Advertisement

‘ಪರಿಸರದ ಉಳಿವಿಗೆ ಸಮಾಜದ ಸರ್ವರೂ ಕೈ ಜೋಡಿಸಿ’

01:07 AM Jun 25, 2019 | Team Udayavani |

ಗಣೇಶಪುರ: ಅಭ್ಯುದಯ ಭಾರತಿ ಸೇವಾ ಟ್ರಸ್ಟ್‌ ಗಣೇಶಪುರ ಮತ್ತು ಹಿಂದೂ ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ ಕ್ಷೇತ್ರ ಇವುಗಳ ವತಿಯಿಂದ ವನಮಹೋತ್ಸವ ಮತ್ತು ಬೃಹತ್‌ ಸಸಿ ವಿತರಣೆಯು ರವಿವಾರ ಕಾಟಿಪಳ್ಳ ಜಾರಂದಾಯ ಕೇಶವ ಶಿಶುಮಂದಿರದಲ್ಲಿ ಜರಗಿತು.

Advertisement

ಶಾಸಕ ಡಾ| ಭರತ್‌ ಶೆಟ್ಟಿ ವೈ. ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರದ ಮೇಲೆ ಬೃಹತ್‌ ಪ್ರಮಾಣದ ಹಾನಿಯನ್ನು ಇಂದು ಮಾಡುತ್ತಿದ್ದೇವೆ. ಅಭಿವೃದ್ಧಿಯ ಹೆಸರಲ್ಲಿ ಅರಣ್ಯ ನಾಶದ ಕಾರ್ಯವನ್ನು ಮಾಡುವುದನ್ನು ನಿಲ್ಲಿಸಬೇಕಾಗಿದೆ. ಪ್ರಕೃತಿಗೆ ಮಾರಕವಾಗಿರುವ ಪ್ಲಾಸ್ಟಿಕ್‌ನ್ನು ಆದಷ್ಟು ಕಡಿಮೆ ಬಳಸಬೇಕು. ಪರಿಸರದ ಉಳಿವಿಗೆ ಸಮಾಜದ ಸರ್ವರೂ ಕೈ ಜೋಡಿಸಬೇಕು ಎಂದು ನುಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಹನಾಗರ ಕಾರ್ಯವಾಹಕ ಹರಿಕೃಷ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮನಪಾ ಮಾಜಿ ಸದಸ್ಯ ತಿಲಕ್‌ರಾಜ್‌ ಕೃಷ್ಣಾಪುರ, ಹಿಂದೂ ಧಾರ್ಮಿಕ ಸೇವಾ ಸಮಿತಿ ಕಾಟಿಪಳ್ಳ ಕ್ಷೇತ್ರ ಅಧ್ಯಕ್ಷ ವಾದಿರಾಜ್‌, ಉದ್ಯಮಿ ಪರೇಶ್‌ ಕರ್ಕೇರ, ತಣ್ಣೀರುಬಾವಿ ಜಾರಂತಾಯ ದೈವಸ್ಥಾನ ಆನುವಂಶಿಕ ಮೊಕ್ತೇಸರ ಪದ್ಮನಾಭ ರಾವ್‌ ಉಪಸ್ಥಿತರಿದ್ದರು. ಹಿಂದೂ ಧಾರ್ಮಿಕ ಸೇವಾ ಸಮಿತಿ ಸದಸ್ಯ ಲೋಕೇಶ್‌ ಬೊಳ್ಳಾಜೆ ಸ್ವಾಗತಿಸಿದರು. ಹಿಂದೂ ದಾರ್ಮಿಕ ಸೇವಾ ಸಮಿತಿ ಕಾರ್ಯದರ್ಶಿ ದಯಾನಂದ ವಂದಿಸಿದರು. ಪ್ರತಿಮಾ ನಿರ್ವಹಿಸಿದರು.

ಸಾಮಾಜಿಕ ಕಳಕಳಿ ಅಗತ್ಯ
ಮಂಗಳೂರು ವಲಯ ಅರಣ್ಯಾ ಧಿಕಾರಿ ಪಿ. ಶ್ರೀಧರ್‌ ಉದ್ಘಾಟನೆ ನೆರವೇರಿಸಿ ಮಾತನಾಡಿ, ಬೆಳೆಯುತ್ತಿರುವ ಅಭಿವೃದ್ಧಿ ಹೊಂದಿದ ದೇಶವು ಇಂದು ಪರಿಸರಕ್ಕೆ ಕುತ್ತನ್ನು ತರುತ್ತಿದೆ. ನಾವು ಬದುಕಬೇಕಾದರೆ ಮರಗಿಡಗಳ ಅಗತ್ಯವಿದೆ. ಪರಿಸರದ ಬಗ್ಗೆ ಸಾಮಾಜಿಕ ಕಳವಳಿಯನ್ನು ಸಾರ್ವಜನಿಕರು ವ್ಯಕ್ತಪಡಿಸಬೇಕಾಗಿದೆ. ಸಮಾಜ ಸೇವಾ ಕುರಿತು ಯಾರಿಗೆ ಕಾಳಜಿ ಇರುವುದಿಲ್ಲವೋ ಅವರಿಗೆ ಪರಿಸರದ ಕಾಳಜಿಯೂ ಇರುವುದಿಲ್ಲ ಎಂದು ಅವರು ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next