Advertisement

ಆಲ್‌ ಇಸ್‌ ವೆಲ್‌; ಹನಿ ನೀರನ್ನೂ ಸಮುದ್ರಕ್ಕೆ ಬಿಡಲ್ಲ ; ಸಚಿವ ಡಿಕೆಶಿ

01:16 PM Sep 26, 2018 | |

ಹುಬ್ಬಳ್ಳಿ /ಬೆಳಗಾವಿ:ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ಬುಧವಾರ ಖಾನಾಪುರ ತಾಲೂಕಿನ ಕಣಕುಂಬಿಗೆ ಭೇಟಿ ನೀಡಿ ಮಹಾದಾಯಿ ಉಗಮಸ್ಥಾನ ವೀಕ್ಷಿಸಿದರು. 

Advertisement

ಭೇಟಿಗೂ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿಕೆಶಿ ಮಹಾದಾಯಿ ವಿಚಾರದಲ್ಲಿ ನಮಗೆ ಅನ್ಯಾಯವಾಗಿದ್ದು, ತೀರ್ಪು ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ. ನಮ್ಮ ಪಾಲಿನ ನೀರು ಪಡೆಯಲು ಕಾನೂನಾತ್ಮಕ ಅಭಿಪ್ರಾಯ ಕೇಳಿದ್ದೇವೆ. ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ . ರಾಜ್ಯದ ಒಂದು ಹನಿ ನೀರನ್ನೂ ಸಮುದ್ರಕ್ಕೆ ಸೇರಲು ಬಿಡುವುದಿಲ್ಲ ಎಂದರು. 

ಇದೇ ವೇಳೆ ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆಲ್‌ ಇಸ್‌ ವೆಲ್‌ ಎಂದರು. 

ಸಚಿವ ಡಿಕೆಶಿ ಅವರೊಂದಿಗೆ ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳ್ಕರ್‌ , ಅಂಜಲಿ ನಿಂಬಾಳ್ಕರ್‌ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next