Advertisement
ಬುಧವಾರ ರಾತ್ರಿಯ ಪಂದ್ಯದಲ್ಲಿ ಸೈನಾ ನೆಹ್ವಾಲ್ ಅವರನ್ನು ಜಪಾನಿನ ಅಕಾನೆ ಯಮಾಗುಚಿ ಕೇವಲ 28 ನಿಮಿಷಗಳಲ್ಲಿ 21-11, 21-8 ಅಂತರದಿಂದ ಹಿಮ್ಮೆಟ್ಟಿಸಿದರು. ಇದು ಯಮಾಗುಚಿ ವಿರುದ್ಧ ಆಡಿದ 11 ಪಂದ್ಯಗಳಲ್ಲಿ ಸೈನಾ ಅನುಭವಿಸಿದ 9ನೇ ಸೋಲು. ಸೈನಾ ಸೋಲಿನಿಂದಾಗಿ ಪಿ.ವಿ. ಸಿಂಧು ಈ ಕೂಟದ ವನಿತಾ ಸಿಂಗಲ್ಸ್ ನಲ್ಲಿ ಉಳಿದಿರುವ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ. ಅವರು ಅಮೆರಿಕದ ಬೀವಿನ್ ಜಾಂಗ್ ವಿರುದ್ಧ ಜಯ ಸಾಧಿಸಿ ದ್ವಿತೀಯ ಸುತ್ತು ತಲುಪಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ಉಳಿದಿರುವ ಭಾರತದ ಏಕಮಾತ್ರ ಸ್ಪರ್ಧಿ ಲಕ್ಷ್ಯ ಸೇನ್. ಅವರು ಹಾಂಕಾಂಗ್‌ನ ಚೆಯುಕ್ ಯಿಯು ಲೀ ವಿರುದ್ಧ 17-21, 21-8, 21-17 ಅಂತರದ ಗೆಲುವು ಸಾಧಿಸಿ ದ್ವಿತೀಯ ಸುತ್ತು ತಲುಪಿದ್ದಾರೆ. ಸೇನ್ ಆವರ ದ್ವಿತೀಯ ಸುತ್ತಿನ ಎದುರಾಳಿ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್.
ಪುರುಷರ ವಿಭಾಗದ ಇತರ ಸ್ಪರ್ಧಿಗಳಲ್ಲಿ ಪಿ. ಕಶ್ಯಪ್ ಮೊದಲ ಸುತ್ತಿನ ಪಂದ್ಯದ ವೇಳೆ ಗಾಯಾಳಾಗಿ ನಿರ್ಗಮಿಸಿದರೆ, ಬಿ. ಸಾಯಿ ಪ್ರಣೀತ್ ಮೊದಲ ಸುತ್ತಿನಲ್ಲೇ ಎಡವಿದರು.
Related Articles
Advertisement