Advertisement
ಯಾವುದೇ ಬೆಳೆಯ ಉತ್ತಮ ಇಳುವರಿಗೆ ಹಾಗೂ ಬೆಳವಣಿಗೆಗೆ ಮಣ್ಣಿನ ಆರೋಗ್ಯ ಮುಖ್ಯ. ಸಸ್ಯಗಳಿಗೆ ಮತ್ತು ಜೀವಿಗಳಿಗೆ ನೈಸರ್ಗಿಕ ಪ್ರಕ್ರಿಯೆಗಳಿಂದ ಆಹಾರವನ್ನು ಒದಗಿಸುವ ಮೂಲ ವಸ್ತುವೇ ಮಣ್ಣು. ನಿಸರ್ಗದಲ್ಲಿ ಮಣ್ಣು ರೂಪುಗೊಳ್ಳಲು ಸಹಸ್ರಾರು ವರ್ಷಗಳೆ ಬೇಕು. ಆದರೆ ಮಾನವನ ಅತಿಯಾಸೆಯಿಂದಾಗಿ, ವಿಪರೀತ ರಾಸಾಯನಿಕಗಳ ಬಳಕೆಯಿಂದ ಈ ಮಣ್ಣು ಕೆಲವೇ ವರ್ಷಗಳಲ್ಲಿ ಹಾಳಾಗುತ್ತಿದೆ. ಮಣ್ಣಿನ ಸವಕಳಿ ತಡೆದು ಮಣ್ಣಿನ ಫಲವತ್ತತೆಯನ್ನು ಕಾಪಾಡುವುದೇ ಮಣ್ಣಿನ ಸಂರಕ್ಷಣೆಯ ದಾರಿಯೂ ಆಗಿದೆ.
ವೇಗವಾಗಿ ಬೀಸುವ ಗಾಳಿ, ರಭಸವಾಗಿ ಹರಿಯುವ ನೀರು, ಅರಣ್ಯ ನಾಶ, ಮಿತಿಮೀರಿದ ಮೇಯುವಿಕೆ, ಮಣ್ಣಿನ ಮೇಲೆ ತಗಲುವ ಬೆಂಕಿ. ನಿಸರ್ಗದಲ್ಲಿ ನಡೆಯುವ ಈ ಕ್ರಮಗಳಿಂದ ಮಣ್ಣು ಸವಕಳಿಯಾಗುವುದರೊಂದಿಗೆ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಅರಣ್ಯೀಕರಣದ ಹೆಚ್ಚಳದಿಂದ ಮರಗಳ ಬೇರುಗಳು ಮಣ್ಣಿನ ಕಣಗಳನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳುವುದರಿಂದ ಮಳೆ-ಗಾಳಿಯಿಂದಾಗುವ ಸವಕಳಿ ತಪ್ಪುತ್ತದೆ. ತಡೆ ಒಡ್ಡುಗಳನ್ನು ನಿರ್ಮಿಸುವುದರಿಂದ ಮೇಲ್ಪದರದ ಮಣ್ಣು ನೀರು ಮತ್ತು ಗಾಳಿಯಿಂದ ಮುಂದೆ ಓಡದಂತೆ ಹಿಡಿದುಕೊಂಡು ಫಲವತ್ತತೆ ಕಾಪಾಡಬಹುದು. ಮರದ ಸಾಲುಗಳ ತಡೆಪಟ್ಟಿಯಿಂದ ಗಾಳಿಯಿಂದಾಗುವ ಮಣ್ಣಿನ ಸವಕಳಿ ತಪ್ಪುತ್ತದೆ. ಭೂಮಿಯ ಇಳಿಜಾರಿಗೆ ಅಡ್ಡಲಾಗಿ ಬೇಸಾಯ/ಉಳುಮೆ ಮಾಡುವುದರಿಂದ ಮಣ್ಣು ಕೊರೆತ ತಪ್ಪುತ್ತದೆ.
Related Articles
Advertisement
ಇದರ ಜೊತೆಗೆ, ಸಾವಯವ, ಜೈವಿಕ, ಹಸಿರೆಲೆ, ಕೊಟ್ಟಿಗೆ, ಕಾಂಪೋಷ್ಟ್, ಎರೆಹುಳು ಗೊಬ್ಬರದ ಯಥೇತ್ಛ ಬಳಕೆ ಮಾಡುವುದಲ್ಲದೆ ಜೈವಿಕ ಪೀಡೆನಾಶಕಗಳನ್ನು ಬಳಸುವುದರಿಂದಲೂ ಮಣ್ಣಿನಲ್ಲಿ ಸತ್ವ ಹೆಚ್ಚಾಗುತ್ತದೆ.
ಏಕೆ ಕಡಿಮೆ ಆಗುತ್ತದೆ?ಒಂದು ವರ್ಷದಲ್ಲಿ ಒಂದೇ ಜಮೀನಿನಲ್ಲಿ ಒಂದೇ ತಳಿಯ ಬೆಳೆ ಬೆಳೆಯುವುದರಿಂದ ಕೆಲವು ಪೋಷಕಾಂಶಗಳ ಕೊರತೆಯಾಗಿ ಮಣ್ಣಿನಲ್ಲಿ ಫಲವತ್ತತೆ ಕಡಿಮೆಯಾಗುವುದುಂಟು. ಋತುಮಾನಕ್ಕನುಗುಣವಾಗಿ ಸಾಗುವಳಿಯ ಕ್ರಮಗಳನ್ನು ಹಾಗೂ ಬಹುಬೆಳೆ ಪದ್ದತಿಯನ್ನು ಅನುಸರಿಸುವುದು. ಒಂದು ಜಮೀನಿನಲ್ಲಿ ಹಲವಾರು ವರ್ಷಗಳಿಂದ ನಿರಂತರವಾಗಿ ಬಹುವಾರ್ಷಿಕ ಬೆಳೆ ಬೆಳೆಯುವುದರಿಂದ ಮಣ್ಣಿಗೆ ವಿಶ್ರಾಂತಿ, ಉಸಿರಾಟ ಮತ್ತು ಸೂರ್ಯಪ್ರಕಾಶ ಇಲ್ಲವಾಗಿ ಮಣ್ಣಿನ ಆರೋಗ್ಯ ಹಾಳಾಗುತ್ತದೆ. ಆದ್ದರಿಂದ ಬಹುವಾರ್ಷಿಕ ಬೆಳೆಯ ನಂತರ ಮಾಗಿ ಉಳಿಮೆ, ಕಾಲ್ಗೆ„ ಪದ್ಧತಿ ಹಾಗೂ ಏಕವಾರ್ಷಿಕ ಬೆಳೆಗಳನ್ನು ಬೆಳೆಯುವುದು. ಸಸ್ಯಕ್ಕೆ ಬೇಕಾಗುವ ನೀರು, ಪೋಷಕಾಂಶಗಳು ಕೇವಲ ಮಣ್ಣಿನಿಂದ ದೊರಕುತ್ತವೆ. ಕೀಟನಾಶಕ, ಕಳೆನಾಶಕ ಮತ್ತು ರೋಗನಾಶಕಗಳ ಬಳಕೆಯಿಂದ ಮಣ್ಣು ವಿಷಕಾರಿಯಾಗುತ್ತದೆ. ಕೆಲವು ಕೀಟಗಳು ರೋಗ-ನಿರೋಧಕ ಶಕ್ತಿಯನ್ನು ಪ್ರಾಕೃತಿಕವಾಗಿ ಹೆಚ್ಚಿಸಿಕೊಳ್ಳುತ್ತಿರುವುದರಿಂದ ಕೀಟನಾಶಕದ ಬಳಕೆ ಹೆಚ್ಚುತ್ತಿದೆ. ಇದರಿಂದ ರೈತಸ್ನೇಹಿ ಕೀಟಗಳು ನಾಶವಾಗುತ್ತಿವೆ. ಈ ಕಾರಣದಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ಕೆಲವು ಕೀಟನಾಶಕಗಳು ಹಲವಾರು ವರ್ಷಗಳ ಕಾಲ ಮಣ್ಣಿನಲ್ಲಿ ಉಳಿಯುವುದರಿಂದ ವಿಷವು ಇನ್ನಿತರ ಜೀವಿಗಳಿಗೂ ಹರಡುತ್ತದೆ. ಮಣ್ಣಿನ ರಸಸಾರ
ಮಣ್ಣಿನಲ್ಲಿ ನಿರಂತರವಾಗಿ ಬೆಳೆ ಬೆಳೆಯುವುದರಿಂದ ಹಾಗೂ ಮಾಗಿ ಉಳುಮೆಯ ಕೊರತೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ಸಮಸ್ಯಾತ್ಮಕ ಮಣ್ಣು ಅಂದರೆ ಆಮ್ಲಿàಯ, ಕ್ಷಾರೀಯ/ಉಪ್ಪು/ಲವಣಯುಕ್ತ ಮಣ್ಣು. ಮಣ್ಣಿನ ರಸಸಾರ 6.5ಕ್ಕಿಂತ ಕಡಿಮೆ ಇದ್ದಲ್ಲಿ ಆಮ್ಲಿಯ/ಹುಳಿ ಮಣ್ಣು, 7.5ಕ್ಕಿಂತ ಹೆಚ್ಚು ಇದ್ದಲ್ಲಿ ಕ್ಷಾರೀಯ ಮಣ್ಣು. ಮಣ್ಣಿನಲ್ಲಿ ರಸಸಾರದ ಅಪೇಕ್ಷಿ$ತ ಮಟ್ಟ 6.5 ದಿಂದ 7.5 ರಷ್ಟು ಇರಬೇಕು. ಆಮ್ಲಿàಯ ಮಣ್ಣಿನಲ್ಲಿರುವ ಅಲ್ಯುಮಿನಿಯಮ್, ಕಬ್ಬಿಣ ಹಾಗೂ ಮ್ಯಾಂಗನೀಸ್‌ಗಳು ಕರಗಿ ಬೆಳೆಗಳಿಗೆ ವಿಷವನ್ನು ಬಿಡುಗಡೆ ಮಾಡುತ್ತವೆ. ಈ ಮಣ್ಣನ್ನು ಸರಿಪಡಿಸಲು ಸುಣ್ಣದ ಅಂಶವುಳ್ಳ ಕ್ಯಾಲ್ಸಿಯಂ ಕಾಬೋìನೆಟ್‌ನ್ನು ಮಣ್ಣಿನಲ್ಲಿ ಬೆರೆಸಬೇಕು. ಕ್ಷಾರೀಯ ಮಣ್ಣು ಸರಿಪಡಿಸಲು ಜಿಪ್ಸಂ ಬಳಕೆ ಅವಶ್ಯವಾಗಿದೆ. ಅನವಶ್ಯಕವಾಗಿರುವ ರಸಸಾರದ ಮಟ್ಟವನ್ನು ಅಪೇಕ್ಷಿ$ತ ಮಟ್ಟಕ್ಕೆ ತಲುಪಿಸಲು ಹಸಿರೆಲೆ ಸಸ್ಯ ಹಾಗೂ ಸಾವಯವ ವಸ್ತುಗಳನ್ನು ಯಥೇತ್ಛವಾಗಿ ಬಳಕೆ ಮಾಡಬೇಕು. ಮಣ್ಣಿನ ಫಲವತ್ತತೆ ಕಾಪಾಡುವುದು ಹೀಗೆ..
ಮಣ್ಣಿನಲ್ಲಿರುವ ವಿಷದ ಪ್ರಮಾಣವನ್ನು ಕಡಿಮೆ ಮಾಡಲು ಸಾವಯವ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರದ ಯಥೇತ್ಛ ಬಳಕೆ ಅವಶ್ಯ. ಇದರಿಂದ ಸೂಕ್ಷ್ಮಜೀವಿ, ಬ್ಯಾಕ್ಟೀರಿಯಾ ಹಾಗು ಎರೆಹುಳುಗಳು ಅಧಿಕಗೊಂಡು ಮಣ್ಣಿನಲ್ಲಿರುವ ವಿಷಕಾರಿ ಅಂಶಗಳನ್ನು ನಿಷ್ಕ್ರಿಯಗೊಳಿಸುತ್ತವೆ. ಮಾಗಿ ಉಳುಮೆಯಿಂದ ಮಣ್ಣಿನಲ್ಲಿರುವ ವಿಷಜಂತು ಹಾಗೂ ವಿಷಕಾರಿ ಅಂಶಗಳನ್ನು ಕಡಿಮೆ ಮಾಡಬಹುದಾಗಿದೆ. ಅತಿಯಾಗಿ ನೀರುಣಿಸುವುದರಿಂದ ಮಣ್ಣು ಸವುಳು-ಜವುಳು ಹಾಗೂ ಯುಕ್ತವಾಗಿ ಬೆಳೆಗಳಿಗೆ ಮಾರಕವಾಗುತ್ತದೆ. ಮಣ್ಣು ಸಹನಾ ಶಕ್ತಿ ಹೊಂದಿದ ಭೌತಿಕ ವಸ್ತುವಾಗಿದೆ. ಮಣ್ಣಿನಲ್ಲಿ ಏನೆಲ್ಲಾ ಹಾಕಿದರೂ ಅದಕ್ಕೊಂದು ರೂಪವಾಗಿ ಪರಿವರ್ತನೆಯಾಗುತ್ತದೆ. ಮಣ್ಣು ಪ್ರಕೃತಿದತ್ತವಾದ ನಿಸರ್ಗದ ಅಮೂಲ್ಯ ಸಂಪತ್ತು. ಸಸ್ಯಗಳಿಗೆ ಪೋಷಕಾಂಶಗಳನ್ನು ಒದಗಿಸುವ ಶಕ್ತಿಗೆ ಮಣ್ಣಿನ ಫಲವತ್ತತೆ ಎನ್ನುತ್ತಾರೆ. ಸಸ್ಯಗಳು, ಪ್ರಾಣಿಗಳು, ಶಿಲೀಂದ್ರಗಳು ಹಾಗೂ ಬ್ಯಾಕ್ಟೀರಿಯಾಗಳು ಮಣ್ಣು ನಿರ್ಮಾಣದ ಕಾರ್ಯಕರ್ತರು. ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಸ್ಯಾವಶೇಷ ಮತ್ತು ಕೃಷಿ ತ್ಯಾಜ್ಯ ವಸ್ತುಗಳ ಜೊತೆಗೆ ಕೆಲವು ಜೈವಿಕ ಪ್ರಕ್ರಿಯೆಗಳನ್ನು ಅಳವಡಿಸುವುದು ಅವಶ್ಯವಿದೆ. ಬೆಳೆಗಳ ಇಳುವರಿ ಹೆಚ್ಚಿಸುವ ತಾಂತ್ರಿಕತೆಗಳಲ್ಲಿ ಮಣ್ಣಿನ ಆರೋಗ್ಯ ನಿರ್ವಹಣೆ – ಬಸವರಾಜ ಶಿವಪ್ಪ ಗಿರಗಾಂವಿ