Advertisement

“ಅಲ್ಪಸಂಖ್ಯಾಕ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಕಲ ವ್ಯವಸ್ಥೆ’

07:20 AM Aug 11, 2017 | |

ಉಳ್ಳಾಲ: ಅಲ್ಪಸಂಖ್ಯಾಕ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ದೊರೆಯಬೇಕು ಅನ್ನುವ ದೃಷ್ಟಿಯಿಂದ  ಕೇಂದ್ರ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ಭವಿಷ್ಯದ ಚಿಂತನೆ ಮುಂದಿಟ್ಟುಕೊಂಡು  ಪ್ರಧಾನಿಯವರು ಜಾರಿಗೊಳಿಸಿದ ಯೋಜನೆಯಿಂದ ಅಲ್ಪಸಂಖ್ಯಾಕರ ಅಭಿವೃದ್ಧಿಯಾಗಲಿದೆ ಎಂದು  ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌ ಹೇಳಿದರು.

Advertisement

ಅವರು ಬೋಳಿಯಾರು ಸಭಾಂಗಣದಲ್ಲಿ ಗುರುವಾರ  ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಆಯೋಜಿಸಲಾಗಿದ್ದ ಮುಸ್ಲಿಂ ಧಾರ್ಮಿಕ  ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಸೆಸೆಲ್ಸಿಯಲ್ಲಿ  ಶೇ. 75ರಷ್ಟು  ಅಂಕ ಪಡೆದ ಅಲ್ಪಸಂಖ್ಯಾಕ ವಿದ್ಯಾರ್ಥಿಗಳಿಗೆ  ಉನ್ನತ ಶಿಕ್ಷಣ ಪಡೆಯಲು ಸರಕಾರದಿಂದ ಬೇಕಾದ ಸಕಲ ವ್ಯವಸ್ಥೆಯನ್ನು ಒದಗಿಸುವ ಆದೇಶ ಹೊರಡಿಸಿದ್ದಾರೆ. ಪದವಿ ಪಡೆದ ವಿದ್ಯಾರ್ಥಿನಿ ಮದುವೆಗೆ ರೂ. 51,000 ಸಹಾಯಧನ ನೀಡುವ ಘೋಷಣೆಯನ್ನು ಹೊರಡಿಸಿದ್ದಾರೆ ಎಂದರು.  

ಅಲ್ಪಸಂಖ್ಯಾಕರ ಮತ ಬೇಕು. ಆದರೆ  ಅವರು ಮೇಲೆ ಬರಬಾರದು ಅನ್ನುವ ದೃಷ್ಟಿಯಲ್ಲಿ ಕಾಂಗ್ರೆಸ್‌ ಕೆಲಸ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು.

ಧಾರ್ಮಿಕ ಮುಖಂಡ  ಎ.ಬಿ. ಹನೀಫ್ ನಿಝಾಮಿ ಮಾತನಾಡಿ, ದೇಶಾದ್ಯಂತ ಅಲ್ಪಸಂಖ್ಯಾಕರಿಗೆ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಜನಪ್ರತಿನಿಧಿಗಳು ಅದನ್ನು ತಲುಪಿಸುವಲ್ಲಿ ವಿಫಲವಾಗಿದ್ದಾರೆ ಎಂದರು.  

Advertisement

ರಮ್ಜಾನ್‌  ಸಂದರ್ಭದಲ್ಲಿ ಅಸೈಗೋಳಿಯಲ್ಲಿ ನೀರಿನ ಸಮಸ್ಯೆ ಉದ್ಭವಿಸಿತ್ತು.  ಪಂಚಾಯತ್‌ನ ಸಹಕಾರವೂ ದೊರೆತಿರಲಿಲ್ಲ.  ಆದರೆ ವಾಟ್ಸಪ್‌  ಗ್ರೂಪ್‌ನಲ್ಲಿ ಸಮಸ್ಯೆ ಬಗ್ಗೆ ತಿಳಿಸಿದ ತತ್‌ಕ್ಷಣ ಬಿಜೆಪಿ ಮುಖಂಡರು  ಟ್ಯಾಂಕರ್‌ ಮೂಲಕ ನೀರು ಒದಗಿಸುವ ಮೂಲಕ ಇಡೀ ಜನರಿಗೆ ಸಹಕರಿಸಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಅಲ್ಪಸಂಖ್ಯಾಕ ಮೋರ್ಚಾದ ಮಾಜಿ ಪ್ರಧಾನ ಕಾರ್ಯದರ್ಶಿ ಫಝಲ್‌  ಅಸೈಗೋಳಿ   ಮಾತನಾಡಿದರು.ಬಂಟ್ವಾಳ ಬಿಜೆಪಿ ಅಧ್ಯಕ್ಷ ರಾಮದಾಸ್‌ ಶೆಟ್ಟಿ,  ಬಿಜೆಪಿ ಮುಖಂಡ ರಾಜೇಶ್‌ ನಾೖಕ್‌ ಉಳೇಪಾಡಿಗುತ್ತು, ಬಿಜೆಪಿ ಮುಖಂಡರಾದ  ಟಿ.ಜಿ. ರಾಜಾರಾಂ ಭಟ್‌, ಜಿಲ್ಲಾ ಅಲ್ಪಸಂಖ್ಯಾಕ ಮೋರ್ಚಾ ಅಧ್ಯಕ್ಷ ಜೋಯಲ್‌ ಡಿ’ಸೋಜಾ, ಬೋಳಿಯಾರು ಗ್ರಾಮ ಪಂಚಾಯತ್‌ ಅಧ್ಯಕ್ಷ  ಸತೀಶ್‌ ಆಚಾರ್ಯ,   ಅಲ್ಪಸಂಖ್ಯಾಕ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ| ಮುನೀರ್‌ ಬಾವ,  ಅಝೀಝ್ ಫ್ರಾನ್ಸಿ,   ಹನೀಫ್‌ ಮಿಝಾಮಿ,  ಸಿದ್ದೀಖ್‌ ಇಮಾಮಿ,  ಉಸ್ಮಾನ್‌ ಮದನಿ, ಹೈದರ್‌ ಸಅದಿ, ಗೋಪಾಲ್‌ ಇರಾ, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಪ್ರಶಾಂತ್‌ ಗಟ್ಟಿ,  ಜಗದೀಶ್‌ ಆಳ್ವ  ಕುವೆತ್ತಬೈಲ್‌,  ಬಿಜೆಪಿ ಕ್ಷೇತ್ರ  ಕಾರ್ಯದರ್ಶಿ ಮನೋಜ್‌ ಆಚಾರ್ಯ,  ಖಲಂದರ್‌ ಅಸೈಗೋಳಿ,  ಎಪಿಎಂಸಿ ಸದಸ್ಯ ವಿಠಲ್‌,  ನಿಝಾಮುದ್ದೀನ್‌ ಸಅದಿ, ಮಂಗಳೂರು ಕ್ಷೇತ್ರ ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾದ ಕಾರ್ಯದರ್ಶಿ ಮುನೀರ್‌ ಮಾಸ್ಟರ್‌,  ಪ್ರೇಮ್‌, ಚಂದ್ರ,  ಅಲ್ಪಸಂಖ್ಯಾಕ ಮೋರ್ಚಾದ ಕ್ಷೇತ್ರ ಅಧ್ಯಕ್ಷ ಅಶ್ರಫ್‌ ಹರೇಕಳ, ದೇವದಾಸ್‌ ಶೆಟ್ಟಿ, ಮುಸ್ತಾಫ ಕಲ್ಲಡ್ಕ  ಉಪಸ್ಥಿತರಿದ್ದರು.ಬೋಳಿಯಾರ್‌ ಗ್ರಾಮ ಪಂಚಾಯತ್‌ ಸದಸ್ಯ ಸಿ. ರಿಯಾಜ್‌ ಬೋಳಿಯಾರ್‌ ಕಾರ್ಯಕ್ರಮ ನಿರೂಪಿಸಿದರು.ಮಂಗಳೂರು ಕ್ಷೇತ್ರ ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಹಮ್ಮದ್‌ ಆಸYರ್‌ ಮುಡಿಪು ಸ್ವಾಗತಿಸಿ, ಖಜಾಂಚಿ ಶರೀಫ್‌ ಬೋಳಿಯಾರ್‌ ವಂದಿಸಿದರು.

ಇತಿಹಾಸ ನಿರ್ಮಿಸಿದ ಸಭೆ
ಬಿಜೆಪಿ ವತಿಯಿಂದ ಜಿಲ್ಲೆಯಲ್ಲಿ ಪ್ರಥಮವಾಗಿ ಆಯೋಜಿಸಲಾದ ಈ  ಸಭೆಯಲ್ಲಿ 100ಕ್ಕೂ ಅಧಿಕ  ಮುಸ್ಲಿಂ ಧಾರ್ಮಿಕ ಮುಖಂಡರು ಭಾಗಿಯಾಗುವ ಮೂಲಕ ಇತಿಹಾಸ ನಿರ್ಮಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next