ಹೊಸದಿಲ್ಲಿ: ಚೀನದ ಸೇನೆಯು ಈಗ ತನ್ನಲ್ಲಿ ಹಿಂದಿ ಭಾಷೆ ಗೊತ್ತಿರುವಂಥ, ಭಾರತದವರಲ್ಲದ ವ್ಯಕ್ತಿಗಳನ್ನು ತನ್ನಲ್ಲಿ ಸೇರ್ಪಡೆಗೊಳಿಸಲು ಮುಂದಾಗಿದೆ.
ಅದಕ್ಕಾಗಿ ಟಿಬೆಟ್ ಅಟೋನಮಸ್ ಪ್ರಾಂತ(ಟಿಎಆರ್) ಹಾಗೂ ನೇಪಾಲದಲ್ಲಿ ಸೂಕ್ತ ವ್ಯಕ್ತಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ. ಚೀನ ಸೇನೆಯ ಅಧಿಕಾರಿಗಳು ಈ ಎರಡೂ ಪ್ರಾಂತಗಳ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ಹಿಂದಿ ಬಲ್ಲಂಥ ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ಮೂಲ ಗಳು ತಿಳಿಸಿವೆ.
ಚೀನ ಸೇನೆ ಯ ವೆಸ್ಟರ್ನ್ ಥಿಯೇಟರ್ ಕಮಾಂಡ್‌ಗೆ ಈ ಜವಾಬ್ದಾರಿ ವಹಿಸಲಾಗಿದ್ದು, ನೇಮಕಾತಿ ಬಹುತೇಕ ಪೂರ್ಣಗೊಂಡಿದೆ. ಅವರೆಲ್ಲರಿಗೂ ಭಾರತ- ಚೀನ ಗಡಿ ರೇಖೆಯ ಬಳಿ ಉದ್ಯೋಗ ಎಂದು ಹೇಳಲಾಗಿದೆ.
ಇತ್ತೀಚೆಗೆ, ಭಾರತೀಯ ಸೇನೆ ಕೂಡ ಚೀನೀ ಭಾಷೆ ಗೊತ್ತಿರುವ ಭಾರತದ ಯುವಕರನ್ನು ನೇಮಿಸಿಕೊಂಡಿದೆ. ಅಲ್ಲದೆ, “ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ಬೆಂಗಳೂರು ಮೂಲದ ಕಂಪೆನಿಯೊಂದು ವಿಶಿಷ್ಟ ಟ್ಯಾಬ್ ಮಾದರಿಯ ಸಾಮಗ್ರಿ ತಯಾರಿಸಿದ್ದು, ಅದು ಗಡಿಯಲ್ಲಿ ಚೀನೀ ಸೈನಿಕರ ಮಾತನ್ನು ಸೆರೆಹಿಡಿದು ಅದನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ, ತನ್ನ ಎಲ್‌ಸಿಡಿ ಪರದೆ ಮೇಲೆ ಬಿತ್ತರಿಸುತ್ತದೆ.