Advertisement
ಈ ವಿದ್ಯೆಯು ರಾಷ್ಟ್ರದ ಎÇÉಾ ಪ್ರಾಂತ್ಯಗಳಲ್ಲೂ ಪ್ರಚಲಿತ. ಅದಕ್ಕೆ ಕೆಲವು ಪ್ರಾದೇಶಿಕ ವ್ಯತ್ಯಾಸಗಳೂ ಉಂಟು. ಆದ್ದರಿಂದಲೇ ಅದರ ಯಂತ್ರವು ಪ್ರಸಿದ್ಧಿ ಪಡೆದಷ್ಟು ಮಂತ್ರ ಮತ್ತು ತಂತ್ರಗಳು ಪ್ರಸಿದ್ಧಿ ಪಡೆದಿಲ್ಲ.
ನಮ್ಮ ಸನಾತನ ರಾಷ್ಟ್ರದಲ್ಲಿ ಅನೇಕ ದೇಗುಲಗಳು ದೊಡ್ಡ ದೇವಾಲಯಗಳಲ್ಲಿ ಶ್ರೀಚಕ್ರದ ಉಪಸ್ಥಿತಿ ಇದೆ. ಇದೆ ಎಂದರೆ ದೊಡ್ಡವರು ಅದನ್ನು ಇರಿಸಿ¨ªಾರೆ. ಮಾನವ ಮತಿ ಉದಾಹರಣೆ ಕೇಳುವುದನ್ನು ಅಭ್ಯಾಸ ಮಾಡಿಕೊಂಡಿದೆ. ಹೀಗಾಗಿ, ಉದಾಹರಣೆ ನೀಡಬೇಕು. ಕಾಂಚೀಪುರಂ (ಕಾಮಕೋಟಿ), ಚಿದಂಬರಂ (ಸಮ್ಮೇಲನ-ಚಕ್ರ), ಜಂಬುಕೇಶ್ವರಂ (ಲಲಿತಾ), ಕೂರ್ತಾಲಂ, ಅವಾಡೈಯ್ನಾರ್ ಕೋಯಿಲ್- ಇವು ತಮಿಳುನಾಡಿನ ಸ್ಥಳಗಳು, ಇÇÉೆಲ್ಲ ದೇವಿಯನ್ನು ಶ್ರೀಮಾತೆಯನ್ನು ಶ್ರೀಚಕ್ರ ರೂಪದಲ್ಲಿ ಪೂಜಿಸುತ್ತಾರೆ. ಹಾಗಾದರೆ ನಮ್ಮ ನಾಡಿನಲ್ಲಿ? ನಮ್ಮಲ್ಲೂ ಇದು ಉಂಟು.
Related Articles
Advertisement
ಇರಲಿ. ತಿರುಪತಿಯಲ್ಲಿ ಹೀಗೆ ಶ್ರೀಚಕ್ರ ಸ್ಥಾಪನೆಯಾಗಿದೆ ಎಂಬ ನಂಬಿಕೆಯ ಮೇರೆಗೇ ದೇಶದ ಅನೇಕ ದೇಗುಲಗಳಲ್ಲಿ ಅದರ ಸ್ಥಾಪನೆಯಾಗತೊಡಗಿತು. ಕರ್ನಾಟಕದ ಕಲುºರ್ಗಿಯ ಸನ್ನತಿಯಲ್ಲಿ ಚಂದ್ರಲಾ ಪರಮೇಶ್ವರೀ ದೇಗುಲವಿದೆ, ಅದರ ವಿಮಾನದಲ್ಲಿ ಒಂದು ದೊಡ್ಡ ಶ್ರೀಚಕ್ರಾಕೃತಿಯಿದೆ. ನಮ್ಮ ದೇಶದಲ್ಲಿ ಒಂದು ಕಾಲಕ್ಕೆ ಉಪಾಸನೆಯ ಮಾರ್ಗಗಳಲ್ಲಿ ಯಾವುದು ತಾಂತ್ರಿಕ, ಯಾವುದು ಶುದ್ಧಾಂಗ ವೈದಿಕ ಎಂಬ ಚರ್ಚೆ ನಡೆದಿತ್ತು. ಆ ಪ್ರಕಾರ ಶ್ರೀಚಕ್ರಾರಾಧನೆ ವೈದಿಕ ಎಂಬ ವಾದಗಳೂ ಹೊರಟವು. ಆದರೆ ವೈದಿಕ ಸಂಪ್ರದಾಯ ಎತ್ತಿ ಹಿಡಿಯುವ ಸ್ವತಃ ಕುಲ್ಲೂಕ ಭಟ್ಟನ ಪ್ರಕಾರ (ಇವರ ಕಾಲ ಕ್ರಿಸ್ತಾಬ್ಧ 1150-1300ರ ನಡುವೆ) ಶ್ರುತಿಯಲ್ಲಿ ಎರಡು ವಿಧ: ವೈದಿಕ ಮತ್ತು ತಾಂತ್ರಿಕ. ಭಾಗವತ ಮಹಾಪುರಾಣದ 11ನೆಯ ಸ್ಕಂಧ ಕೂಡ ವೈದಿಕೀ, ತಾಂತ್ರಿಕೀ ಮತ್ತು ಮಿಶ್ರ ಎಂಬ ಮೂರು ದಾರಿಗಳನ್ನು ಹೇಳಿದೆ.
ಈಗ ಅದೆÇÉಾ ಇತಿಹಾಸದ ವಿಷಯ. ವೈದಿಕ ಮತ್ತು ತಾಂತ್ರಿಕ ಹೇಗೆ ಪರಸ್ಪರ ಪೂರಕ ಎಂದು ಸಾಧನೆ ಪುಸ್ತಕರಾಶಿಯ ಓದು ಇರುವ ಹಿರಿಯರು ತೋರಿಸಿಕೊಟ್ಟಿ¨ªಾರೆ. ಇವರ ಪಟ್ಟಿ ದೊಡ್ಡದಿದೆ. ಸದ್ಯಕ್ಕೆ ಮಹಾಮಹೋಪಾಧ್ಯಾಯ ಗೋಪೀನಾಥ ಕವಿರಾಜ್, ಮಹಾಮಹೋಪಾಧ್ಯಾಯ ರಾ. ಸತ್ಯನಾರಾಯಣ ಮತ್ತು ಪ್ರೊ. ಸಾ.ಕೃ. ರಾಮಚಂದ್ರ ರಾಯರನ್ನು ಇಲ್ಲಿ ಸ್ಮರಿಸಬಹುದು.
ಶ್ರೀಚಕ್ರವೆಂದರೆ ಮಾತೃಶಕ್ತಿಯ ಆರಾಧನೆ. ವೇದಾಂತಿಗಳು ಹೇಳುವ ಬ್ರಹ್ಮನ್ ಮತ್ತು ಬೌದ್ಧರ ಶೂನ್ಯ ಎರಡರ ತಾಂತ್ರಿಕ ರೂಪವೇ ಮಹಾದೇವಿ ಲಲಿತಾ. ಈಕೆಗೆ ತ್ರಿಪುರಸುಂದರೀ, ಷೋಡಶೀ ಮತ್ತು ರಾಜರಾಜೇಶ್ವರೀ ಎಂಬ ಹೆಸರುಗಳಿವೆ. ತಾಯಿಯಾದ್ದರಿಂದ ಅಮ್ಮ ಎಂದರೂ ಸಾಕು. ಅವಳಿಗೆ ಅವಳದ್ದೇ ದೇವತಾ ಪರಿವಾರವಿದೆ, ಸಹಾಯಕರಾದ ಯೋಗಿನಿಯರಿ¨ªಾರೆ. ಇವರ ಸಂಖ್ಯೆಯನ್ನು 64 ಎಂದು ಹೇಳುವುದುಂಟು. ಇದು 64 ಲಕ್ಷ, 64 ಕೋಟಿ ಎಂದೂ ಉÇÉೇಖಗಳಿವೆ. ಈ ಯೋಗಿನಿಯರನ್ನು ಆರಾಧಿಸುವ ಉಪಾಸಕರೂ ಇ¨ªಾರೆ. ಅದರ ಸುತ್ತ ಅನೇಕ ರೋಚಕ ಕಥಾ ಸಾಹಿತ್ಯ ಕೂಡ ಇದೆ.
ಮನುಷ್ಯನ ಮನಸ್ಸಿನಲ್ಲಿ ಸೃಷ್ಟಿಯ ಮೂಲ ಎಂದರೆ ಕುತೂಹಲ, ಭಯ ಮತ್ತು ಭಕ್ತಿ. ಈ ಕಲ್ಪನೆ ತಾಂತ್ರಿಕ ಉಪಾಸನೆಯಲ್ಲಿ ಯೋನಿಯ ಪರಿಕಲ್ಪನೆಯಾಗಿ ಬಂದಿದೆ. ಸತ್ಯಕಾಮರ ಒಂದು ಗ್ರಂಥದ ಹೆಸರೇ ತಂತ್ರಯೋನಿ. ಅದರ ಅರ್ಥ ಎಲ್ಲಕ್ಕೂ ಮೂಲ ಎಂದು. ಎಲ್ಲಕ್ಕೂ ಮೂಲ ಯಾರು? ತಾಯಿ ತಾನೆ. ಹೀಗಾಗಿ ತಾಯಿಯ ಮೂಲಕ ನಾವು ಹೊರಗೆ ಬರುವುದರಿಂದ ಈ ಕಲ್ಪನೆ ತಂತ್ರದ ಉಪಾಸನೆಯಲ್ಲಿ ಸೇರಿಕೊಂಡಿದೆ. ಭಾರತೀಯ ಅಧ್ಯಾತ್ಮವನ್ನು ಅರಿಯಲು ದೊಡ್ಡ ತೊಡಕು ನಮ್ಮ ಪಶ್ಚಿಮ ಬುದ್ಧಿ. ದೇಹದ ಭಾಗಗಳನ್ನು ಕುರಿತು ಮಾತನಾಡತೊಡಗಿದರೆ, ಅದು ಅಶ್ಲೀಲ ಎಂಬ ದೃಷ್ಟಿ ಕಲೆ-ಸಂಸ್ಕƒತಿಗಳಿಂದ ಮುಂದುವರೆದು ಅಧ್ಯಾತ್ಮ ವಿಷಯಗಳಲ್ಲಿ ಬಂದು ಬಿಟ್ಟಿದೆ. ಇದು ವಿಕ್ಟೋರಿಯನ್ ಮಾನಸಿಕತೆ, ಅಂದರೆ ಒಂದು ಕಾಲಕ್ಕೆ ನಮ್ಮ ದೇಶ ಆಳಿದ ಬ್ರಿಟಿಷರು ಹಿಂದೆ ಹೊಂದಿದ್ದ “ಇದು ನೀತಿ, ಇದು ಅನೀತಿ’ ಎಂಬ ಅವರ ಪರಿಕಲ್ಪನೆ. ಇಡೀ ಭಾರತೀಯ ಆಚರಣೆಗಳನ್ನು ನಮ್ಮ ಜಾನಪದ ಹಬ್ಬ-ಹರಿದಿನಗಳನ್ನು ನೋಡಲು ನಮಗೆ ತೊಳೆದ ಕಣ್ಣು ಬೇಕು. ಇಲ್ಲದಿದ್ದರೆ ಎಲ್ಲವೂ ಹೇವರಿಕೆ ಹುಟ್ಟಿಸುತ್ತದೆ. ಇದು ಜಾನಪದ ಅಧ್ಯಾತ್ಮ ಮತ್ತು ಶಾಕ್ತ-ಅಘೋರಿಗಳ ಅಧ್ಯಾತ್ಮ ಲೋಕ ಪ್ರವೇಶಿಸುವವರು ನೆನಪಿನಲ್ಲಿ ಇಡಬೇಕು. ಮುಕ್ತ ಮನಸ್ಸು ಇರದಿದ್ದರೆ ಸಾಧನೆ ಮತ್ತು ಅದರ ಸುತ್ತಲಿನ ಓದು ಎರಡಲ್ಲೂ ಪ್ರಗತಿ ಸಾಧ್ಯವಿಲ್ಲ.
ಅಂತರಂಗ ಉಪಾಸನೆಯೊಂದಿದೆ, ಅದರ ಕಡೆ ಹೋಗಬೇಕು ಎಂಬ ಅರಿವು ಸಾಧಕ ಜೀವಿಗೆ ಬರುವವರೆಗೂ ಬಹಿರಂಗದ ಆರಾಧನೆ ಅಗತ್ಯ. ಇದನ್ನು “ವಾಮಕೇಶ್ವರ ತಂತ್ರ’ ಕೂಡ ಹೇಳುತ್ತದೆ.
ಅಂತರ್ಯಾಗಾತ್ಮಿಕಾ ಪೂಜಾ ಸರ್ವಪೂಜೋತ್ತಮಾ ಪ್ರಿಯೇ|ಬಹಿಃ ಪೂಜಾ ವಿಧಾತವ್ಯಾ ಯಾವಜ್ಞಾನಂ ನ ಜಾಯತೇ||
ತಂತ್ರಗಳು ಬೋಧಿಸುವ ಅಧ್ಯಾತ್ಮ , ಅಂತರಂಗ ಮತ್ತು ಬಹಿರಂಗ ಉಪಾಸನೆ ಎರಡನ್ನೂ ಸೇರಿಸಿಕೊಂಡಿದೆ. ಮುಖ್ಯವಾಗಿ ಜಗತ್ತಿನ ಮೂಲ ಶಕ್ತಿ ತತ್ವ ಅದರತ್ತ ಪೂಜ್ಯ ಭಾವನೆ ಬೆಳೆಸಿಕೊಳ್ಳಬೇಕು. ಮನುಷ್ಯರಾಗಿ ನಾವು ತಂತ್ರಕ್ಕೆ ಸಲ್ಲಿಸಬಹುದಾದ ಗೌರವ ಇದೇ ಆಗಿದೆ. – ಜಿ. ಬಿ. ಹರೀಶ