Advertisement

ಹೌಸ್‌ಪಾರ್ಟಿ ಮೂಡ್‌ನ‌ಲ್ಲಿ ಆಲ್‌ ಓ.ಕೆ; ಆಲ್ಬಂ ಹಾಡಿಗೆ ಅದ್ವಿಕಾ ಹೆಜ್ಜೆ

10:48 AM Mar 26, 2022 | Team Udayavani |

ಹೊಸ ಥರದ ಸಂಗೀತ ಪ್ರಯೋಗಗಳ ಮೂಲಕ ಯೂ-ಟ್ಯೂಬ್‌ ಮತ್ತು ಸೋಶಿಯಲ್‌ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ರ್ಯಾಪರ್‌ ಸಿಂಗರ್‌, ಕಂಪೋಸರ್‌ ಆಲ್‌ ಓ.ಕೆ ಉರೂಫ್ ಅಲೋಕ್‌. ಇದೀಗ ಸದ್ದಿಲ್ಲದೆ ಮತ್ತೂಂದು ವಿಡಿಯೋ ಹಾಡನ್ನು ಹೊರತಂದಿದ್ದಾರೆ. ಅಂದಹಾಗೆ, ಅಲೋಕ್‌ ತಮ್ಮ ಹೊಸ ಮ್ಯೂಸಿಕ್‌ ವಿಡಿಯೋ ಆಲ್ಬಂಗೆ ಇಟ್ಟಿರುವ ಹೆಸರು “ಹೌಸ್‌ಪಾರ್ಟಿ’.

Advertisement

ಇತ್ತೀಚೆಗಷ್ಟೇ ಈ “ಹೌಸ್‌ಪಾರ್ಟಿ’ ಮ್ಯೂಸಿಕ್‌ ವಿಡಿಯೋ ಆಲ್ಬಂ ಬಿಡುಗಡೆಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ರ್ಯಾಪ್‌ ಮ್ಯೂಸಿಕ್‌ ಪ್ರಿಯರ ಗಮನ ಸೆಳೆಯುತ್ತಿದೆ.

ತಮ್ಮ ಹೊಸ ಮ್ಯೂಸಿಕ್‌ ಆಲ್ಬಂ ಬಗ್ಗೆ ಮಾತನಾಡುವ ಅಲೋಕ್‌, “ಇದು ಕೋವಿಡ್‌ ಸಮಯದಲ್ಲಿ ಬಹುತೇಕರು ಮನೆಯಲ್ಲೇ ಇರಬೇಕಾಗಿತ್ತು. ಈ ಸಮಯದಲ್ಲಿ ಮನೆಯಲ್ಲಿ “ಹೌಸ್‌ಪಾರ್ಟಿ’ ಮಾಡುತ್ತಿದ್ದರು. ಇದೇ ಕಾನ್ಸೆಪ್ಟ್ ಇಟ್ಟುಕೊಂಡು “ಹೌಸ್‌ಪಾರ್ಟಿ’ ಮ್ಯೂಸಿಕ್‌ ವಿಡಿಯೋ ಆಲ್ಬಂ ಮಾಡಿದ್ದೇವೆ. ಮನೆಯಲ್ಲಿಯೇ ಇರಿ, ಅಲ್ಲಿಯೇ ಪಾರ್ಟಿ ಮಾಡಿ ಎಂಬುದನ್ನು ಈ ಆಲ್ಬಂನಲ್ಲಿ ಕಲರ್‌ಫ‌ುಲ್‌ ಆಗಿ ತೋರಿಸಿದ್ದೇವೆ’ ಎನ್ನುತ್ತಾರೆ.

ಇದನ್ನೂ ಓದಿ:ಆರ್‌ಆರ್‌ಆರ್‌ ವಿಮರ್ಶೆ: ಹೋರಾಟದ ಹಾದಿಯಲ್ಲಿ ಕಂಡ ದೃಶ್ಯ ವೈಭವ

ಇನ್ನು “ಹೌಸ್‌ಪಾರ್ಟಿ’ ಮ್ಯೂಸಿಕ್‌ ವಿಡಿಯೋ ಆಲ್ಬಂ ಹಾಡಿನಲ್ಲಿ ಅಲೋಕ್‌ ಜೊತೆಗೆ “ಕಿರಿಕ್‌ ಶಂಕರ್‌’ ಸಿನಿಮಾದ ನಾಯಕ ನಟಿ ಅದ್ವಿಕಾ ಕೂಡ ಕಾಣಿಸಿಕೊಂಡಿದ್ದಾರೆ. ಗ್ಲಾಮರಸ್‌ ಮತ್ತು ಬೋಲ್ಡ್‌ ಲುಕ್‌ನಲ್ಲಿ ಅದ್ವಿಕಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

Advertisement

“ಹೌಸ್‌ಪಾರ್ಟಿ’ ಮ್ಯೂಸಿಕ್‌ ವಿಡಿಯೋ ಆಲ್ಬಂ ಬಗ್ಗೆ ಮಾತನಾಡುವ ಅದ್ವಿಕಾ, “ಇದು ನನ್ನ ಮೊದಲ ಮ್ಯೂಸಿಕ್‌ ವಿಡಿಯೋ ಆಲ್ಬಂ. ಮೊದಲ ಸಿನಿಮಾ ಬಿಡುಗಡೆಯಾಗುವ ಮೊದಲೇ ಇಂಥ ಅವಕಾಶಗಳು ಸಿಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. “ಹೌಸ್‌ಪಾರ್ಟಿ’ ಮಾಡುವವರಿಗೆ ಇದೊಂಥರ ಕಿಕ್‌ ಕೊಡುವಂಥ ಸಾಂಗ್‌ ಆಗಲಿದೆ. ತುಂಬ ಎನರ್ಜಿಟಿಕ್‌ ಟೀಮ್‌ ಜೊತೆ ಕೆಲಸ ಮಾಡಿದ್ದು ಒಂದು ಒಳ್ಳೆಯ ಅನುಭವ’ ಎನ್ನುತ್ತಾರೆ. “ಹೌಸ್‌ಪಾರ್ಟಿ’ ಮ್ಯೂಸಿಕ್‌ ಆಲ್ಬಂಗೆ ಆಕಾಶ್‌ ಜೋಷಿ ಛಾಯಾಗ್ರಹಣ, ಸಂಕಲನವಿದೆ.

Advertisement

Udayavani is now on Telegram. Click here to join our channel and stay updated with the latest news.

Next