Advertisement

ಭಾರತೀಯರಿಗೇ ನಾಯಕತ್ವ ನೀಡಬೇಕಿತ್ತು: ಮಾಜಿ ನಾಯಕಿ ಅಂಜುಮ್‌ ಚೋಪ್ರಾ

11:11 PM Mar 04, 2023 | Team Udayavani |

ಮುಂಬಯಿ: ಚೊಚ್ಚಲ ವನಿತಾ ಪ್ರೀಮಿಯರ್‌ ಲೀಗ್‌ನಲ್ಲಿ ಬಹುತೇಕ ಫ್ರಾಂಚೈಸಿಗಳು ವಿದೇಶಿ ನಾಯಕತ್ವಕ್ಕೆ ಒಲವು ತೋರಿದ್ದಕ್ಕೆ ಮಾಜಿ ನಾಯಕಿ ಅಂಜುಮ್‌ ಚೋಪ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲ ತಂಡಗಳು ಭಾರತೀಯ ಆಟಗಾರ್ತಿಯರನ್ನು ನಾಯಕತ್ವಕ್ಕೆ ಆಯ್ಕೆ ಮಾಡಬೇಕಿತ್ತು ಎಂದಿದ್ದಾರೆ.

Advertisement

“ಇದು ಭಾರತೀಯ ಕ್ರಿಕೆಟ್‌ ಲೀಗ್‌. ಇದರಿಂದ ನಮಗೆ ಹೆಚ್ಚಿನ ಲಾಭವಾಗಬೇಕು. ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಭಾರತದ ಆಟಗಾರ್ತಿಯರಿಗೇ ಇಲ್ಲಿನ ತಂಡಗಳ ನಾಯಕತ್ವ ವಹಿಸಬೇಕಿತ್ತು. ಆದರೆ ಹೆಚ್ಚಿನ ತಂಡಗಳು ವಿದೇಶಿ ಆಟಗಾರ್ತಿಯರತ್ತ ಒಲವು ತೋರಿದ್ದು ಅಚ್ಚರಿ ಮೂಡಿಸಿದೆ” ಎಂದು ಅಂಜುಮ್‌ ಚೋಪ್ರಾ ಹೇಳಿದರು.

“ಅನುಭವದ ಮಾನದಂಡದ ಪ್ರಕಾರ ಆಸ್ಟ್ರೇಲಿಯ ಆಟಗಾರ್ತಿಯರಿಗೆ ಅಗ್ರ ಪ್ರಾಶಸ್ತ್ಯ ನೀಡಲಾಗಿದೆ ಎಂಬುದನ್ನು ಒಪ್ಪಲೇಬೇಕು. ಇವರು ಆರು ಬಾರಿಯ ವಿಶ್ವ ಚಾಂಪಿಯನ್ನರು. ಹೀಗಾಗಿ ಮೆಗ್‌ ಲ್ಯಾನಿಂಗ್‌ ಅವರನ್ನು ಮೀರಿಸಿ ಜೆಮಿಮಾ ರೋಡ್ರಿಗಸ್‌ಗೆ ಡೆಲ್ಲಿ ನಾಯಕತ್ವ ನೀಡಲಾಗದು. ನಮ್ಮವರು ಆಸ್ಟ್ರೇಲಿಯನ್ನರಷ್ಟು ಕ್ಯಾಪ್ಟನ್ಸಿ ಸಾಮರ್ಥ್ಯ ಹೊಂದಿಲ್ಲ ಎಂಬುದನ್ನು ಒಪ್ಪುತ್ತೇನೆ. ಆದರೆ ಈ ಕೂಟದಿಂದ ಭಾರತಕ್ಕೆ ಹೆಚ್ಚು ಪ್ರಯೋಜನವಾಗಬೇಕು. ಭಾರತೀಯ ಆಟಗಾರ್ತಿಯರ ಪಾಲಿಗೆ ಇದೊಂದು ಗೇಮ್‌-ಚೇಂಜರ್‌ ಟೂರ್ನಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next