Advertisement

ನೂತನ ವಿನ್ಯಾಸದ Hero Super Splendor XTEC ಬೈಕ್ ಬಿಡುಗಡೆ, ಆರಂಭಿಕ ಬೆಲೆ ಎಷ್ಟು?

01:43 PM Mar 07, 2023 | Team Udayavani |

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೀರೋ ಮೋಟೊಕಾರ್ಪ್ ನೂತನ ಸೂಪರ್ ಸ್ಪ್ಲೆಂಡರ್ XTEC ಬೈಕ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಆರಂಭಿಕ ಬೆಲೆ (ದೆಹಲಿ-ಎಕ್ಸ್ ಶೋರೂಂ) 83,368 ರೂಪಾಯಿ ಎಂದು ಕಂಪನಿ ಪ್ರಕಟನೆಯಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ:ಮಾಡಾಳ್ ಗೆ ಬಿಗ್ ರಿಲೀಫ್; ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹೈಕೋರ್ಟ್

ನೂತನ ಸೂಪರ್ ಸ್ಪ್ಲೆಂಡರ್ ಎಕ್ಸ್ ಟಿಇಸಿ ಡ್ರಮ್ ಮತ್ತು ಡಿಸ್ಕ್ ಎರಡು ಶ್ರೇಣಿಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ನೂತನ ಸೂಪರ್ ಸ್ಪ್ಲೆಂಡರ್ ದೇಶಾದ್ಯಂತ ಹೀರೋ ಮೋಟೊಕಾರ್ಪ್ ಡೀಲರ್ ಬಳಿ ಖರೀದಿಸಬಹುದಾಗಿದೆ ಎಂದು ಹೇಳಿದೆ.

ನೂತನ ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್ ಟಿಇಸಿ ಆಧುನಿಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿದ್ದು, ನೂತನ ಹೀರೋ ಸೂಪರ್ ಸ್ಪ್ಲೆಂಡರ್ ಬಿಎಸ್ 6 ಎಮಿಷನ್ ಮಾನದಂಡ ಹೊಂದಿದ್ದು, 125 ಸಿಸಿ ಎಂಜಿನ್ ಅನ್ನು ಒಳಗೊಂಡಿದೆ.

ಹೊಸ ಹೀರೋ ಸೂಪರ್ ಸ್ಪ್ಲೆಂಡರ್ XTEC ಎಲ್ ಇಡಿ ಹೆಡ್ ಲ್ಯಾಂಪ್ ಹೊಂದಿದ್ದು, ಬೈಕ್ ನ ಮುಂಭಾಗ ಮತ್ತು ರಿಮ್ ಟೇಪ್ಸ್ ಅನ್ನು ನೂತನವಾಗಿ ವಿನ್ಯಾಸಗೊಳಿಸಲಾಗಿದೆ. ಹೀರೋ ಸೂಪರ್ ಸ್ಪ್ಲೆಂಡರ್ ಬೈಕ್ ಮೂರು ಬಣ್ಣಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.

Advertisement

60ಕ್ಕಿಂತ ಹೆಚ್ಚು ಮೈಲೇಜ್ ನೀಡಲಿದ್ದು, ಇದರ ಎಂಜಿನ್ 10.7 bhp ಪವರ್ ಮತ್ತು 10.6 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬೈಕ್ 5 ಸ್ಪೀಡ್ ಗೇಟ್ ಬಾಕ್ಸ್ ಹೊಂದಿದ್ದು, ಬ್ಲೂಟೂಥ್ ಕನೆಕ್ಟಿವಿಟಿ ಮೂಲಕ ಕಾಲ್ ಮತ್ತು ಎಸ್ ಎಂಎಸ್ ಅಲರ್ಟ್ ಪಡೆಯಬಹುದಾಗಿದೆ. ಫ್ಯೂಯೆಲ್ ಇಂಡಿಕೇಟರ್, ಯುಎಸ್ ಬಿ ಚಾರ್ಜರ್, ರಿಲಯರ್ ಟೈಮ್ ಮೈಲೇಜ್ ಇಂಡಿಕೇಟರ್ ಫೀಚರ್ಸ್ ಬೈಕ್ ನಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next