Advertisement

ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್‌ ಪಾದಯಾತ್ರೆ : ಧ್ರುವನಾರಾಯಣ

01:18 AM Jun 25, 2022 | Team Udayavani |

ಉಡುಪಿ: ಸ್ವಾತಂತ್ರ್ಯದ 75ನೇ ವರ್ಷಾಚರಣೆ ಪ್ರಯುಕ್ತ “ಭಾರತ್‌ ಜೋಡೋ’ ಕಾರ್ಯಕ್ರಮದಡಿ ಪ್ರತೀ ಜಿಲ್ಲೆಯಲ್ಲೂ 75 ಕಿ.ಮೀ. ಪಾದಯಾತ್ರೆಯನ್ನು ಆ. 15 ರೊಳಗೆ ಹಮ್ಮಿಕೊಳ್ಳುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ತಿಳಿಸಿದ್ದಾರೆ.

Advertisement

ಕಾಂಗ್ರೆಸ್‌ನ ನವ ಸಂಕಲ್ಪ ಸಭೆಯಲ್ಲಿ ಆರು ಸಮಿತಿಗಳನ್ನು ರಚಿಸಿ, ಯುವ ಜನರನ್ನು ಪಕ್ಷಕ್ಕೆ ಕರೆತರುವುದು, ಮಹಿಳಾ ಸಶಕ್ತೀಕರಣ, ರೈತರ ಸಮಸ್ಯೆ, ಸಹಕಾರಿಗಳ ಸಮಸ್ಯೆ, ಪಕ್ಷ ಸಂಘಟನೆ ಮತ್ತು ಭಿನ್ನಮತ ಶಮನ ಬಗ್ಗೆ ಚರ್ಚಿಸಿ ಸಲಹೆಗಳನ್ನು ಕೆಪಿಸಿಸಿಗೆ ಕಳುಹಿಸಲಾಗುತ್ತದೆೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರಕಾರಗಳ ವೈಫ‌ಲ್ಯ ಗಳನ್ನು ಜನರ ಮುಂದಿಡಲಿದ್ದೇವೆ. ಅಗ್ನಿಪಥ ಮೂಲಕ ಸೈನಿಕರ ಆತ್ಮಸ್ಥೈರ್ಯ ಕುಗ್ಗಿಸಲು ಕೇಂದ್ರ ಸರಕಾರ ಹೊರಟಿದೆ. ಇದನ್ನು ವಿರೋಧಿಸಿ ಪ್ರತೀ ವಿಧಾನಸಭೆ ವ್ಯಾಪ್ತಿಯಲ್ಲೂ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಇ.ಡಿ., ಸಿಬಿಐ, ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್‌ ನಾಯಕರನ್ನು ದಮನ ಮಾಡಲು ಸಾಧ್ಯವಿಲ್ಲ ಎಂದರು.

ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಡಾ| ಅಂಬೇಡ್ಕರ್‌, ಕುವೆಂಪು, ನಾರಾಯಣಗುರು, ಭಗತ್‌ಸಿಂಗ್‌, ಕನಕದಾಸರು ಸಹಿತ ಅನೇಕರಿಗೆ ಅವಮಾನ ಮಾಡಿದ್ದಾರೆ. ಬಿಜೆಪಿಗೆ ಸಾಮಾ ಜಿಕ ನ್ಯಾಯ ಬೇಕಿಲ್ಲ. ಸರಕಾರದ ಭ್ರಷ್ಟಾಚಾರವನ್ನು ಮರೆಮಾಚಲು ಇವೆೆಲ್ಲವನ್ನು ಅಸ್ತ್ರವಾಗಿ ಬಳಸುತ್ತಿ ದ್ದಾರೆ ಎಂದರು.

ಆಪರೇಶನ್‌ ಕಮಲದ ಮೂಲಕ ಮಹಾರಾಷ್ಟ್ರದಲ್ಲೂ ಬಿಜೆಪಿ ಸರಕಾರ ರಚನೆಗೆ ಮುಂದಾಗುತ್ತಿದೆ. ಕರ್ನಾಟಕದಿಂದಲೇ ಈ ಪ್ರವೃತ್ತಿ ಆರಂಭ ವಾಗಿದೆ. ಗುಜರಾತ್‌ ಮಾಡೆಲ್‌ ಭ್ರಷ್ಟಾಚಾರ ದಲ್ಲಿ ಮಾತ್ರ; ಅಭಿವೃದ್ಧಿಯಲ್ಲಲ್ಲ. ಎಲ್ಲದಕ್ಕೂ ಕೊನೆ ಇದ್ದೇ ಇರುತ್ತದೆ. ಜನರೇ ಮುಂದೆ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

Advertisement

ಕಾಂಗ್ರೆಸ್‌ನಲ್ಲಿ ಯುವಕರಿಗೆ ಆದ್ಯತೆ ನೀಡ ಲಾಗುತ್ತಿದೆ. ಪದಾಧಿಕಾರಿಗಳ ಹುದ್ದೆಯಲ್ಲಿ ಶೇ. 50ರಷ್ಟನ್ನು 50 ವರ್ಷಕ್ಕಿಂತ ಕೆಳಗಿನವರಿಗೆ ಮೀಸಲಿಡಲು ನಿರ್ಧಾರವಾಗಿದೆ. ಸಂಘಟ ನೆಯ ಮೂಲಕ ಪಕ್ಷಕ್ಕೆ ಶಕ್ತಿ ತುಂಬಲಾಗುತ್ತಿದೆ. ಸದಸ್ಯತ್ವ ಅಭಿಯಾನ ಚೆನ್ನಾಗಿ ನಡೆಯುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ನೋಂದಣಿಗೆ ಕಾಲಾವಕಾಶ ವಿಸ್ತರಿಸಿದ್ದೇವೆ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಮಾಜಿ ಸಚಿವರಾದ ವಿನಯ ಕುಮಾರ್‌ ಸೊರಕೆ, ಅಭಯಚಂದ್ರ ಜೈನ್‌, ಜಿಲ್ಲಾ ಕಾಂಗ್ರೆಸ್‌ ಉಸ್ತುವಾರಿ ಮಮತಾ ಗಟ್ಟಿ, ಪ್ರಮುಖರಾದ ಎಂ.ಎ. ಗಫೂರ್, ಪ್ರಸಾದ್‌ರಾಜ್‌ ಕಾಂಚನ್‌, ದೀಪಕ್‌ ಕೋಟ್ಯಾನ್‌, ಸೌರಭ್‌ ಬಲ್ಲಾಳ್‌, ಅಣ್ಣಯ್ಯ ಸೇರಿಗಾರ್‌,
ಭಾಸ್ಕರ್‌ ರಾವ್‌ ಕಿದಿಯೂರು ಉಪಸ್ಥಿತರಿದ್ದರು.

ಯೋಧರಂತೆ ಬೂತ್‌ ಕಾಯಬೇಕು: ಮೊಯ್ಲಿ
ಅವಿಭಜಿತ ದ.ಕ. ಜಿಲ್ಲೆ ಕಾಂಗ್ರೆಸ್‌ನ ಭದ್ರ ಕೋಟೆಯಾಗಿತ್ತು. 15 ಕ್ಷೇತ್ರ ಸಹಿತ ಉಡುಪಿ-ಚಿಕ್ಕಮಗಳೂರು, ದ.ಕ. ಲೋಕಸಭೆ ಕ್ಷೇತ್ರವನ್ನು ಗೆದ್ದಿ ದ್ದೆವು. 32 ಜಿ.ಪಂ., 2 ಜಿಲ್ಲೆಯ ಎಲ್ಲ ತಾ.ಪಂ.ಗಳನ್ನೂ ಗೆದ್ದಿದ್ದೆವು. ಇದು ಕಾಂಗ್ರೆಸ್‌ ಪಕ್ಷದ ಇತಿಹಾಸ. ಇದೇ ಭವಿಷ್ಯಕ್ಕೆ ಮುನ್ನುಡಿಯಾಗಲಿದೆ.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಎಲ್ಲ ಕ್ಷೇತ್ರ ಗಳಲ್ಲೂ ಗೆಲ್ಲುವಂತೆ ಪಕ್ಷ ಸಂಘಟನೆ ಆಗಬೇಕಿದೆ. ಎಲ್ಲ ಬೂತ್‌ಗಳಲ್ಲಿ ಪಕ್ಷದ ಸಿದ್ಧಾಂತಕ್ಕೆ ಬದ್ಧರಾದವರನ್ನೇ ನೇಮಿಸಬೇಕು. ಯುದ್ಧ, ಗಲಭೆ ಏನೇ ನಡೆದರೂ ಕಾರ್ಯಕರ್ತರು ಯೋಧರಂತೆ ಬೂತ್‌ಗಳನ್ನು ಕಾಯಬೇಕೆಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next