ವಿಜಯಪುರ: ಈಗಾಗಲೇ ಡೆಂಘೀ, ಚಿಕೂನ್ ಗುನ್ಯಾ ಹಾಗೂ ಮಲೇರಿಯಾ ಹರಡುವಿಕೆ ತಡೆಯಲು ಹಾಗೂ ಚಿಕಿತ್ಸೆಗೆ ಅನುಕೂಲವಾಗುವ ಎಲ್ಲಾ ರೀತಿಯ ಸೌಕರ್ಯವನ್ನು ಸರ್ಕಾರ ಹಾಗೂ ಜಿಲ್ಲಾ ಪಂಚಾಯ್ತಿ ಒದಗಿಸುತ್ತಿದೆ. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಜಿಪಂ ಉಪಾಧ್ಯಕ್ಷ ಅನಂತಕುಮಾರಿ ತಿಳಿಸಿದರು.
ಪಟ್ಟಣದ ಸುಬ್ಬಮ್ಮ ಚನ್ನಪ್ಪ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ರೋಟರಿ ಸಂಸ್ಥೆ, ಮಲ್ಲೇಶ್ವರಂ ಕೆ.ಸಿ.ಜನರಲ್ ಆಸ್ಪತ್ರೆ ಹಮ್ಮಿಕೊಂಡಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆಯಲ್ಲಿ ಮಾತನಾಡಿ, ಸರ್ಕಾರದಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅನುದಾನ ಸಿಗುತ್ತಿದೆ. ಇದನ್ನು ಅಧಿಕಾರಿಗಳು ವಸ್ತು ನಿಷ್ಠೆಯಿಂದ ಸಾರ್ವಜನಿಕರಿಗೆ ತಿಳಿಸಿಕೊಡುವತ್ತ ಗಮನಹರಿಸಬೇಕು. ಮತ್ತು ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಡಾ.ಮಂಜುಳಾ ಮಾತನಾಡಿ, ಆರೋಗ್ಯವಂತರು 18 ವರ್ಷದಿಂದ ರಕ್ತದಾನ ಮಾಡಬಹುದು. ಇದರಿಂದ ಸಾಕಷ್ಟು ರೋಗಿಗಳಿಗೆ ಅನುಕೂಲವಾಗುತ್ತದೆ. ರಕ್ತದಾನ ಆಮೂಲ್ಯವಾಗಿದೆ. ಇದಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ರಕ್ತನೀಡುವುದರಿಂದ ಆರೋಗ್ಯವೃದ್ಧಿಸುತ್ತದೆ ಎಂದು ತಿಳಿಸಿದರು.
ಅತಿಹೆಚ್ಚು ಬಾರಿ ರಕ್ತ ನೀಡಿದಂತಹ ರೋಟೇರಿಯನ್ ಸೂರ್ಯಪ್ರಕಾಶ್, ಡಾ.ಸತ್ಯಪ್ರಸಾದ್, ಪದವಿ ಪೂರ್ವ ಕಾಲೇಜಿನ ದೈಹಿಕ ಪ್ರೌಢಶಿಕ್ಷಕ ರಮೇಶ್ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಮಾಜಿ ಅಧ್ಯಕ್ಷೆ ಅನಸೂಯಮ್ಮ, ಸದಸ್ಯ ಎಸ್.ಭಾಸ್ಕರ್, ಡಾ.ನರಸಿಂಹಮೂರ್ತಿ, ಡಾ.ಉದಯ ಕುಮಾರ್, ಏಡ್ಸ್ ನಿಯಂತ್ರಣಾ ಮೇಲ್ವಿಚಾರಕಿ ಶಕಿಲಾ, ಕರವೇ ಟಿಲ್ಲರ್ ಮಂಜುನಾಥ್, ವಿ.ರಾ.ಶಿವಕುಮಾರ್ (ನಾರಾಯಣಗೌಡ ಬಣ),
-ಮಹೇಶ್‌ಕುಮಾರ್ (ಪ್ರವೀಣ್‌ಶೆಟ್ಟಿ ಬಣ), ಬಿಎಸ್‌ಎನ್‌ಎಲ್ ನಾಮಿನಿ ಸದಸ್ಯ ಕನಕರಾಜು, ರೋಟರಿ ಸಂಸ್ಥೆಯ ಅಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ರುದ್ರಮೂರ್ತಿ, ದಸಂಸ ತಾಲೂಕು ಅಧ್ಯಕ್ಷ ವೇಣುಗೋಪಾಲ್, ರಕ್ತನಿಧಿ ಡಾ.ಕೆ.ಸಿ.ಶಾಂತಲಾ, ಬಿ.ಎಸ್.ಪ್ರವೀಣ್‌ಕುಮಾರ್, ಯಲುವಹಳ್ಳಿ ಅಶೋಕ್, ಕೆ.ಸಿ.ಜನರಲ್ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.