Advertisement

ಕೃಷ್ಣಾ ಪ್ರವಾಹ ಎದುರಿಸಲು ಸಂಪೂರ್ಣ ಸಜ್ಜು: ಶಾಸಕ ಸಿದ್ದು ಸವದಿ

09:54 PM Jul 27, 2023 | Team Udayavani |

ರಬಕವಿ-ಬನಹಟ್ಟಿ: ಕೃಷ್ಣಾ ನದಿಯಿಂದ ರಬಕವಿ ಬನಹಟ್ಟಿ ತಾಲೂಕಿಗೆ ಸದ್ಯಕ್ಕಂತೂ ಯಾವುದೆ ಪ್ರವಾಹ ಭೀತಿ ಇಲ್ಲ. ಪ್ರವಾಹವನ್ನು ಎದುರಿಸಲು ತಾಲ್ಲೂಕು ಆಡಳಿತ ಸಂಪೂರ್ಣ ಸಜ್ಜಾಗಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

Advertisement

ಗುರುವಾರ ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ನದಿಗೆ ೧೩೦೮೦೦ ಕ್ಯುಸೆಕ್ ಒಳ ಹರಿವು ಇದ್ದು ಅಷ್ಟೆ ಪ್ರಮಾಣದ ನೀರಿನ ಹೊರ ಹರಿವು ಕೂಡಾ ಇದೆ. ಮೂರು ಲಕ್ಷ ಕ್ಯುಸೆಕ್ ನೀರು ಬಂದರೆ ಮಾತ್ರ ಪ್ರವಾಹದ ಭೀತಿಯ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ನಮ್ಮಅಧಿಕಾರಿಗಳು ಮಹಾರಾಷ್ಟ್ರದ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಕೃಷ್ಣಾ ನದಿಗೆ 130800 ಕ್ಯುಸೆಕ್ ಒಳ ಹರಿವು
ಗುರುವಾರ ಕೃಷ್ಣಾ ನದಿಗೆ 130800 ಒಳ ಹರಿವು ಇದ್ದು ಅಷ್ಟೆ ಪ್ರಮಾಣದಲ್ಲಿ ನೀರಿನ ಹೊರ ಹರಿವು ಇದೆ ಎಂದು ರಬಕವಿ ಬನಹಟ್ಟಿ ತಹಶೀಲ್ದಾರ್ ಡಾ.ಡಿ.ಎಚ್.ಹೂಗಾರ ತಿಳಿಸಿದರು.

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಾದ ಕೊಯ್ನಾ: 119ಮಿ.ಮೀ, ನವುಜಾ: 189 ಮಿ.ಮೀ, ಮಹಾಬಳೇಶ್ವರ: 154 ಮಿ.ಮೀ, ತರಾಳಿ: 26 ಮಿ.ಮೀ, ವಾರಣಾ: 55 ಮಿ.ಮೀ, ರಾಧಾ ನಗರಿ: 94 ಮಿ.ಮೀ, ದೂಧಗಂಗಾ: 85 ಮಿ.ಮೀ ಮಳೆಯಾದ ವರದಿಯಾಗಿದೆ.

ಮಹಾರಾಷ್ಟ್ರ ಕರ್ನಾಟಕದ ಸೀಮೆಯಲ್ಲಿರುವ ರಾಜಾಪುರ ಬ್ಯಾರೇಜ್ ನಿಂದ 1,05,667 ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next