Advertisement

ಪಂಚಮಸಾಲಿ 3ನೇ ಪೀಠದ ಸಮಾವೇಶಕ್ಕೆ ಸಕಲ ಸಿದ್ದತೆ

04:53 PM Feb 11, 2022 | Shwetha M |

ಜಮಖಂಡಿ: ಪಂಚಮಸಾಲಿ ಮೂರನೇ ಪೀಠಾರೋಹಣ ಕಾರ್ಯಕ್ರಮದ ಸಿದ್ಧತೆ ಚುರುಕುಗೊಂಡಿದ್ದು, ಫೆ.13ರಂದು ಬೆಳಗ್ಗೆ 10 ಗಂಟೆಗೆ ಜಗದ್ಗುರು ಪೀಠಾರೋಹಣ, ಧರ್ಮ ಸಮ್ಮೇಳನ ಮತ್ತು ಬೃಹತ್‌ ರೈತ ಸಮಾವೇಶ ಕಾರ್ಯಕ್ರಮ ಜರುಗಲಿದೆ ಎಂದು ವೀರಶೈವ ಪಂಚಮಸಾಲಿ ಜಗದ್ಗುರು ಪೀಠದ ಭಾವಿ ಪೀಠಾಧಿಪತಿ ಡಾ| ಮಹಾದೇವ ಶಿವಾಚಾರ್ಯರು ಹೇಳಿದರು.

Advertisement

ಆಲಗೂರ ಪುನರವಸತಿ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಶ್ರೀಗಳು ಭಾಗವಹಿಸಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಸಹಿತ ಹಲವು ಸಚಿವರು, ಶಾಸಕರು, ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ. ಒಂದು ಲಕ್ಷ ಜನ ಸೇರುವ ನೀರಿಕ್ಷೆಯಿದೆ. 4 ಎಕರೆ ಜಾಗದಲ್ಲಿ ಶಾಮಿಯಾನಾ ಹಾಕಲಾಗಿದ್ದು, ಎರಡು ಎಕರೆ ಸ್ಥಳದಲ್ಲಿ ಪಾರ್ಕಿಂಗ್‌ ವ್ಯವಸ್ಥೆ, ಎರಡು ಎಕರೆ ಸ್ಥಳದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

ರಾಜ್ಯದಲ್ಲಿರುವ ಎರಡು ಪಂಚಮಸಾಲಿ ಪೀಠಗಳು ಉಳಿಸಿರುವ ಇನ್ನು ಹಲವಾರು ಕಾರ್ಯಗಳನ್ನು ಪೂರ್ಣಗೊಳಿಸಲು ಮೂರನೇ ಪೀಠ ಸ್ಥಾಪನೆ ಮಾಡಲಾಗುತ್ತಿದೆ. ಮಕ್ಕಳಿಗೆ ಧರ್ಮ ಸಂಸ್ಕಾರ ನೀಡುವುದು, ರೈತರ ಬೆನ್ನುಲಬಾಗಿ ನಿಲ್ಲುವುದು ಸೇರಿದಂತೆ ವಿವಿಧ ಹೊಸ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ವೀರಶೈವ ಲಿಂಗಾಯತ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಕಾರ್ಯದರ್ಶಿ ಮನಗೂಳಿ ಸಂಗನಬಸವ ಶ್ರೀ ಮಾತನಾಡಿ, ನಮ್ಮ ಒಕ್ಕೂಟದಲ್ಲಿ 70-80 ಶ್ರೀಗಳು ವಿವಿಧ ಪರಂಪರೆ ಹೊಂದಿದ್ದಾರೆ. ಅವರೆಲ್ಲರ ಅನುಭವ ಪಡೆದು ಮೂರನೇ ಪೀಠ ಮಾಡಲಾಗುತ್ತಿದೆ. ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳನ್ನು ಆಹ್ವಾನ ಮಾಡುತ್ತೇವೆ. ಪ್ರತಿಯೊಬ್ಬರ ಮನೆ ಮನೆಗೆ ಒಕ್ಕೂಟದ ಶ್ರೀಗಳು ಭೇಟಿ ನೀಡಲಿದ್ದಾರೆ ಎಂದರು. ಸ್ವಾಗತ ಸಮಿತಿ ಅಧ್ಯಕ್ಷ ಸಂಗಮೇಶ ನಿರಾಣಿ, ಬೆಂಡವಾಡ ರೇವಣಸಿದ್ಧೇಶ್ವರ ಶ್ರೀ, ಆಲಗೂರ ಧರಿದೇವರ ಶ್ರೀ, ವಿಜುಗೌಡ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next