀ ದೇವರಲ್ಲಿ ಕೃತಜ್ಞತ ಪೂರ್ವಕ ಪ್ರಾರ್ಥನೆ ಸಲ್ಲಿಸಿದರು.

ಆಡಳಿತ ಮೊಕ್ತೇಸರ ಜಿ. ಉಮೇಶ್‌ ಪೈ ಅವರು ದೇವರನ್ನಲಂಕರಿಸಿದ ಹೂಮಾಲೆ ಯನ್ನು ಭಜನ ಮಂಡಳಿಯ ಅಧ್ಯಕ್ಷ ವಿಘ್ನೇಶ ಪ್ರಭು ಕೊರಳಿಗೆ ಅಭಿನಂದನಪೂರ್ವಕ ತೊಡಿಸಿ ಗೌರವಿಸಿದರು.

ಆಡಳಿತ ಮಂಡಳಿಯ ಟ್ರಸ್ಟಿಗಳು, ಭಜನ ಮಂಡಳಿ ಸದಸ್ಯರು, ಬಹುಸಂಖ್ಯೆ ಯಲ್ಲಿ ಸಮಾಜಬಾಂಧವರು ಉಪಸ್ಥಿತರಿ ದ್ದರು. ಮಧ್ಯಾಹ್ನ ಮಹಾಪೂಜೆ, ಭೂರಿ ಸಮಾರಾಧನೆ, ಸಂಜೆ ಮರುಭಜನೆ, ರಾತ್ರಿಪೂಜೆ, ಉತ್ಸವ ಜರಗಿದವು.ಭಜನ ಸಪ್ತಾಹದಲ್ಲಿ ಒಟ್ಟು 105 ಭಜನ ಮಂಡಳಿ ಗಳು, ಭಜನ್‌ ಸಂಧ್ಯಾ ಕಾರ್ಯಕ್ರಮಗಳಲ್ಲಿ ಸುಮಾರು 60 ಮಂದಿ ಕಲಾವಿದರು ಪಾಲ್ಗೊಂಡಿದ್ದರು.

Advertisement

ವಿಶೇಷವಾಗಿ ಚೇಂಪಿ ರಾಮಚಂದ್ರ ಭಟ್‌ ಬಳಗದವರ ಗಿಂಡಿ ನೃತ್ಯ, ಸಾಂಪ್ರದಾಯಿಕ ಉಡುಪಿನೊಂದಿಗೆ ಹೆಬ್ರಿ ಮನೋಹರ ಪ್ರಭು ಅವರ ಸಂಕೀರ್ತನ ನೃತ್ಯ, ಮಹಿಳೆಯರ ಸಹಿತ ಯುವಕಲಾವಿದರ ರಂಗೋಲಿ, ಕಲಾವಿದ ರಘನಂದನ ಕಾಮತ್‌ ರೂಪಿಸಿದ ಮೃಣ್ಮಯ ವಿಠೊಭ ಮೂರ್ತಿಯ ಅಲಂಕಾರ, ದೇವಸ್ಥಾನದ ಪುಷ್ಪಾಲಂಕಾರ, ದೀಪಾಲಂಕಾರ ಮೊದಲಾದ ಆಕರ್ಷಣೆಗಳೊಂದಿಗೆ ಸಪ್ತಾಹ ಸಂಪನ್ನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next