Advertisement

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ : ಭಾರತೀಯರ ಕೋವಿಡ್‌ ವರದಿ ಗೊಂದಲ

11:06 PM Mar 17, 2021 | Team Udayavani |

ಬರ್ಮಿಂಗ್‌ಹ್ಯಾಮ್: “ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಗೂ ಮುನ್ನ ಕೊರೊನಾ ನಾಟಕ ವೊಂದು ನಡೆದು ಗೊಂದಲ ಸೃಷ್ಟಿಯಾಯಿತು. ಭಾರತೀಯ ತಂಡಕ್ಕೆ ನಡೆಸಿದ ಕೋವಿಡ್‌ ಟೆಸ್ಟ್‌ನಲ್ಲಿ ಮೂವರು ಆಟಗಾರರ ಹಾಗೂ ಓರ್ವ ಸಿಬಂದಿಯ ವರದಿ ಪಾಸಿಟಿವ್‌ ಬಂದಿತ್ತು. ಬುಧವಾರ ಇದು ನೆಗೆಟಿವ್‌ ಆಗಿ ಪರಿವರ್ತನೆಗೊಂಡಿದೆ. ಹೀಗಾಗಿ ಅವರಿಗೆ ಈ ಕೂಟದಲ್ಲಿ ಪಾಲ್ಗೊಳ್ಳಲು ಬಿಡಬ್ಲ್ಯುಎಫ್ ಅನುಮತಿ ನೀಡಿದೆ.

Advertisement

ಮಂಗಳವಾರ ನಡೆಸಿದ ಕೋವಿಡ್‌ ಪರೀಕ್ಷೆಯಲ್ಲಿ ಭಾರತದ ಮೂವರು ಶಟ್ಲರ್ ಮತ್ತು ಓರ್ವ ತಂಡದ ಸಿಬಂದಿಯ ಫ‌ಲಿತಾಂಶ ಪಾಸಿಟಿವ್‌ ಬಂದಿದೆ ಎಂದು ಕೂಟದ ಆಯೋಜಕರು ತಿಳಿಸಿದ್ದರು. ಇದಕ್ಕೆ ಭಾರತದ ಕೋಚ್‌ ಮಥಿಯಾಸ್‌ ಬೋಯಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇಂಥ ಫ‌ಲಿತಾಂಶ ಖಂಡಿತ ಸಾಧ್ಯವಿಲ್ಲ, ಇದು ನಂಬಲರ್ಹ ವರದಿಯಲ್ಲ ಎಂದು ವಾದಿಸಿದ್ದರು.

ಇದನ್ನೂ ಓದಿ :ಬೆಂಗಳೂರು ಭೂಕಬಳಿಕೆ ನಿಯಂತ್ರಣಕ್ಕೆ ಕಠಿಣ ಕಾನೂನು : ಆರ್‌. ಅಶೋಕ್‌

ಏಕಾಏಕಿ ಪಾಸಿಟಿವ್‌ ಹೇಗೆ?
“ನಾವು ಕಳೆದ ವಾರವಷ್ಟೇ ಮುಗಿದ ಸ್ವಿಸ್‌ ಓಪನ್‌ ಕೂಟದ ಬಳಿಕವೂ ಪ್ರತ್ಯೇಕ ವಾಸದಲ್ಲಿದ್ದು, 5 ಬಾರಿ ಕೋವಿಡ್‌ ಟೆಸ್ಟ್‌ ಮಾಡಿಸಿದ್ದೇವೆ. ಈ ಎಲ್ಲ ವರದಿಯೂ ನೆಗೆಟಿವ್‌ ಬಂದಿದೆ. ಆದರೀಗ ಏಕಾಏಕಿ ಪಾಸಿಟಿವ್‌ ಬರಲು ಹೇಗೆ ಸಾಧ್ಯ…’ ಎಂದು ಪ್ರಶ್ನಿಸಿ ಮಥಿಯಾಸ್‌ ಬೋಯಿ ಬಿಡಬ್ಲ್ಯುಎಫ್ಗೆ ಪತ್ರ ಬರೆದಿದ್ದರು.

ಅದರಂತೆ ಪಾಸಿಟಿವ್‌ ಬಂದ ಆಟಗಾರರನ್ನು ಮತ್ತು ಸಿಬಂದಿಯನ್ನು ಮತ್ತೆ ಪರೀಕ್ಷೆ ನಡೆಸಲು ಬಿಡಬ್ಲ್ಯುಎಫ್ ತಿಳಿಸಿತ್ತು. ಕೂಟದ ಆಟರಂಭಕ್ಕೂ 5 ಗಂಟೆ ಮುನ್ನ ನಡೆಸಲಾದ ಕೋವಿಡ್‌ ಟೆಸ್ಟ್‌ ನಲ್ಲಿ ಇವರೆಲ್ಲರ ವರದಿ ನೆಗೆಟಿವ್‌ ಬಂದಿದೆ.

Advertisement

ಶ್ರೀಕಾಂತ್‌, ಕಶ್ಯಪ್‌ ಪರಾಭವ
ಕೆ.ಶ್ರೀಕಾಂತ್‌, ಪಿ. ಕಶ್ಯಪ್‌ ಮೊದಲ ಸುತ್ತಿನ ಪಂದ್ಯದಲ್ಲೇ ಪರಾಭವಗೊಂಡಿದ್ದಾರೆ. 20 ವರ್ಷ ಐರ್ಲೆಂಡ್‌ ಆಟಗಾರ ಎನ್‌ಹ್ಯಾತ್‌ ಎನ್‌ಗುಯೆನ್‌ ವಿರುದ್ಧ ಶ್ರೀಕಾಂತ್‌ 10-21, 21-15, 12-21 ಅಂಕಗಳಿಂದ ಸೋತರು. ಕಶ್ಯಪ್‌ ವಿಶ್ವ ನಂ.1 ಆಟಗಾರ ಕೆಂಟೊ ಮೊಮೊಟ ವಿರುದ್ಧ 13-21, 20-22 ಅಂತರದಿಂದ ಸೋಲನ್ನಪ್ಪಿದರು.

Advertisement

Udayavani is now on Telegram. Click here to join our channel and stay updated with the latest news.

Next