Advertisement

ಎಲ್ಲಾ ಉಗ್ರರನ್ನು ಬೆಳೆಸುವುದು ಮದರಸಾದಲ್ಲೇ: ಮಧ್ಯಪ್ರದೇಶ ಸಚಿವೆ ಹೇಳಿಕೆ

12:07 PM Nov 03, 2015 | keerthan |

ಭೋಪಾಲ್: ಎಲ್ಲಾ ಉಗ್ರರನ್ನು ಬೆಳೆಸುವುದು ಮದರಸಾಗಳೇ. ಹೀಗಾಗಿ ಮದರಸಾಗಳಿಗೆ ಸರ್ಕಾರ ಹಣಕಾಸಿನ ನೆರವು ನೀಡುವುದನ್ನು ನಿಲ್ಲಿಸಬೇಕು ಎಂದು ಮಧ್ಯಪ್ರದೇಶ ಸರ್ಕಾರದ ಸಚಿವೆ ಉಷಾ ಠಾಕೂರ್ ಹೇಳಿಕೆ ನೀಡಿದ್ದಾರೆ.

Advertisement

ಎಲ್ಲಾ ಭಯೋತ್ಪಾದಕರನ್ನು ಮದರಸಾಗಳಲ್ಲಿ ಬೆಳೆಸಲಾಗುತ್ತದೆ. ಜಮ್ಮು ಕಾಶ್ಮೀರವನ್ನು ಅವರು ಭಯೋತ್ಪಾದಕ ಕಾರ್ಖಾನೆಯನ್ನಾಗಿ ಮಾಡಿದ್ದರು. ರಾಷ್ಟ್ರೀಯತೆಯನ್ನು ಅನುಸರಿಸಲು ಸಾಧ್ಯವಾಗದ ಮದರಸಾಗಳು, ಸಮಾಜದ ಸಂಪೂರ್ಣ ಪ್ರಗತಿಗಾಗಿ ಮದರಸಾಗಳನ್ನು ದೇಶದಲ್ಲಿ ಅಸ್ತಿತ್ವದಲ್ಲಿರುವ ಶಿಕ್ಷಣ ವ್ಯವಸ್ಥೆಯೊಂದಿಗೆ ವಿಲೀನಗೊಳಿಸಬೇಕು ಎಂದು ಸಚಿವೆ ಹೇಳಿಕೆ ನೀಡಿದ್ದಾರೆ.

ಇಂಧೋರ್ ನಲ್ಲಿ ಮಾತನಾಡಿದ ಸಚಿವೆ ಉಷಾ ಠಾಕೂರ್,  ನೀವು ಈ ದೇಶದ ಪ್ರಜೆಯಾಗಿದ್ದರೆ,  ಉಗ್ರರು, ಭಯೋತ್ಪಾದಕರು ಮದರಸಾಗಳಲ್ಲಿ ಕಲಿತಿರುವುದನ್ನು ಗಮನಿಸಬಹುದು. ಈ ಮದರಸಾಗಳು ವಿದ್ಯಾರ್ಥಿಗಳಿಗೆ ರಾಷ್ಟ್ರೀಯತೆಯನ್ನು ಕಲಿಸುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಭಾರತೀಯ ಸೇನೆಯಿಂದ ಲಡಾಖ್ ನಲ್ಲಿ ಬಂಧಿಸಲ್ಪಟ್ಟ ಚೀನಿ ಸೈನಿಕನ ಬಿಡುಗಡೆ

ಬೆಂಮದರಸಾಗಳನ್ನು ಮುಚ್ಚುವ ಅಸ್ಸಾಂ ಸರ್ಕಾರದ ಇತ್ತೀಚಿನ ಪ್ರಕಟಣೆಗೆ ಬೆಂಬಲವಾಗಿ ಉಷಾ ಠಾಕೂರ್ ಈ ಮಾತುಗಳನ್ನಾಡಿದ್ದಾರೆ.

Advertisement

ಸರ್ಕಾರವು ಸಾರ್ವಜನಿಕ ಹಣದಿಂದ ಧಾರ್ಮಿಕ ಶಿಕ್ಷಣವನ್ನು ಕಲಿಸಲು ಅವಕಾಶ ನೀಡುವುದಿಲ್ಲ. ಹೀಗಾಗಿ ಸರ್ಕಾರಿ ಮದರಸಾ ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚಿಸಲಾಗುವುದು. ಈ ನಿಟ್ಟಿನಲ್ಲಿ ನವೆಂಬರ್‌ನಲ್ಲಿ ಸರ್ಕಾರ ಔಪಚಾರಿಕ ಅಧಿಸೂಚನೆ ಹೊರಡಿಸುವುದಾಗಿ ಅಕ್ಟೋಬರ್ 9 ರಂದು ಅಸ್ಸಾಂ ಶಿಕ್ಷಣ ಮತ್ತು ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next