Advertisement

ಅಧ್ಯಕ್ಷನಾಗಿ ಎಲ್ಲಾ ಜಿಲ್ಲಾ ಪ್ರವಾಸ: ಡಿ.ಕೆ.ಶಿವಕುಮಾರ್

03:46 PM Feb 07, 2022 | Team Udayavani |

ಪಡುಬಿದ್ರಿ:  ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಿಷ್ಟಗೊಳಿಸಲು ಕಾಂಗ್ರೆಸ್ ಸದಸ್ಯತ್ವ ಅಭಿಯಾನವನ್ನು ಆರಂಭಿಸಲಾಗಿದೆ. ಈ ಕುರಿತಾಗಿ ಎಲ್ಲಾ ಜಿಲ್ಲಾ ಪ್ರವಾಸವನ್ನು ತಾನು ಕೈಗೊಳುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.

Advertisement

ಅವರು ಎರ್ಮಾಳಿನ ರಾಜೀವ್ ಗಾಂಧಿ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಲಾದ ಡಿಜಿಟಲ್ ಸದಸ್ಯತ್ವ ಅಭಿಯಾನ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಆ ಬಳಿಕದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ದೇಶವು ಕಂಟಕವನ್ನು ಎದುರಿಸುತ್ತಿದೆ. ಉದ್ಯಮಗಳು ನೆಲಕಚ್ಚಿವೆ. ಕೊರೋನೋತ್ತರ ಪರಿಹಾರಗಳು ಜನರಿಗೆ ತಲುಪಿಲ್ಲ. ಹಾಗಾಗಿ ಈ ದೇಶಕ್ಕೆ ಸ್ವಾತಂತ್ರಯವನ್ನು ದೊರಕಿಸಿಕೊಟ್ಟ ಕಾಂಗ್ರೆಸ್ ನತ್ತ ಜನರು ತಮ್ಮ ಒಲವನ್ನು ತೋರಿಸುತ್ತಿರುವರು ಎಂದು ಡಿಕೆಶಿ ತಿಳಿಸಿದರು.

ಹಿಜಾಬ್ ಬಗೆಗಿನ ಪತ್ರಕರ್ತರ ಪ್ರಶ್ನೆಗೆ ವಿಷಯವು ನ್ಯಾಯಾಲಯದ ಮುಂದಿರುವ ಕಾರಣ ಹೆಚ್ಚೇನೂ ಪ್ರಸ್ತಾವಿಸಲಾರೆ. ಪಕ್ಷದ ರಾಷ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಅಭಿಪ್ರಾಯವೇ ತನ್ನದು ಎಂದರು.

Advertisement

ಬಿಜೆಪಿ ತನಗೆ ಬೇಕಾದಲ್ಲಿ, ಬೇಕಾದಾಗಲಷ್ಟೇ ಚುನಾವಣೆಗಳನ್ನು ನಡೆಸುತ್ತಿದೆ. ಚುನಾವಣೆ ಬಳಿಕ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಬಗೆಗೂ ಅವರು ಚಿಂತಿಸರು. ಅವರ ಅನುಕೂಲಕರ ವಾತಾವರಣವನ್ನೇ ಅವರು ಎದುರುನೋಡುತ್ತಾರೆ. ಅವಧಿ ಮುಗಿದರೂ ಚಿಕಮಗಳೂರು, ಗುಲ್ಬರ್ಗಾ ಮತ್ತು ಬಳ್ಳಾರಿಗಳ ಸ್ಥಳೀಯಾಡಳಿತ ಚುನಾವಣೆಗಳು ಇನ್ನೂ ನಡೆದಿಲ್ಲ ಎಂದರು.

ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್,  ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ದ. ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಎಂ. ಎ ಗಫೂರ್, ಮಾಜಿ ಉಪ ಸಭಾಪತಿ ಬಿ. ಎಲ್. ಶಂಕರ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next