Advertisement
ಅಂದು ತರಗತಿ ಮುಗಿದು ವಿರಾಮದ ಸಮಯ. ಕಿರಣ ತನ್ನ ವಾಟ್ಸಾಪ್ ತೋರಿಸುತ್ತಾ ಹುಡುಗ-ಹುಡುಗಿಯರಿರುವ ಈ ಗ್ರೂಫ್ ಮಾಡಿದ್ದೇವೆ. ಪ್ರತಿ ಸಲವೂ ಒಂದು ವಿಷಯಕ್ಕೆ ಏನಾದರೂ ತಕರಾರು-ಜಗಳ ನಡೆದಾಗ ಎಷ್ಟೇ ಪ್ರಯತ್ನಿಸಿದರೂ ನಮಗೆ ಗೆಲುವು ಸಿಕ್ಕಿಲ್ಲ. ಈ ಗ್ರೂಪ್‌ಗೆ ನಿನ್ನ ಸೇರಿಸುವೆ. ಹೇಗಾದರೂ ಮಾಡಿ ಗೆಲುವು ನಮ್ಮದಾಗಿಸಬೇಕು ಎಂದು’ ನನ್ನ ಸೇರಿಸಿಯೇ ಬಿಟ್ಟ! ಮುಂಜಾನೆ ಮತ್ತು ರಾತ್ರಿ ಮಾತ್ರ ವಾಟ್ಸಾéಪ್ ಬಳಸುತ್ತಿದ್ದ ವಳು, ಅಂದು ರಾತ್ರಿ ನೆಟ್ ಆನ್ ಮಾಡುವುದೇ ತಡ ಈ ಗ್ರೂಪಿನ ಸಂದೇಶಗಳು ಸೆಂಚುರಿ ಹೊಡೆದಿದ್ದು ಕಂಡು ಬೆರಗಾದೆ!.ಓದುತ್ತಾ ಹೋದೆ ಹುಡುಗರಿಗೆ ಸೋಲಿನ ಕಿರೀಟ ಕೊಟ್ಟು ಕೇಕೆ ಹಾಕಿದ್ದರು! ನಾನೂ ಸಹ ಮಧ್ಯದಲ್ಲಿ ಒಂದೊಂದೇ ಸಂದೇಶ ಮಾಡ ತೊಡಗಿದೆ… ಒಂದೆರಡು ದಿನ ಕಳೆಯಿತು.
ಅದರಂತೆಯೇ ರಾತ್ರಿ 9:00 ಕ್ಕೆ ಬಂದೆವು.ದಿನದಂತೆ ನಮ್ಮದೇ ಸತ್ಯವೆಂದು ನಾವು ಮತ್ತು ಅವರದು ಸತ್ಯವೆಂದು ಅವರು ಸಾಧಿಸಲು ಶುರು ಆಯ್ತು. ಸಮಯ ಹತ್ತರ ಗಡಿ ದಾಟಿದ್ದು ಗೊತ್ತೇ ಆಗಿರಲಿಲ್ಲ! ಗೆಲುವು ನಮ್ಮ ಹತ್ತಿರ ಬರುತ್ತಿದ್ದಂತೆ ಅವರು ಒಬ್ಬರ ಹಿಂದೆ ಒಬ್ಬರು ಆಫ್ಲೆçನ್ ಆಗತೊಡಗಿದರು. ಕೊನೆಗೆ ಅವರಲ್ಲಿ ಉಳಿದದ್ದು ಇಬ್ಬರೇ…ನಂತರ ನಾವೇಲ್ಲಾ ಗೆಲುವಿನ ಕೇಕೆ ಹಾಕುತ್ತಿದ್ದಂತೆ ಅವರೂ ಆಫ್ಲೆçನ್. ಸಮಯ ಹನ್ನೊಂದಾಗಿತ್ತು. ಖುಷಿಯಲ್ಲಿ ಮಲಗಿದ್ದೆವು. ಮುಂಜಾನೆ ಎದ್ದು ವಾಟ್ಸಾಪ್ ನೋಡಿದರೆ ಎಲ್ಲ ಹುಡುಗಿಯರೂ ಲೆಫ್ಟ್! ವಾಟ್ಸಾಪ್ ಗ್ರೂಪ್:-‘‘PCM PLATINUMS’
Related Articles
Advertisement
– ಮುತ್ತಪ್ಪ ಎಸ್. ಕ್ಯಾಲಕೊಂಡ