Advertisement

ಎಲ್ಲರನ್ನು ಒಗ್ಗೂಡಿಸುವುದು ಹೋಳಿ ಹಬ್ಬ

01:46 PM Mar 08, 2017 | |

ಹುಬ್ಬಳ್ಳಿ: ಯಾವುದೇ ಜಾತಿ ಮತ, ಪಂಥ ಎಂಬ ಭೇದ-ಭಾವ ಇಲ್ಲದೆ ಎಲ್ಲರನ್ನು ಒಗ್ಗೂಡುವಂತೆ ಮಾಡುವುದು ಹೋಳಿ ಹಬ್ಬವಾಗಿದೆ ಎಂದು ಮೂರುಸಾವಿರಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು. ಮೂರುಸಾವಿರಮಠದ ಆವಣರದಲ್ಲಿ ಮಂಗಳವಾರ ಹುಬ್ಬಳ್ಳಿ ಹಲಗಿ ಹಬ್ಬ-2017ರ ಲಾಂಛನ ಹಾಗೂ ಕರಪತ್ರ ಬಿಡುಗಡೆ ಮಾಡಿ  ಅವರು ಆಶೀರ್ವಚನ ನೀಡಿದರು. 

Advertisement

ಕಳೆದ ವರ್ಷ ನಡೆದ ಹಲಗಿ ಹಬ್ಬಕ್ಕೆ ಸುಮಾರು 400 ಜನರು ಸೇರಬಹುದೆಂಬ ನಿರೀಕ್ಷೆ ಇತ್ತು. ಆದರೆ, ಸಾವಿರಾರು ಜನರು ಸೇರುವ ಮೂಲಕ ನಿರೀಕ್ಷೆಗೆ ಮೀರಿ ಸ್ಪಂದನೆ ವ್ಯಕ್ತವಾಗಿತ್ತು. ಈ ವರ್ಷ ಜನರ ಸಂಖ್ಯೆ ಕಳೆದ ವರ್ಷಕ್ಕಿಂತ ದುಪ್ಪಟ್ಟಾಗಲಿ ಎಂದರು. ಪಾಲಿಕೆ ಸದಸ್ಯ  ಶಿವಾನಂದ ಮುತ್ತಣ್ಣವರ  ಮಾತನಾಡಿ, ನಗರದಲ್ಲಿ ಸುಮಾರು 200 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ರತಿ-ಮನ್ಮಥರ ಪ್ರತಿಷ್ಠಾಪನೆ ಮಾಡಲಾಗುತ್ತದೆ. 

ಆ ಎಲ್ಲ ಸಮಿತಿಯವರನ್ನು ಭೇಟಿ ಮಾಡಿ ಹಲಗಿ ಹಬ್ಬಕ್ಕೆ ಆಮಂತ್ರಿಸುವ ಮೂಲಕ ಹಲಗಿ ಹಬ್ಬಕ್ಕೆ ವಿಶೇಷ ಮೆರಗು ತರಬೇಕು ಎಂದರು. ಹುಬ್ಬಳ್ಳಿ ಹಲಗಿ ಹಬ್ಬದ ರೂವಾರಿ ಮಹೇಶ  ಟೆಂಗಿನಕಾಯಿ ಮಾತನಾಡಿ, ಕಳೆದ  ಬಾರಿಗಿಂತ ಈ ಬಾರಿ ಉತ್ತಮವಾಗಿ ಹಲಗಿ ಹಬ್ಬದ ಲಾಂಛನ ಮಾಡಲಾಗಿದೆ. ಹಲಗಿ ಹಬ್ಬದ  ಹಿನ್ನೆಲೆ ಮತ್ತು ವಿಶೇಷತೆಯ ಮಾಹಿತಿ ಇರುವ ಕರಪತ್ರ ಬಿಡುಗಡೆ  ಮಾಡಲಾಗಿದ್ದು ಎಲ್ಲೆಡೆ ವಿತರಣೆ ಮಾಡುವ ಕೆಲಸವನ್ನು ಎಲ್ಲ ಯುವಕ ತಂಡ ಮಾಡಲಿದೆ.

ಕಳೆದ ಬಾರಿಗಿಂತ ಈ ಬಾರಿ  ಹೆಚ್ಚಿನ ಪ್ರದೇಶಗಳಿಗೆ ಹಲಗಿ ಹಬ್ಬದ ಮೆರವಣಿಗೆ ತೆರಳಲಿದೆ ಎಂದರು.  ಮಾ.14ರಂದು ಮಧ್ಯಾಹ್ನ 3 ಗಂಟೆಗೆ ಮೂರುಸಾವಿರಮಠ ಮೈದಾನದಲ್ಲಿ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹಲಗಿ ಹಬ್ಬಕ್ಕೆ ಚಾಲನೆ ನೀಡಲಿದ್ದು, ವಿವಿಧ ಪಕ್ಷಗಳ ಮುಖಂಡರು ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು. 

ವಸಂತ ಹೊರಟ್ಟಿ ಮಾತನಾಡಿದರು. ಸುಭಾಸಸಿಂಗ್‌  ಜಮಾದಾರ, ತಿಪ್ಪಣ್ಣ ಮಜ್ಜಿಗೆ, ಶಿವು ಮೆಣಸಿನಕಾಯಿ, ನಾಗೇಶ ಕಲಬುರ್ಗಿ, ಹನುಮಂತಪ್ಪ ದೊಡ್ಡಮನಿ, ಮಹೇಂದ್ರ  ಕೌತಾಳ, ರಾಜು ಕೋರ್ಯಾನಮಠ, ಪ್ರಕಾಶ ಶೃಂಗೇರಿ,  ಜಗದೀಶ ಬುಳ್ಳಾನವರ, ಗಣು ಜರತಾರಘರ, ರಾಜು ಜರತಾರಘರ, ದೀಪಕ ಮೆಹರವಾಡೆ, ಸಂತೋಷ ಅರಕೇರಿ, ವಿನಯ  ಸಜ್ಜನ, ಗೋಪಾಲ ಬದ್ದಿ ಮತ್ತಿತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next