Advertisement

ಎಲ್ಲಾ ಶಾಸಕರು ನನ್ನ ಆಪ್ತರು: ಸಿದ್ದರಾಮಯ್ಯ

01:29 AM Jul 12, 2019 | Team Udayavani |

ಬೆಂಗಳೂರು: ರಾಜೀನಾಮೆ ನೀಡಿದ ಶಾಸಕರು ಮಾತ್ರವಲ್ಲ, ಎಲ್ಲಾ 78 ಶಾಸಕರು ನನ್ನ ಆಪ್ತರು ಎಂದು ಹೇಳುವ ಮೂಲಕ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಮೇಲಿನ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಟ್ವೀಟ್‌ ಮೂಲಕ ತಮ್ಮ ನಿಲುವು ಪ್ರಕಟಿಸಿರುವ ಅವರು, ರಾಜೀನಾಮೆ ನೀಡಿರುವ ಶಾಸಕರು ಮಾತ್ರವಲ್ಲ, ಕಾಂಗ್ರೆಸ್‌ನ ಎಲ್ಲ 78 ಶಾಸಕರೂ ನನಗೆ ಆಪ್ತರಾಗಿದ್ದಾರೆ. ಅವರು ನಮ್ಮ ಪಕ್ಷದ ಬಹಳಷ್ಟು ನಾಯಕರಿಗೂ ಆಪ್ತರಾಗಿದ್ದಾರೆ.

Advertisement

ಮಾಧ್ಯಮಗಳು ಸೆಲೆಕ್ಟಿವ್‌ ಆಗಿ ಈ ಶಾಸಕರು ನನ್ನ ಆಪ್ತರು ಎಂದು ಹೇಳುತ್ತಿರುವುದು ಸರಿಯಲ್ಲ. ಇದರಿಂದ ನನ್ನ ಮನಸ್ಸಿಗೆ ನೋವಾಗಿದೆ ಎಂದಿದ್ದಾರೆ. ಈ ಮೂಲಕ ರಾಜೀನಾಮೆ ನೀಡುವ ಶಾಸಕರೆಲ್ಲಾ ಸಿದ್ದರಾಮಯ್ಯ ಆಪ್ತರು ಎಂಬ ಕಾಂಗ್ರೆಸ್‌ ವಲಯದ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ಅವರು, ಇದರ ಜತೆಗೆ ರಾಜೀನಾಮೆ ನೀಡಿದವರು ನನಗೆ ಮಾತ್ರವಲ್ಲ, ನಮ್ಮ ಪಕ್ಷದ ಇನ್ನಿತರ ನಾಯಕರಿಗೂ ಆಪ್ತರು ಎನ್ನುವ ಮೂಲಕ ಆರೋಪ ಮಾಡಿದವರಿಗೆ ಟಾಂಗ್‌ ಕೊಡುವ ಪ್ರಯತ್ನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next